ಸ್ಮಿತ್ ಒಬ್ಬರೇ ನಾಯಕನ ಆಕಾಂಕ್ಷಿಯಲ್ಲ, ನಮ್ಮಲ್ಲಿ ಆಯ್ಕೆಗಳಿವೆ: ಸಿಎ

ಸಿಡ್ನಿ: ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರನ್ನು ಮತ್ತೆ ನಾಯಕನಾಗಿ ಆರಿಸುವ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಯೋಚಿಸುತ್ತಿದೆ ಎನ್ನಲಾಗುತ್ತಿದೆ. ಆದರೆ ಸ್ಮಿತ್ ಒಬ್ಬರೇ ಟೆಸ್ಟ್ ನಾಯಕನ ಆಕಾಂಕ್ಷಿಯಲ್ಲ, ನಮ್ಮಲ್ಲಿ ಆಯ್ಕೆಗಳಿವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.
2018ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಆಸ್ಟ್ರೇಲಿಯಾದ ಪ್ರವಾಸ ಬಳಿಕ ಸ್ಟೀವ್ ಸ್ಮಿತ್ ಅವರನ್ನು ಟೆಸ್ಟ್ ನಾಯಕತ್ವದಿಂದ ಕೆಳಗಿಳಿಸಲಾಯ್ತು. ಅಂದು ಟೆಸ್ಟ್ ಸರಣಿಯಲ್ಲಿ ಸ್ಟೀವ್ ಮತ್ತು ಡೇವಿಡ್ ವಾರ್ನರ್ ಚೆಂಡು ವಿರೂಪದಲ್ಲಿ ಪಾಲ್ಗೊಂಡು ವರ್ಷದ ನಿಷೇಧಕ್ಕೀಡಾಗಿದ್ದರಿಂದ ಟೆಸ್ಟ್ ನಾಯಕತ್ವದಿಂದ ಸ್ಮಿತ್ ಕಿತ್ತು ಹಾಕಲಾಗಿತ್ತು.
ಸದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ಟಿಮ್ ಪೈನ್ ಆಸೀಸ್ ತಂಡ ಮುನ್ನಡೆಸುತ್ತಿದ್ದಾರೆ. ಆದರೆ ಮುಂದೊಮ್ಮೆ ಸ್ಟೀವ್ ಸ್ಮಿತ್ ಮತ್ತೆ ನಾಯಕರಾಗಲಿದ್ದಾರೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿರುವುದರಿಂದ ಕ್ರಿಕೆಟ್ ಆಸ್ಟ್ರೇಲಿಯಾ ಇದಕ್ಕೆ ಪ್ರತಿಕ್ರಿಯಿಸಿದೆ.
ಕ್ರಿಕೆಟ್ ಆಸ್ಟ್ರೇಲಿಯಾದ ಅಧ್ಯಕ್ಷ ಅರ್ಲ್ ಎಡ್ಡಿಂಗ್ಸ್ ಅವರು ಮಾತನಾಡಿ, 'ನಮ್ಮಲ್ಲಿ ಮೆಗ್, ಆ್ಯಾರನ್ (ಫಿಂಚ್), ಟಿಮ್ (ಪೈನ್)ನಂತ ಮೂವರು ನಾಯಕರಿದ್ದಾರೆ. ಇನ್ನೂ ಯುವ ಶ್ರೇಷ್ಠ ನಾಯಕರು ಬರುತ್ತಿದ್ದಾರೆ. ಅಂದರೆ ಸ್ಟೀವ್ ಸ್ಮಿತ್ ಒಬ್ಬರೇ ಇಲ್ಲಿ ಟೆಸ್ಟ್ ನಾಯಕ ಎಂಬಂತಿಲ್ಲ, ಎಲ್ಲದರಲ್ಲಿ ಬೆಸ್ಟ್ ಯಾರಿದ್ದಾರೋ ಅವರು ನಾಯಕರಾಗ್ತಾರೆ,' ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications