3ನೇ ಆ್ಯಷಸ್ ಟೆಸ್ಟ್‌ನಿಂದ ಆಸೀಸ್ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಹೊರಕ್ಕೆ

ಲಂಡನ್, ಆಗಸ್ಟ್ 20: ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಆ್ಯಷಸ್ ಟೆಸ್ಟ್ ಸರಣಿಯ 3ನೇ ಪಂದ್ಯದಿಂದ ಆಸೀಸ್ ಬ್ಯಾಟ್ಸ್ಮನ್, ಮಾಜಿ ನಾಯಕ ಸ್ಟೀವ್ ಸ್ಮಿತ್ ಹೊರ ಬಿದ್ದಿದ್ದಾರೆ. ಆಂಗ್ಲ ವೇಗಿ ಜೋಫ್ರಾ ಆರ್ಚರ್ ಅವರ ಬೌನ್ಸರ್‌ನಿಂದ ಕುತ್ತಿಗೆ ಭಾಗಕ್ಕೆ ಗಾಯವಾಗಿರುವುದರಿಂದ ಮುಂದಿನ ಟೆಸ್ಟ್‌ನಲ್ಲಿ ಸ್ಮಿತ್ ಆಡುತ್ತಿಲ್ಲ.
ಆಗಸ್ಟ್ 14-18ರ ವರೆಗೆ ನಡೆದಿದ್ದ ಆ್ಯಷಸ್ ದ್ವಿತೀಯ ಟೆಸ್ಟ್‌ನಲ್ಲಿ ಸ್ಮಿತ್ ಗಾಯಗೊಂಡಿದ್ದರು. ನೋವಿಗೊಳಗಾದ ಸ್ಮಿತ್ ಮೈದಾನದಿಂದ ಹೊರ ನಡೆದಿದ್ದಾಗ ಸ್ಟೀವ್ ಬದಲಾಗಿ ಮಾರ್ನಸ್ ಲ್ಯಾಬುಸ್ಚಾಗ್ನೆ ಅವರನ್ನು ಮೈದಾನಕ್ಕಿಳಿಸಲಾಗಿತ್ತು. ಟೆಸ್ಟ್ ಇತಿಹಾಸದಲ್ಲಿ ಆಟಗಾರನ ಬದಲಾವಣೆ ಆಗಿದ್ದು ಇದೇ ಮೊದಲು.
80 ರನ್ ಬಾರಿಸಿದ್ದ ಸ್ಮಿತ್, ಕುತ್ತಿಗೆ ನೋವಿನಿಂದ ಆಟ ನಿಲ್ಲಿಸಿ ಮೈದಾನದಿಂದ ಹೊರ ನಡೆದಿದ್ದರು. ಮತ್ತೆ ಕೊಂಚ ಸಮಯದ ಬಳಿಕ ಮೈದಾನಕ್ಕಿಳಿದು 92 ರನ್ ಗಳಿಸಿ ಕ್ರಿಸ್ ವೋಕ್ಸ್ ಎಸೆತಕ್ಕೆ ಎಲ್‌ಬಿಡ್ಲ್ಯೂ ಆಗಿದ್ದರು. ಆದರೆ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಸ್ಮಿತ್ 3ನೇ ಟೆಸ್ಟ್‌ನಲ್ಲಿ ಆಡುತ್ತಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಖಾತರಿಪಡಿಸಿದೆ.
'ಸ್ಟೀವ್ ಸ್ಮಿತ್ ಅವರು ಹೆಡ್ಡಿಂಗ್ಲಿಯಲ್ಲಿ ನಡೆಯಲಿರುವ ಮೂರನೇ ಆ್ಯಷಸ್ ಟೆಸ್ಟ್‌ನಿಂದ ಹೊರ ಬಿದ್ದಿದ್ದಾರೆ. ಮಂಗಳಾರ (ಆಗಸ್ಟ್ 20) ಆಸೀಸ್‌ನ ಅಭ್ಯಾಸದಲ್ಲಿ ಸ್ಮಿತ್ ಭಾಗವಹಿಸದಿದ್ದನ್ನು ತಿಳಿಸಿರುವ ಕೋಚ್ ಜಸ್ಟಿನ್ ಲ್ಯಾಂಗರ್ ಈ ವಿಚಾರ ಖಾತರಿಪಡಿಸಿದ್ದಾರೆ,' ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ವೆಬ್ ಸೈಟ್‌ನಲ್ಲಿ ಬರೆದುಕೊಂಡಿದೆ.
ವಿಶೇಷವೆಂದರೆ ಮೊದಲ ಆ್ಯಷಸ್ ಟೆಸ್ಟ್‌ನ ಸ್ಮಿತ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 144, 142 ರನ್ ಮಾಡಿದ್ದರು. ಈ ಪಂದ್ಯದಲ್ಲಿ ಆಸೀಸ್ 251 ರನ್ ಜಯ ದಾಖಲಿಸಿತ್ತು. 2ನೇ ಟೆಸ್ಟ್‌ನಲ್ಲಿ ಸ್ಮಿತ್ ಸ್ವಲ್ಪದರಲ್ಲಿ ಶತಕ ವಂಚಿತರಾಗಿದ್ದರು. ಅಂದ್ಹಾಗೆ ಒಂದು ವರ್ಷದ ನಿಷೇಧದ ಬಳಿಕ ಮೊದಲ ಟೆಸ್ಟ್ ಆಡುತ್ತಿರುವ ಸ್ಮಿತ್, ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಮತ್ತೆ ದ್ವಿತೀಯ ಸ್ಥಾನಕ್ಕೆ ಜಿಗಿದಿದ್ದಾರೆ. ಮೊದಲ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications