ಅಭ್ಯಾಸ ಪಂದ್ಯ: ಸ್ಮಿತ್ ಅರ್ಧ ಶತಕ ವ್ಯರ್ಥ, ಆಸೀಸ್ XI ಸದೆಬಡಿದ ಕಿವೀಸ್ XI

ಬ್ರಿಸ್ಬೇನ್, ಮೇ 8: ವಿಶ್ವಕಪ್ ಅಭ್ಯಾಸದ ನಿಮಿತ್ತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ನ್ಯೂಜಿಲ್ಯಾಂಡ್ XI ತಂಡ, ಆಸ್ಟ್ರೇಲಿಯಾ XI ವಿರುದ್ಧ 7 ವಿಕೆಟ್ ಸುಲಭ ಜಯಭೇರಿ ಬಾರಿಸಿದೆ. ಇದರೊಂದಿಗೆ ಆಸೀಸ್ ಪರ ಸ್ಟೀವ್ ಸ್ಮಿತ್ ಅವರ ಸೊಗಸಾದ ಅರ್ಧ ಶತಕ ವ್ಯರ್ಥಗೊಂಡಂತಾಯಿತು.
ಬ್ರಿಸ್ಬೇನ್‌ನಲ್ಲಿ ನಡೆದಿದ್ದ ಈ ಅಭ್ಯಾಸ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆತಿಥೇಯ ಆಸ್ಟ್ರೇಲಿಯಾ XIಕ್ಕೆ ಉಸ್ಮಾನ್ ಖವಾಜಾ 56, ಶಾನ್ ಮಾರ್ಷ್ 28, ಸ್ಮಿತ್ ಅಜೇಯ 89 (77 ಎಸೆತ), ಗ್ಲೆನ್ ಮ್ಯಾಕ್ಸ್‌ವೆಲ್ 52, ಅಲೆಕ್ಸ್ ಕ್ಯಾರಿ 22 ರನ್ ಸೇರಿಸಿ ತಂಡವನ್ನು ತಕ್ಕ ಮಟ್ಟಿಗೆ ಬೆಂಬಲಿಸಿದರು.
ಆ್ಯರನ್ ಫಿಂಚ್ ಬಳಗ 50 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 277 ರನ್ ಪೇರಿಸಿತು. ಆಸೀಸ್ ಇನ್ನಿಂಗ್ಸ್‌ನಲ್ಲಿ ಎದುರಾಳಿ ತಂಡದ ಡೌಗ್ ಬ್ರೇಸ್ವೆಲ್ 45 ರನ್‌ಗೆ 3 ವಿಕೆಟ್ ಪಡೆದರೆ, ಬ್ಲೇರ್ ಮಾರ್ಷಲ್ ಟಿಕ್ನರ್, ಟಾಡ್ ಆಸ್ಟಲ್ ಮತ್ತು ಡ್ಯಾರಿಲ್ ಮಿಚೆಲ್ ತಲಾ 1 ವಿಕೆಟ್ ಪಡೆದರು.
ಗುರಿ ಬೆಂಬತ್ತಿದ ನ್ಯೂಜಿಲ್ಯಾಂಡ್, ಆರಂಭಿಕ ಆಟಗಾರ ಜಾರ್ಜ್ ವರ್ಕರ್ 56, ವಿಲ್ ಯಂಗ್ 130, ಟಾಮ್ ಲ್ಯಾಥಮ್ ಅಜೇಯ 69 ರನ್ ನೆರವಿನೊಂದಿಗೆ 47.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 283 ಗಳಿಸಿತು. ಆಸೀಸ್ ಬೌಲರ್ ಮಿಚೆಲ್ ಸ್ಟಾರ್ಕ್ 14 ರನ್‌ಗೆ 2 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications