ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡಕ್ಕೆ ಸ್ಮಿತ್ ನಾಯಕ
ಸಿಡ್ನಿ, ಆಗಸ್ಟ್ 12: ಇಂಗ್ಲೆಂಡ್ ವಿರುದ್ಧ ಆಷ್ಯಸ್ ಸರಣಿಯಲ್ಲಿ ಸರಿಯಾಗಿ ಪೆಟ್ಟು ತಿಂದಿರುವ ಆಸ್ಟ್ರೇಲಿಯಾ ತಂಡ ಈಗ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಪಣ ತೊಟ್ಟಿದೆ. ತಂಡಕ್ಕೆ ನಾಯಕರಾಗಿ ಸ್ಟೀವನ್ ಸ್ಮಿತ್ ಅವರನ್ನು ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಮಾಡಿ ಬುಧವಾರ ತಂಡ ಪ್ರಕಟಿಸಿದೆ.
ಜೊತೆಗೆ ಆಸ್ಟ್ರೇಲಿಯಾ ತಂಡಕ್ಕೆ ಆಲ್ ರೌಂಡರ್ ಮಾರ್ಕಸ್ ಸ್ಟೊಯಿನಿಸ್, ಸ್ಪಿನ್ನರ್ ಆಸ್ಟನ್ ಅಗರ್ ಹಾಗೂ ಬ್ಯಾಟ್ಸ್ ಮನ್ ಜೋ ಬರ್ನ್ಸ್ ಅವರಿಗೆ ಸ್ಥಾನ ಕಲ್ಪಿಸಲಾಗಿದೆ.
ಕಳೆದ ಮಾರ್ಚ್ ತಿಂಗಳಿನಲ್ಲಿ 5ನೇ ಬಾರಿಗೆ ವಿಶ್ವಕಪ್ ಎತ್ತಿದ ಆಸ್ಟ್ರೇಲಿಯಾ ತಂಡದಲ್ಲಿ ಕೆಲ ಬದಲಾವಣೆಗಳಾಗಿವೆ. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಬ್ರಾಡ್ ಹಡ್ಡೀನ್ ಹಾಗೂ ಟೆಸ್ಟ್ ತಂಡ ನಾಯಕ ಮೈಕಲ್ ಕ್ಲಾರ್ಕ್ ನಿವೃತ್ತಿ ಘೋಷಿಸಿದ್ದಾರೆ. ಮಿಚೆಲ್ ಜಾನ್ಸನ್ ಹಾಗೂ ಜೋಶ್ ಹಜೇಲ್ ವುಡ್ ಅವರು ಏಕದಿನ ಸರಣಿಯಿಂದ ವಿಶ್ರಾಂತಿ ಬಯಸಿದ್ದಾರೆ.

ಜೇಮ್ಸ್ ಫಾಲ್ಕನರ್ ಅವರು ಕುಡಿದು ವಾಹನ ಚಲಾಯಿಸಿದ ತಪ್ಪಿಗೆ ತಾತ್ಕಾಲಿಕವಾಗಿ ನಿಷೇಧಕ್ಕೊಳಗಾಗಿದ್ದಾರೆ. ಅವರ ಜಾಗಕ್ಕೆ ಸ್ಟೊಯಿನಿಸ್ ಅವರನ್ನು ಕರೆಸಿಕೊಳ್ಳಲಾಗಿದೆ.
ಆಷ್ಯಸ್ ಸರಣಿಯ ಕೊನೆಯ ಹಾಗೂ ಅಂತಿಮ ಟೆಸ್ಟ್ ಪಂದ್ಯ ದಿ ಓವಲ್ ನಲ್ಲಿ ಆಗಸ್ಟ್ 20ರಂದು ನಡೆಯಲಿದೆ. ಐರ್ಲೆಂಡ್ ವಿರುದ್ಧ ಆಗಸ್ಟ್ 27ರಂದು ಏಕದಿನ ಪಂದ್ಯವನ್ನಾಡಲಿದೆ. ಕಾರ್ಡಿಫ್ ನಲ್ಲಿ ಆಗಸ್ಟ್ 31ರಂದು ಇಂಗ್ಲೆಂಡ್ ವಿರುದ್ಧ ಟಿ20 ಪಂದ್ಯವನ್ನಾಡಲಿದ್ದಾರೆ. ನಂತರ ಇಂಗ್ಲೆಂಡ್ ವಿರುದ್ಧದ 5 ಏಕದಿನ ಪಂದ್ಯಗಳ ಸರಣಿ ಸೆಪ್ಟೆಂಬರ್ 3 ರಿಂದ ಆರಂಭವಾಗಲಿದೆ.
ತಂಡ ಇಂತಿದೆ: ಸ್ಟೀವ್ ಸ್ಮಿತ್ (ನಾಯಕ), ಆಸ್ಟನ್ ಅಗರ್, ಜಾರ್ಜ್ ಬೈಲಿ, ಜೋ ಬರ್ನ್ಸ್, ನಾಥನ್ ಕೌಲ್ಟರ್ ನೈಲ್, ಪ್ಯಾಟ್ರಿಕ್ ಕಮಿನ್ಸ್, ಗ್ಲೆನ್ ಮ್ಯಾಕ್ಸ್ ವೆಲ್, ಮಿಚೆಲ್ ಮಾರ್ಷ್, ಜೇಮ್ಸ್ ಪ್ಯಾಟಿಸನ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಶೇನ್ ವಾಟ್ಸನ್, ಡೇವಿಡ್ ವಾರ್ನರ್, ಕೇಮರೂನ್ ಬಾಯ್ಸ್ (ಟಿ 20ಗೆ ಮಾತ್ರ) (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications