ಟೆಸ್ಟ್ ವೇಗದ 24 ಶತಕ: ಕೊಹ್ಲಿ ಹಿಂದಿಕ್ಕಿದ ಆಸೀಸ್ ಕ್ರಿಕೆಟರ್ ಸ್ಟೀವ್ ಸ್ಮಿತ್!

ಎಜ್‌ಬಾಸ್ಟನ್, ಆಗಸ್ಟ್ 2: ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ 24 ಶತಕಗಳನ್ನು ಸಿಡಿಸಿದ ವಿಶ್ವದ 2ನೇ ಆಟಗಾರರಾಗಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಗುರುತಿಸಿಕೊಂಡಿದ್ದಾರೆ. ಈ ಸಾಧನೆಗಾಗಿ ಸ್ಮಿತ್ ಅವರು ಟೀಮ್ ಇಂಡಿಯಾ ನಾಯ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.
ಬರ್ಮಿಂಗ್‌ಹ್ಯಾಮ್‌ನಲ್ಲಿ ಗುರುವಾರ (ಆಗಸ್ಟ್ 1) ನಡೆದ ಮೊದಲ ಆ್ಯಷಸ್ ಟೆಸ್ಟ್‌ನಲ್ಲಿ ಸ್ಮಿತ್ ಅಪರೂಪದ ದಾಖಲೆಗೆ ಕಾರಣರಾಗಿದ್ದಾರೆ. ಈ ಪಂದ್ಯದಲ್ಲಿ ಸ್ಮಿತ್ 144 ರನ್ ಬಾರಿಸಿದರು. ಇದರೊಂದಿಗೆ ಸ್ಮಿತ್ 118 ಇನ್ನಿಂಗ್ಸ್‌ಗಳಲ್ಲಿ 24ನೇ ಟೆಸ್ಟ್ ಶತಕ ದಾಖಲಿಸಿದಂತಾಗಿದೆ.
ಅತೀ ವೇಗದಲ್ಲಿ 24 ಟೆಸ್ಟ್ ಶತಕ ದಾಖಲಿಸಿದ ಸಾಲಿನಲ್ಲಿ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದರು. ಕೊಹ್ಲಿಯನ್ನು ಕೆಳ ಜಗ್ಗಿರುವ ಸ್ಮಿತ್ ಈಗ ದ್ವಿತೀಯ ಸ್ಥಾನಕ್ಕೇರಿದ್ದಾರೆ.

ಅನ್ ಬೀಟೇಬಲ್ ಡಾನ್
ಕ್ರಿಕೆಟ್ ಜಗತ್ತಿನ ದಿಗ್ಗಜ, ಆಸ್ಟ್ರೇಲಿಯಾದ ಡಾನ್ ಬ್ರಾಡ್‌ಮನ್ ಈ ದಾಖಲೆ ಸಾಲಿನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 24ನೇ ಶತಕ ಬಾರಿಸಲು ಬ್ರಾಡ್‌ಮನ್ ಕೇವಲ 66 ಇನ್ನಿಂಗ್ಸ್‌ಗಳನ್ನು ಬಳಸಿಕೊಂಡಿದ್ದರು. ಬ್ರಾಡ್‌ಮನ್ ಬಳಿಕ ದ್ವಿತೀಯ ಸ್ಥಾನದಲ್ಲಿರುವ ಸ್ಮಿತ್ 118 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಕೊಹ್ಲಿ ಕೆಳಗಿಳಿಸಿದ ಸ್ಮಿತ್
ಟೆಸ್ಟ್ 24ನೇ ವೇಗದ ಶತಕಕ್ಕಾಗಿ ಬ್ರಾಡ್‌ಮನ್ ನಂತರದ ಸ್ಥಾನದಲ್ಲಿದ್ದ ಕೊಹ್ಲಿಯನ್ನು ಸ್ಮಿತ್ ಸರಿಗಟ್ಟಿದ್ದಾರೆ. ಕೊಹ್ಲಿ 24ನೇ ಟೆಸ್ಟ್ ಶತಕ ದಾಖಲಿಸಲು 123 ಇನ್ನಿಂಗ್ಸ್‌ಗಳನ್ನು ಬಳಿಸಿಕೊಂಡಿದ್ದರು. ಇದೇ ಸಾಧನೆಗಾಗಿ ಸಚಿನ್ ತೆಂಡೂಲ್ಕರ್ 125 ಇನ್ನಿಂಗ್ಸ್, ಸುನಿಲ್ ಗವಾಸ್ಕರ್ 128 ಇನ್ನಿಂಗ್ಸ್‌ಗಳನ್ನು ಬಳಸಿಕೊಂಡಿದ್ದರು.

ಸ್ಮಿತ್ ಏಕಾಂಗಿ ಹೋರಾಟ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಪರ ಸ್ಮಿತ್ ಏಕಾಂಗಿ ಹೋರಾಟ ಮಾಡಿದ್ದು ಕಂಡುಬಂತು. ಸ್ಟೀವ್ 144 ರನ್ ಕೊಡುಗೆ ನೀಡಿದರು. ಸ್ಮಿತ್ ಹೊರತುಪಡಿಸಿ ಟ್ರಾವಿಸ್ ಹೆಡ್ 35, ಪೀಟರ್ ಸಿಡಲ್ 44 ರನ್ ಬಾರಿಸಿದ್ದು ಬಿಟ್ಟರೆ ಇನ್ಯಾರೂ 15ಕ್ಕೂ ಮಿಕ್ಕಿ ರನ್ ಸೇರಿಸಲಿಲ್ಲ.

ಆಸೀಸ್ 284 ರನ್
ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 80.4ನೇ ಓವರ್‌ಗೆ ಎಲ್ಲಾ ವಿಕೆಟ್ ಕಳೆದು 284 ರನ್ ಗಳಿಸಿದೆ. ಆಸೀಸ್ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಟುವರ್ಟ್ ಬ್ರಾಡ್ 5, ಕ್ರಿಸ್ ವೋಕ್ಸ್ 3 ವಿಕೆಟ್ ಪಡೆದು ಗಮನ ಸೆಳೆದರು. ಆತಿಥೇಯ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ಆಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications