For Quick Alerts
ALLOW NOTIFICATIONS  
For Daily Alerts
 

29 ರನ್ ಬಾರಿಸುತ್ತಲೇ ಸ್ಮಿತ್ ದಾಖಲೆ

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಶುಕ್ರವಾರದಿಂದ ಬಾಕ್ಸಿಂಗ್‌ ಡೇ ಟೆಸ್ಟ್ ಆರಂಭವಾಗಲಿದೆ. ಈಗಾಗಲೇ ಸರಣಿಯಲ್ಲಿ ಸೋಲು ಕಂಡಿರುವ ಇಂಗ್ಲೆಂಡ್‌, ನಾಲ್ಕನೇ ಪಂದ್ಯ ಗೆದ್ದು ಪುಟಿದೇಳುವ ವಿಶ್ವಾಸ ಹೊಂದಿದೆ. ಆತಿಥೇಯ ತಂಡ ಈ ಪಂದ್ಯವನ್ನು ಗೆದ್ದು ಅಜೇಯ ಓಟವನ್ನು ಮುನ್ನಡೆಸುವ ಪ್ಲ್ಯಾನ್ ಮಾಡಿಕೊಂಡಿದೆ. ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸ್ಟೀವನ್ ಸ್ಮಿತ್ ಮುನ್ನಡೆಸಲಿದ್ದಾರೆ. ಆಸೀಸ್‌ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಸರಣಿಯ ಉಳಿದ ಪಂದ್ಯಗಳಲ್ಲಿ ತಂಡದ ಭಾಗವಾಗಿಲ್ಲ. ಹೀಗಾಗಿ ಸ್ಮಿತ್‌ ಹೆಗಲ ಮೇಲೆ ಮತ್ತೊಮ್ಮೆ ದೊಡ್ಡ ಜವಾಬ್ದಾರಿ ಬಿದ್ದಿದೆ.

ಪ್ರಸಕ್ತ ಆಶಸ್‌ ಟೆಸ್ಟ್‌ ಸರಣಿಯಲ್ಲಿ ಸ್ಟೀವನ್ ಸ್ಮಿತ್‌ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಸ್ಮಿತ್‌ 29 ರನ್‌ ಬಾರಿಸುವಲ್ಲಿ ಯಶಸ್ವಿಯಾದರೆ, ದೊಡ್ಡ ದಾಖಲೆಗೆ ತಮ್ಮ ಹೆಸರನ್ನು ನಮೂದಿಸಲಿದ್ದಾರೆ. ಈ ಮೂಲಕ ಇವರು ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಅಲನ್ ಬಾರ್ಡರ್‌ ಅವರ ಸಾಧನೆಯನ್ನು ಮೀರಿ ನಿಲ್ಲುವ ಅವಕಾಶವನ್ನು ಹೊಂದಿದ್ದಾರೆ. ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ನಲ್ಲಿ ಆಸೀಸ್ ಪರ ಎರಡನೇ ಗರಿಷ್ಠ ರನ್‌ ಕಲೆ ಹಾಕಲು ಸ್ಮಿತ್‌ಗೆ ಇನ್ನು 29 ರನ್‌ ಅವಶ್ಯಕತೆ ಇದೆ.

Steve Smith Eyes Historic Milestone Set to Overtake Allan Border in 4th Ashes Test

ಸ್ಮಿತ್‌ ಈಗಾಗಲೇ ಇಂಗ್ಲೆಂಡ್‌ ವಿರುದ್ಧ ಆಡಿದ 39 ಟೆಸ್ಟ್‌ ಪಂದ್ಯಗಳ 70 ಇನ್ನಿಂಗ್ಸ್‌ಗಳಲ್ಲಿ 55.87 ಸರಾಸರಿಯಲ್ಲಿ 3520 ರನ್ ಸಿಡಿಸಿದ್ದಾರೆ. ಇದರಲ್ಲಿ 12 ಶತಕಗಳು ಸಹ ಸೇರಿವೆ. ಇನ್ನು ಆಸೀಸ್‌ ದಿಗ್ಗಜ ಆಟಗಾರ ಅಲನ್ ಬಾರ್ಡರ್‌ 82 ಇನ್ನಿಂಗ್ಸ್‌ಗಳಲ್ಲಿ 56.31 ಸರಾಸರಿಯಲ್ಲಿ 3548 ಕಲೆ ಹಾಕಿದ್ದು, ಇದರಲ್ಲಿ 8 ಶತಕಗಳು ಸೇರಿವೆ. ಬಾರ್ಡರ್ ಅವರ ದಾಖಲೆ ಅಳಿಸಿ ಹಾಕಲು ಸ್ಮಿತ್‌ಗೆ ಇನ್ನು 29 ರನ್‌ ಅವಶ್ಯಕತೆ ಇದೆ.


ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ಸ್‌

ಡಾನ್ ಬ್ರಾಡ್ಮನ್, ಆಸ್ಟ್ರೇಲಿಯಾ, 5028
ಅಲನ್ ಬಾರ್ಡರ್ ಆಸ್ಟ್ರೇಲಿಯಾ, 3548
ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ, 3520
ಗ್ಯಾರಿ ಸೋಬರ್ಸ್, ವೆಸ್ಟ್‌ ಇಂಡೀಸ್‌, 3214
ಸ್ಟೀವ್ ವಾ, ಆಸ್ಟ್ರೇಲಿಯಾ, 3200

ಮೆಲ್ಬೋರ್ನ್‌ನಲ್ಲಿ ನಡೆಯಲಿರುವ 4ನೇ ಟೆಸ್ಟ್‌ ಪಂದ್ಯದಲ್ಲಿ ಸ್ಮಿತ್‌ 117 ರನ್‌ ಬಾರಿಸಿದಲ್ಲಿ ಮತ್ತೊಂದು ದಾಖಲೆ ಬರೆಯಬಹುದಾಗಿದೆ. ಆಶಸ್‌ ಸರಣಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಎರಡನೇ ಆಟಗಾರ ಎಂಬ ಖ್ಯಾತಿ ತಮ್ಮದಾಗಿಸಿಕೊಳ್ಳಲಿದ್ದಾರೆ. ಇಂಗ್ಲೆಂಡ್‌ ಮಾಜಿ ಬ್ಯಾಟರ್‌ ಜ್ಯಾಕ್ ಹಾಬ್ಸ್ ಎರಡನೇ ಸ್ಥಾನದಲ್ಲಿದ್ದು, ಇವರು ಆಡಿದ 41 ಟೆಸ್ಟ್‌ ಪಂದ್ಯಗಳ 71 ಇನಿಂಗ್ಸ್‌ಗಳಲ್ಲಿ 3636 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲೂ ಮೊದಲು ಸ್ಥಾನವನ್ನು ಆಸ್ಟ್ರೇಲಿಯಾದ ದಿಗ್ಗಜ ಡಾನ್ ಬ್ರಾಡ್ಮನ್ ಹೊಂದಿದ್ದಾರೆ. ಇವರು ಆಡಿದ 37 ಟೆಸ್ಟ್‌ಗಳ 63 ಇನಿಂಗ್ಸ್‌ಗಳಲ್ಲಿ 5028 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 19 ಶತಕ ಹಾಗೂ 12 ಅರ್ಧಶತಕಗಳು ಸೇರಿವೆ.

Story first published: Thursday, December 25, 2025, 23:21 [IST]
Other articles published on Dec 25, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+