ಭಾರತ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಒಂದು ಶತಕ ಗಳಿಸಿದ್ದು ಬಿಟ್ಟರೆ, ಅವರ ಪ್ರದರ್ಶನ ಹೇಳಿಕೊಳ್ಳುವಂತಿರಲಿಲ್ಲ. ಸರಣಿಯುದ್ದಕ್ಕೂ ಅವರ ಪ್ರದರ್ಶನ ಏರಿಳಿತಗಳಿಂದ ಕೂಡಿತ್ತು. ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಸ್ಟೀವ್ ಸ್ಮಿತ್ ಅವರಿಗೆ ದಾಖಲೆ ಸೃಷ್ಟಿಸುವ ಅವಕಾಶವಿತ್ತು. ಆದರೆ ಈ ಅವಕಾಶವನ್ನು ಸ್ವೀವ್ ಸ್ಮಿತ್ ಕಳೆದುಕೊಂಡಿದ್ದಾರೆ. ಇದೀಗ ದಾಖಲೆ ಸೃಷ್ಟಿಸುವ ಅವಕಾಶವನ್ನು ಕಳೆದುಕೊಳ್ಳಲು ಕಾರಣವೇನು ಎಂಬುದನ್ನು ಸ್ಮಿತ್ ವಿವರಿಸಿದ್ದಾರೆ.
ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 10000 ಟೆಸ್ಟ್ ರನ್‌ಗಳ ಗಡಿಯನ್ನು ಮುಟ್ಟಲು ಸ್ಟೀವ್ ಸ್ಮಿತ್ ಸಜ್ಜಾಗಿದ್ದರು. ಆದರೆ ಅವರಿಂದ 10000 ಟೆಸ್ಟ್ ರನ್‌ಗಳನ್ನು ಪೂರೈಸಲು ಸಾಧ್ಯುವಾಗಲಿಲ್ಲ. ಕೇವಲ
1 ರನ್‌ನಿಂದ ದಾಖಲೆ ಮಿಸ್ ಮಾಡಿರುವ ಅವರು ಅವರು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 10000 ರನ್ ಬಾರಿಸಲು ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಸ್ಮಿತ್‌ಗೆ 38 ರನ್‌ಗಳ ಅಗತ್ಯವಿತ್ತು.

ಭಾರತ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಟೀವ್ ಸ್ಮಿತ್ 33 ರನ್‌ಗಳಿಗೆ ಔಟಾದರು. ನಂತರ ಅವರು 10000 ಟೆಸ್ಟ್ ರನ್‌ಗಳನ್ನು ಪೂರೈಸಲು ಐದು ರನ್‌ಗಳ ಅಂತರದಲ್ಲಿ ಹಿಂದೆ ಉಳಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 4 ರನ್ ಗಳಿಸಿದ್ದಾಗ ಪ್ರಸಿದ್ಧ್ ಕೃಷ್ಣ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡರು. ಹೀಗಾಗಿ ಅವರು ಕೇವಲ ಒಂದು ರನ್‌ನಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ 10000 ರನ್‌ಗಳನ್ನು ಪೂರೈಸುವ ದಾಖಲೆಯನ್ನು ಮಿಸ್ ಮಾಡಿಕೊಂಡರು. ಆಸ್ಟ್ರೇಲಿಯಾದ 3-1 ಅಂತರದ ಸರಣಿ ಗೆಲುವಿನ ಸಂಭ್ರಮದಲ್ಲಿರುವಾಗಲ್ಲೂ ಈ ನೋವು ಸ್ಮಿತ್‌ಗೆ ಕಾಡುತ್ತಿದೆ.
ದಾಖಲೆ ಸೃಷ್ಟಿಸುವ ಅವಕಾಶವನ್ನು ಕಳೆದುಕೊಂಡಿರುವ ಬಗ್ಗೆ ಮಾತನಾಡಿದ ಸ್ಮಿತ್, 'ನನ್ನನ್ನು ಸರಪಳಿಯಿಂದ ಕಟ್ಟಿ ಹಾಕಿದಂತೆ ಭಾಸವಾಗುತ್ತಿದೆ. ನಾನು ತುಂಬಾ ಅಪಾಯಕಾರಿ ಚೆಂಡಿನಲ್ಲಿ ಔಟಾದೆ, ಚೆಂಡು ಇದ್ದಕ್ಕಿದ್ದಂತೆ ಸಾಕಷ್ಟು ಬೌನ್ಸ್ ಆಯಿತು. ಆದರೆ ಪಂದ್ಯದಿಂದ ನಾವು ಬಯಸಿದ ಫಲಿತಾಂಶವನ್ನು ಪಡೆದುಕೊಂಡಿದ್ದೇವೆ ಎಂಬುದು ತೃಪ್ತಿಯಿದೆ. ಇದು ಸಿಡ್ನಿಯ ಅತ್ಯಂತ ಕಠಿಣ ಪಿಚ್ ಆಗಿತ್ತು. ಚೆಂಡು ಸೀಮ್‌ನಿಂದ ಸಹಾಯ ಪಡೆದು ಸಾಕಷ್ಟು ಸ್ವಿಂಗ್ ಆಗುತ್ತಿತ್ತು. ನಾನು ಹಿಂದೆಂದೂ ಸಿಡ್ನಿಯಲ್ಲಿ ಈ ರೀತಿಯ ಪಿಚ್‌ನಲ್ಲಿ ಆಡಿರಲಿಲ್ಲ. ಇಲ್ಲಿ ಬ್ಯಾಟಿಂಗ್ ಮಾಡುವುದು ತುಂಬಾ ಕಷ್ಟಕರವಾಗಿತ್ತು ಎಂದು ಹೇಳಿದ್ದಾರೆ.
ನಾನು ಕ್ರಿಕೆಟ್ ಅನ್ನು ಪ್ರೀತಿಸುತ್ತೇನೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ರೋಚಕವಾಗಿತ್ತು. ಭಾರತವು ಬಲಿಷ್ಠ ತಂಡವಾಗಿದೆ. ನಾವು ಕೆಲವು ದೊಡ್ಡ ಸವಾಲುಗಳನ್ನು ಎದುರಿಸಬೇಕಾಯಿತು. ವಿಶೇಷವಾಗಿ ಬುಮ್ರಾ ಅವರ ಬೌಲಿಂಗ್‌ನಿಂದ. ಆದರೆ, ಕೊನೆಗೆ ಫಲಿತಾಂಶ ನಮ್ಮ ಪರವಾಗಿತ್ತು ಎಂದು ಸ್ಮಿತ್ ತಿಳಿಸಿದ್ದಾರೆ.