For Quick Alerts
ALLOW NOTIFICATIONS  
For Daily Alerts
 

2ನೇ ಹಂತದ ಐಪಿಎಲ್ 2021ರ ಪಂದ್ಯಗಳಲ್ಲಿ ಸ್ಟೀವ್ ಸ್ಮಿತ್ ಆಡುತ್ತಿಲ್ಲ!

Steve Smith is all set to miss the IPL 2021 phase 2 in the UAE due to his elbow Injury
IPL ಗೆ ಕೈ ಕೊಟ್ಟ ಸ್ಟೀವ್ ಸ್ಮಿತ್ | Steve Smith | Oneindia Kannada

ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2ನೇ ಹಂತದ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್‌ಮನ್‌ ಸ್ಟೀವ್ ಸ್ಮಿತ್ ಆಡುತ್ತಿಲ್ಲ. ಗಾಯಕ್ಕೀಡಾಗಿರುವುದರಿಂದ ಸ್ಮಿತ್ ಐಪಿಎಲ್ ಇನ್ನುಳಿದ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.

ಮೊಣಕೈ ಗಾಯಕ್ಕೀಡಾಗಿರುವ ಸ್ಟೀವ್ ಸ್ಮಿತ್ ಐಪಿಎಲ್ 2021ರ ಇನ್ನುಳಿದ ಪಂದ್ಯಗಳಲ್ಲಿ ಆಡುತ್ತಿಲ್ಲ. 2020ರ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕರಾಗಿದ್ದ ಸ್ಮಿತ್, ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರಿಕೊಂಡಿದ್ದರು. ಆದರೆ ಈ ಬಾರಿ ಸ್ಮಿತ್ ನಡೆದ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನವೇನೂ ನೀಡಿರಲಿಲ್ಲ.

ಗಾಯ ಸುಧಾರಣೆ ನಿಧಾನವಾಗುತ್ತಿರುವುದರಿಂದ ಸದ್ಯ ವೆಸ್ಟ್‌ ಇಂಡೀಸ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಿಂದಲೂ ಸ್ಮಿತ್ ಹಿಂದೆ ಸರಿದಿದ್ದಾರೆ. ಸೆಪ್ಟೆಂಬರ್‌-ಅಕ್ಟೋಬರ್‌ನಲ್ಲಿ ನಡೆಯುವ ಐಪಿಎಲ್ 2ನೇ ಹಂತದ ಪಂದ್ಯಗಳಲ್ಲದೆ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲೂ ಸ್ಮಿತ್ ಆಡೋದು ಅನುಮಾನವಾಗಿದೆ. ಆದರೆ ಆ್ಯಷಸ್ ಸರಣಿ ವೇಳೆ ಸ್ಮಿತ್ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.

"ಈಗಿನಿಂದ ವಿಶ್ವಕಪ್‌ವರೆಗೆ ಇನ್ನೂ ಸ್ವಲ್ಪ ಕಾಲಾವಕಾಶವಿದೆ. ಈ ಕ್ಷಣದಲ್ಲಿ ನಾನು ಸರಿಯಿದ್ದೇನೆ. ಗಾಯ ನಿಧಾನವಾಗಿ ಗುಣವಾಗುತ್ತಿದೆ. ಆದರೆ ನಾನು ಚೆನ್ನಾಗಿದ್ದೇನೆ. ವಿಶ್ವಕಪ್‌ನಲ್ಲಿ ಆಡೋಕೆ ನಂಗತೂ ಇಷ್ಟವಿದೆ ಅನ್ನೋದನ್ನು ಮಾತ್ರ ನಾನು ಖಂಡಿತಾಗಿಯೂ ಹೇಳುತ್ತೇನೆ," ಎಂದು ಕ್ರಿಕೆಟ್.ಕಾಮ್.ಎಯು cricket.com.auಗೆ ಶುಕ್ರವಾರ ಸ್ಮಿತ್ ಹೇಳಿಕೊಂಡಿದ್ದರು.

Story first published: Saturday, July 3, 2021, 17:37 [IST]
Other articles published on Jul 3, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+