For Quick Alerts
ALLOW NOTIFICATIONS  
For Daily Alerts
 

Steve Smith: ವಿರಾಟ್‌ಗಿಂತ ಮೊದಲು ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಸೃಷ್ಟಿಸಲು ಸ್ಮಿತ್ ಸಜ್ಜು

ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಈ ಟೆಸ್ಟ್ ಸರಣಿ ಗೆಲುವಿಗಾಗಿ ಉಭಯ ತಂಡಗಳು ರಣತಂತ್ರ ರೂಪಿಸುತ್ತಿವೆ. ಜೊತೆಗೆ ಉಭತ ತಂಡಗಳು ಹಲವು ದಾಖಲೆಗಳನ್ನು ಸೃಷ್ಟಿಸುವ ತವಕದಲ್ಲಿದ್ದಾರೆ. ಅದರಲ್ಲಿ ಆಸ್ಟ್ರೇಲಿಯಾದ ಕ್ಲಾಸಿಕ್ ಬ್ಯಾಟರ್ ಸ್ಟೀವ್ ಸ್ಮಿತ್ ಅವರು ತಮ್ಮ ಟೆಸ್ಟ್ ವೃತ್ತಿಜೀವನ ಹೊಸ ಮೈಲಿಗಲ್ಲು ತಲುಪಲು ಸಜ್ಜಾಗಿದ್ದಾರೆ. ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್‌ ಕೊಹ್ಲಿಗಿಂತ ಮೊದಲು ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಟೀವ್ ಸ್ಮಿತ್ ವಿಶೇಷ ದಾಖಲೆ ಮಾಡಲು ತಯಾರಾಗಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಆಧುನಿಕ ಕ್ರಿಕೆಟ್‌ನ ದಿಗ್ಗಜ ಬ್ಯಾಟರ್‌ಗಳು. ಈ ಇಬ್ಬರು ಮೂರು ಮಾದರಿ ಕ್ರಿಕೆಟ್‌ನಲ್ಲಿ ಹಲವು ಸಾಧನೆಗಳಿಗೆ ಹೆಸರಾಗಿದ್ದಾರೆ. ಹಾಗೆಯೇ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ಮತ್ತು ಸ್ಮಿತ್ ನಡುವೆ ಪೈಪೋಟಿ ಕಂಡು ಬಂದಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿಯೂ ಈ ಇಬ್ಬರ ಬ್ಯಾಟಿಂಗ್ ಪ್ರದರ್ಶನದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಬಾರಿಯ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಸ್ಮಿತ್ ಹೊಸ ದಾಖಲೆಯ ಹೊಸ್ತಿಯಲ್ಲಿದ್ದಾರೆ.

Steve Smith is set to create special record in Test cricket before Virat Kohli

ಟೆಸ್ಟ್ ಕ್ರಿಕೆಟ್‌ನಲ್ಲಿ 10000 ರನ್‌ಗಳನ್ನು ಪೂರೈಸುವ ಅದ್ಭುತ ಅವಕಾಶವನ್ನು ಸ್ಟೀವ್ ಸ್ಮಿತ್ ಹೊಂದಿದ್ದಾರೆ. ಸ್ಮಿತ್ ಈ ಬೃಹತ್ ಸಾಧನೆಯಿಂದ ದೂರವಿಲ್ಲ. ಭಾರತ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸ್ಮಿತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರೆ, ಸುಲಭವಾಗಿ 10000 ರನ್‌ಗಳನ್ನು ಪೂರೈಸಬಹುದು. ವಿರಾಟ್ ಕೊಹ್ಲಿಗಿಂತ ಮೊದಲು ಸ್ಮಿತ್ ಈ ದಾಖಲೆ ಮಾಡಲಿದ್ದಾರೆ. ಏಕೆಂದರೆ ಕೊಹ್ಲಿ ಇನ್ನೂ 10000 ಟೆಸ್ಟ್ ರನ್‌ಗಳನ್ನು ಪೂರೈಸಲು ದೂರದಲ್ಲಿದ್ದಾರೆ.

