ಟಿ20 ವಿಶ್ವಕಪ್ ಮುಂದೂಡಲ್ಪಟ್ಟರೆ ಐಪಿಎಲ್ ಆಡುತ್ತೇನೆ: ಸ್ಟೀವ್ ಸ್ಮಿತ್

ಸಿಡ್ನಿ, ಜೂನ್ 1: ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಸಲು ಉದ್ದೇಶಿಸಲಾಗಿರುವ ಟಿ20 ವಿಶ್ವಕಪ್ ಟೂರ್ನಿ ಒಂದು ವೇಳೆ ಕೊರೊನಾವೈರಸ್ ಕಾರಣದಿಂದ ಮುಂದೂಡಲ್ಪಟ್ಟರೆ ತಾನು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳುವುದಾಗಿ ಆಸೀಸ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಹೇಳಿದ್ದಾರೆ.
ಕೋವಿಡ್ 19 ಕಾರಣದಿಂದಲೇ ಸದ್ಯ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿರುವ ಐಪಿಎಲ್ ಅನ್ನು ಅಕ್ಟೋಬರ್-ನವೆಂಬರ್‌ನಲ್ಲಿ ಅಂದರೆ ಟಿ20 ವಿಶ್ವಕಪ್ ಜಾಗದಲ್ಲಿ ನಡೆಸಲ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಯೋಚಿಸಿದೆ. ಆದರೆ ಬಿಸಿಸಿಐ ಎಣಿಕೆಯಂತೆ ನಡೆಯಬೇಕಾದರೆ ಟಿ20 ವಿಶ್ವಕಪ್ ಮುಂದೂಡಲ್ಪಡಬೇಕು.
ಕೊರೊನಾ ಬಾರದಿದ್ದರೆ ಮಾರ್ಚ್ 29ರಿಂದಲೇ ಐಪಿಎಲ್ ಆರಂಭಗೊಳ್ಳುತ್ತಿತ್ತು. ರಾಜಸ್ಥಾನ್ ರಾಯಲ್ಸ್‌ಗೆ ನಾಯಕನಾಗಿ ಆರಿಸಲ್ಪಟ್ಟಿರುವುದರಿಂದ 13ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್ ಆರ್ ತಂಡವನ್ನು ಸ್ಟೀವ್ ಸ್ಮಿತ್ ಮುನ್ನಡೆಸುತ್ತಿದ್ದರು. ಆದರೆ ಕೊರೊನಾದಿಂದ ಐಪಿಎಲ್‌ಗೆ ಈಗ ಅಸ್ಥಿರವೆನಿಸಿದೆ.
'ನಿಮ್ಮ ದೇಶದ ಪರವಾಗಿ ವಿಶ್ವಕಪ್‌ನಲ್ಲಿ ಆಡಬೇಕಾಗಿರುವಾಗ ಬೇರೆ ಏಕದಿನವಾಗಲಿ ಅಥವಾ ಟಿ20ಯನ್ನಾಗಲಿ ಒಪ್ಪಿಕೊಳ್ಳಲು ಕಷ್ಟವಾಗುತ್ತದೆ. ಅಂಥ ಸಂದರ್ಭದಲ್ಲಿ ನಾನು ವಿಶ್ವಕಪ್ ಆರಿಸುತ್ತೇನೆ. ಒಂದು ವೇಳೆ ವಿಶ್ವಕಪ್ ಮುಂದೂಡಲ್ಪಟ್ಟರೆ, ನಾನು ಐಪಿಎಲ್ ಆಡುತ್ತೇನೆ. ದೇಸಿ ಟೂರ್ನಿಗಳಲ್ಲಿ ಐಪಿಎಲ್ ಅದ್ಭುತ ಟೂರ್ನಿ,' ಎಂದು ಸ್ಮಿತ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications