Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮತ್ತೆ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲು ಸ್ಟೀವ್ ಸ್ಮಿತ್ ಅರ್ಹನಲ್ಲ ಎಂದ ಮಾಜಿ ಕ್ರಿಕೆಟಿಗ

Steve Smith is not an ideal candidate to lead Australia again says Ian Chappell

ಆಸ್ಟ್ರೇಲಿಯಾ ತಂಡವನ್ನು ಯಾರು ಮುನ್ನಡೆಸಬೇಕು ಎಂಬ ವಿಷಯದ ಕುರಿತು ದಿನದಿಂದ ದಿನಕ್ಕೆ ಚರ್ಚೆಗಳು ಹೆಚ್ಚಾಗತೊಡಗಿವೆ. ಕೆಲ ದಿನಗಳ ಹಿಂದಷ್ಟೆ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಮತ್ತೆ ಆಸ್ಟ್ರೇಲಿಯಾ ತಂಡವನ್ನು ತಾನು ಮುನ್ನಡೆಸಲು ಸಿದ್ಧ ಎಂಬುದನ್ನು ಹೇಳಿಕೊಂಡಿದ್ದರು. ಅವಕಾಶ ಸಿಕ್ಕರೆ ಯಶಸ್ವಿಯಾಗಿ ಆಸ್ಟ್ರೇಲಿಯಾ ತಂಡವನ್ನು ಮತ್ತೆ ಮುನ್ನಡೆಸುವುದಾಗಿ ಸ್ಟೀವ್ ಸ್ಮಿತ್ ಮತ್ತೆ ಆಸ್ಟ್ರೇಲಿಯಾ ತಂಡದ ನಾಯಕನಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

ಪ್ರಸ್ತುತ ಆಸ್ಟ್ರೇಲಿಯಾ ಟೆಸ್ಟ್ ತಂಡವನ್ನು ಟಿಮ್ ಪೇನ್ ಮುನ್ನಡೆಸುತ್ತಿದ್ದರೆ, ಟಿ ಟ್ವೆಂಟಿ ಮತ್ತು ಏಕದಿನ ತಂಡಗಳ ನಾಯಕನಾಗಿ ಆ್ಯರನ್ ಫಿಂಚ್ ಆಸ್ಟ್ರೇಲಿಯಾವನ್ನು ಮುನ್ನಡೆಸುತ್ತಿದ್ದಾರೆ. ಇದೀಗ ಮತ್ತೆ ಮರಳು ಕಾಗದ ವಿವಾದದ ಚರ್ಚೆಗಳು ಆರಂಭಗೊಂಡಿದ್ದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಇಯಾನ್ ಚಾಪೆಲ್ ಸ್ಟೀವ್ ಸ್ಮಿತ್ ಪುನಃ ಆಸ್ಟ್ರೇಲಿಯಾ ತಂಡದ ನಾಯಕನಾಗುವ ವಿಷಯದ ಕುರಿತು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

ಸ್ಟೀವ್ ಸ್ಮಿತ್ ನಾಯಕನಾಗುವ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಇಯಾನ್ ಚಾಪೆಲ್ ಯಾವುದೇ ಕಾರಣಕ್ಕೂ ಸ್ಟೀವ್ ಸ್ಮಿತ್‌ಗೆ ಆಸ್ಟ್ರೇಲಿಯಾ ತಂಡದ ನಾಯಕನಾಗುವ ಅವಕಾಶವನ್ನು ನೀಡಲೇಬಾರದು ಎಂದಿದ್ದಾರೆ. 'ಸದ್ಯ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲು ಸ್ಟೀವ್ ಸ್ಮಿತ್ ಸರಿಯಾದ ವ್ಯಕ್ತಿಯಲ್ಲ, ಪ್ರಸ್ತುತ ಆಸ್ಟ್ರೇಲಿಯಾ ತಂಡ ಭವಿಷ್ಯದ ಕಡೆ ಚಿಂತಿಸಬೇಕೇ ಹೊರತು ಸ್ಟೀವ್ ಸ್ಮಿತ್‌ಗೆ ನಾಯಕ ಸ್ಥಾನವನ್ನು ನೀಡುವುದರ ಮೂಲಕ ಹಿಂದೆ ಹೋಗಬಾರದು' ಎಂದು ಹೇಳುವುದರ ಮೂಲಕ ಇಯಾನ್ ಚಾಪೆಲ್ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ನಾಯಕನಾಗಬಾರದು ಎಂದು ನೇರವಾಗಿ ತಿಳಿಸಿದ್ದಾರೆ.

Story first published: Monday, May 17, 2021, 17:08 [IST]
Other articles published on May 17, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+