ಸ್ಟೀವ್ ಸ್ಮಿತ್ ಪ್ರಸ್ತುತ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿಯೂ ತಮ್ಮ ಫಾರ್ಮ್‌ ಅನ್ನು ಮುಂದುವರೆಸಬಹುದು. ಸ್ಮಿತ್ ಇದುವರೆಗೂ ಆಡಿದ 109 ಟೆಸ್ಟ್ ಪಂದ್ಯಗಳಲ್ಲಿ 9685 ರನ್ ಗಳಿಸಿದ್ದಾರೆ. ಇದರಲ್ಲಿ 32 ಶತಕಗಳು ಮತ್ತು 41 ಅರ್ಧ ಶತಕಗಳು ಸೇರಿವೆ. ವಿರಾಟ್ ಮತ್ತು ಸ್ಮಿತ್ ನಡುವಿನ ಟೆಸ್ಟ್ ರನ್‌ಗಳ ವ್ಯತ್ಯಾಸದ ಪ್ರಕಾರ, ಆಸ್ಟ್ರೇಲಿಯಾದ ಬ್ಯಾಟರ್ ಮೊದಲು ಟೆಸ್ಟ್‌ನಲ್ಲಿ 10000 ರನ್ ಪೂರೈಸಲಿದ್ದಾರೆ. ಇಬ್ಬರ ನಡುವೆ ಟೆಸ್ಟ್ ರನ್‌ಗಳಲ್ಲಿ 645 ರನ್‌ಗಳ ವ್ಯತ್ಯಾಸವಿದೆ.

ತಪ್ಪಿದ ದಾಖಲೆ

ವಿರಾಟ್ ಕೊಹ್ಲಿ ಇದುವರೆಗೆ ಆಡಿರುವ 118 ಟೆಸ್ಟ್ ಪಂದ್ಯಗಳ 201 ಇನ್ನಿಂಗ್ಸ್‌ಗಳಲ್ಲಿ 9040 ರನ್ ಗಳಿಸಿದ್ದಾರೆ. ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 29 ಶತಕ ಮತ್ತು 31 ಅರ್ಧ ಶತಕಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ತವರಿನಲ್ಲಿ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ಆಡಿದ ಕೊನೆಯ ಐದು ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಈ ಟೆಸ್ಟ್ ಪಂದ್ಯಗಳಲ್ಲಿ ಅವರ ಬ್ಯಾಟ್‌ನಿಂದ ರನ್‌ಗಳು ಬಂದಿದ್ದರೆ, ಅವರು 10000 ಟೆಸ್ಟ್ ರನ್‌ಗಳನ್ನು ಪೂರೈಸುವ ಸಮೀಪಕ್ಕೆ ಬರಬಹುದಿತ್ತು.

ಕೇವಲ ಮೂವರು ಭಾರತದ ಬ್ಯಾಟರ್‌ಗಳು ಟೆಸ್ಟ್ ಕ್ರಿಕೆಟ್‌ನಲ್ಲಿ 10000 ರನ್‌ಗಳನ್ನು ಪೂರೈಸಿದ್ದಾರೆ. ಸಚಿನ್ ತೆಂಡೂಲ್ಕರ್ ( 15921), ರಾಹುಲ್ ದ್ರಾವಿಡ್ (13265) ಮತ್ತು ಸುನಿಲ್ ಗವಾಸ್ಕರ್ (10122). ಮತ್ತೊಂದೆಡೆ, ಭಾರತದಂತೆಯೇ ಆಸ್ಟ್ರೇಲಿಯಾದ ಮೂವರು ಬ್ಯಾಟರ್‌ಗಳು ಇದುವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 10000 ರನ್‌ಗಳ ಸಾಧನೆಯನ್ನು ಮಾಡಿದ್ದಾರೆ. ರಿಕಿ ಪಾಂಟಿಂಗ್ (13378), ಅಲನ್ ಬಾರ್ಡರ್ (11174) ಹಾಗು ಸ್ಟೀವ್ ವಾ (10000) ದಾಖಲೆ ಬರೆದಿದ್ದಾರೆ.

Story first published: Monday, November 18, 2024, 9:01 [IST]
Other articles published on Nov 18, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+