ವಿರಾಟ್ ವಿಕೆಟ್ ನನ್ನ ಕನಸು: ಹೋಲಿಕೆ ಬಗ್ಗೆಯೂ ಸ್ಟೀವ್ ಸ್ಮಿತ್ ಪ್ರತಿಕ್ರಿಯೆ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಬಗ್ಗೆ ವಿಶ್ವ ಕ್ರಿಕೆಟ್‌ನಲ್ಲಿ ದೊಡ್ಡ ಚರ್ಚೆಗಳು ನಡೆಯುತ್ತಿದೆ. ಯಾರು ಶ್ರೇಷ್ಠ ಎಂಬ ಬಗ್ಗೆ ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕೆ ತಮ್ಮದೇ ಆದ ಕಾರಣಗಳನ್ನೂ ನೀಡುತ್ತಿದ್ದಾರೆ.
ಈ ಹೋಲಿಕೆಯ ಬಗ್ಗೆ ಸ್ವತಃ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಸ್ಟೀವ್ ಸ್ಮಿತ್ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್‌ನಲ್ಲಿ ಮಾಡಿದ ಸಾಧನೆಯ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
ಆದರೆ ಇದೇ ಸಂದರ್ಭದಲ್ಲಿ ಸ್ಟೀವ್ ಸ್ಮಿತ್ ವಿರಾಟ್ ಕೊಹ್ಲಿ ವಿಚಾರವಾಗಿ ಕನಸೊಂದನ್ನು ಇಟ್ಟುಕೊಂಡಿದ್ದಾರೆ. ಆ ಕನಸನ್ನು ಪೂರೈಸಿಕೊಳ್ಳುವ ಗುರಿಯನ್ನೂ ಹೊಂದಿದ್ದಾರೆ.

ಹೋಲಿಕೆಗೆ ಪ್ರತಿಕ್ರಿಯಿಸಿದ ಸ್ಮಿತ್
ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಮಧ್ಯೆ ಶ್ರೇಷ್ಠತೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಟೀವ್ ಸ್ಮಿತ್‌ಗೂ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಸ್ಮಿತ್ ಯಾವುದೇ ರೀತಿಯಲ್ಲೂ ತೀರ್ಪನ್ನು ನೀಡಲು ಹೋಗದೆ ಜಾಣತನವನ್ನು ಮೆರೆದರು. ಆದರೆ ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಆಟದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು.

ಭಾರತ ಕ್ರಿಕೆಟ್‌ಗೆ ನೀಡಿದ ಕೊಡುಗೆ ಅಪಾರ
ನಾನು ವಿರಾಟ್ ಕೊಹ್ಲಿಯನ್ನು ತುಂಬಾ ಮೆಚ್ಚುತ್ತೇನೆ. ಅವರು ಅದ್ಭುತ ಆಟಗಾರ. ಅವರ ದಾಖಲೆಗಳು ನಂಬಲಾಗದ ರೀತಿಯಲ್ಲಿದೆ. ಆತ ತನ್ನ ಆಟವನ್ನು ಆಡುವ ರೀತಿ, ಭಾರತೀಯ ಕ್ರಿಕೆಟ್ ಬಗ್ಗೆ ಅವರು ಹೊಂದಿರುವ ಉತ್ಸಾಹ ಅಪಾರವಾದದ್ದು ಎಂದು ಸ್ಟೀವ್ ಸ್ಮಿತ್ ಹೇಳಿದ್ದಾರೆ.

ಚೇಸಿಂಗ್ ಸಾಮರ್ಥ್ಯಕ್ಕೆ ಸ್ಮಿತ್ ಪ್ರಶಂಸೆ
ಖಾಸಗೀ ವಾಹಿನಿಯ ಕಾರ್ಯಕ್ರವೊಂದರಲ್ಲಿ ಮಾತನಾಡಿದ ಸ್ಟೀವ್ ಸ್ಮಿತ್ ಕೊಹ್ಲಿ ಚೇಸಿಂಗ್ ಸಾಮರ್ಥ್ಯ ಅಮೋಘವಾದದ್ದು ಎಂದಿದ್ದಾರೆ. ಒತ್ತಡದ ಸಂದರ್ಭದಲ್ಲಿ ಆಡುವುದು ಸುಲಭವಲ್ಲ. ಆದರೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಬೆನ್ನಟ್ಟಿಗೆಲ್ಲುವಲ್ಲಿ ಕೊಹ್ಲಿಯ ಪಾತ್ರ ಮತ್ತು ಅದರ ಸರಾಸರಿಯನ್ನು ಅದ್ಭುತವಾಗಿದೆ. ಅಂತಾ ಆಟಗಾರನನ್ನು ಮೆಚ್ಚಲೇ ಬೇಕು ಎಂದಿದ್ದಾರೆ.

ಕೊಹ್ಲಿ ವಿಕೆಟ್ ಪಡೆಯುವ ಹಂಬಲ
ಸ್ಟೀವ್ ಸ್ಮಿತ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಆರಂಭ ಮಾಡಿದ್ದು ಲೆಗ್ ಸ್ಪಿನ್ನರ್ ಆಗಿ. ಆದರೆ ಬ್ಯಾಟಿಂಗ್‌ನಲ್ಲಿ ತೋರಿದ ಕೌಶಲ್ಯ ಆತನನ್ನು ಪೂರ್ಣಕಾಲಿಕ ಬ್ಯಾಟ್ಸ್‌ಮನ್ ಆಗು ಮಾಡಿದೆ. ಹಾಗಾಗಿ ಇತ್ತೀಚೆಗೆ ಬೌಲಿಂಗ್ ಕಡೆ ತುಂಬಾ ಕಡಿಮೆ ಗಮನ ನೀಡುತ್ತಿದ್ದಾರೆ. ಹಾಗಿದ್ದರೂ ಅವರಿಗೆ ಡ್ರೀಮ್ ವಿಕೆಟ್ ಒಂದಿದೆ. ಅದು ಸ್ವತಃ ವಿರಾಟ್ ಕೊಹ್ಲಿ. ವಿರಾಟ್ ಕೊಹ್ಲಿ ವಿಕೆಟನ್ನು ತಮ್ಮ ಲೆಗ್ ಸ್ಪಿನ್ ಎಸೆತದ ಮೂಲಕ ಪಡೆಯಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ ಸ್ಮಿತ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications