ಡೆಲ್ಲಿ ಕ್ಯಾಪಿಟಲ್ಸ್‌ಗೆ ಪ್ರಶಸ್ತಿ ಗೆದ್ದುಕೊಡುವ ಭರವಸೆ ವ್ಯಕ್ತಪಡಿಸಿದ ಸ್ಮಿತ್

ನವದೆಹಲಿ: ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ರನ್ನರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಸೇರಿಕೊಂಡಿದ್ದಾರೆ. ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಪ್ರಶಸ್ತಿ ಗೆಲ್ಲಲು ಮಂದಾಳತ್ವ ವಹಿಸುವ ಬಗ್ಗೆ ಸ್ಮಿತ್ ಭರವಸೆ ವ್ಯಕ್ತಪಡಿಸಿದ್ದಾರೆ.
2020ರ ಐಪಿಎಲ್ ಸೀಸನ್ ನಲ್ಲಿ ಸ್ಟೀವ್ ಸ್ಮಿತ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಆದರೆ ಸ್ಮಿತ್ ಅವರನ್ನು ರಾಯಲ್ಸ್ ರಿಲೀಸ್ ಮಾಡಿತ್ತು. ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನ ವೇಳೆ ಸ್ಮಿತ್ ಅವರನ್ನು 2.20 ಕೋ.ರೂ.ಗೆ ಡೆಲ್ಲಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.
'ಈ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಳ್ಳಲು ನಾನು ನಿಜಕ್ಕೂ ಉತ್ಸುಕನಾಗಿದ್ದೇನೆ. ಡೆಲ್ಲಿಯಲ್ಲಿ ಒಳ್ಳೆಯ ಆಟಗಾರರ ಪಡೆಯಿದೆ ಮತ್ತು ಒಳ್ಳೆಯ ಕೋಚ್ ಇದ್ದಾರೆ ಎಂದು ನಾನು ಭಾವಿಸುತ್ತೇನೆ. ತಂಡವನ್ನು ಇನ್ನೂ ಮುಂದಕ್ಕೆ ಕೊಂಡೊಯ್ದು ಅವಿಸ್ಮರಣೀಯ ನೆನಪುಗಳನ್ನು ಸೃಷ್ಠಿಸಲು ನಾನು ಕಾತರನಾಗಿದ್ದೇನೆ,' ಎಂದು ಸ್ಮಿತ್ ಹೇಳಿದ್ದಾರೆ.
ಶ್ರೇಯಸ್ ಅಯ್ಯರ್ ನಾಯಕತ್ವ ಡೆಲ್ಲಿ ಕ್ಯಾಪಿಟಲ್ಸ್ ಈಗ ನಿಜಕ್ಕೂ ಇನ್ನಷ್ಟು ಬಲಿಷ್ಠವಾಗಿದೆ. ಅಜಿಂಕ್ಯ ರಹಾನೆ, ಪೃಥ್ವಿ ಶಾ, ಶಿಮ್ರನ್ ಹೆಟ್ಮೈಯರ್, ಶಿಖರ್ ಧವನ್, ಅನ್ರಿಕ್ ಜಾಟ್ಜ್, ಕಾಗಿಸೊ ರಬಾಡ, ಸ್ಟೀವ್ ಸ್ಮಿತ್, ಆರ್ ಅಶ್ವಿನ್, ಮಾರ್ಕಸ್ ಸ್ಟೋಯ್ನಿಸ್, ರಿಷಭ್ ಪಂತ್, ಶ್ರೆಯಸ್ ಐಯ್ಯರ್ ಇಂಥ ಪ್ರತಿಭಾನ್ವಿತ ಸಾಕಷ್ಟು ಆಟಗಾರರಿದ್ದಾರೆ. ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಕೋಚ್ ಆಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications