ತಂಡಕ್ಕೆ ಸ್ಮಿತ್ ಮರಳಿದ್ದು ಭಾರತಕ್ಕೆ ದೊಡ್ಡ ತಲೆನೋವಾಗಿದೆ: ಮ್ಯಾಕ್ಸ್‌ವೆಲ್

ಸಿಡ್ನಿ: ಟೆಸ್ಟ್ ಸ್ಪೆಷಾಲಿಸ್ಟ್ ಸ್ಟೀವ್ ಸ್ಮಿತ್ ಮರಳಿರೋದು ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದ್ದರೆ ಭಾರತಕ್ಕೆ ದೊಡ್ಡ ತಲೆ ನೋವಾಗಿದೆ ಎಂದು ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿದ್ದಾರೆ. ನವೆಂಬರ್ 27ರಿಂದ ಆರಂಭವಾಗಲಿರುವ ಭಾರತ-ಆಸ್ಟ್ರೇಲಿಯಾ ಸರಣಿಗೆ ಸಂಬಂಧಿಸಿ ಮ್ಯಾಕ್ಸ್‌ವೆಲ್ ಈ ಹೇಳಿಕೆ ನೀಡಿದ್ದಾರೆ.
2018-19ರಲ್ಲಿ ಆಸ್ಟ್ರೇಲಿಯಾಕ್ಕೆ ಭಾರತ ಪ್ರವಾಸ ಹೋಗಿದ್ದಾಗ ಆಸ್ಟ್ರೇಲಿಯಾ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ತಂಡದಲ್ಲಿರಲಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಚೆಂಡು ವಿರೂಪ ಪ್ರಕರಣದಲ್ಲಿ ಪಾಲ್ಗೊಂಡು ಒಂದು ವರ್ಷದ ನಿಷೇಧದಲ್ಲಿದ್ದರು.
ಸ್ಮಿತ್, ವಾರ್ನರ್ ತಂಡದಲ್ಲಿಲ್ಲದ್ದು ಕೊಹ್ಲಿ ಪಡೆಗೆ ಒಂದರ್ಥದಲ್ಲಿ ಅನುಕೂಲವಾಗಿತ್ತು. ದೀರ್ಘ ಕಾಲದ ಬಳಿಕ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಆವತ್ತು ಟೀಮ್ ಇಂಡಿಯಾ ಇತಿಹಾಸ ನಿರ್ಮಿಸಿತ್ತು. ಇನ್ನು ಏಕದಿನ ಸರಣಿ ಕೂಡ 2-1 ಭಾರತದ ವಶವಾಗಿದ್ದರೆ, ಟಿ20ಐ ಸರಣಿ 1-1ರಿಂದ ಸಮಬಲಗೊಂಡಿತ್ತು. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.
'ಸ್ಟೀವ್ ಸ್ಮಿತ್‌ನಂತ ಆಟಗಾರರನ್ನು ತಂಡದಲ್ಲಿ ಹೊಂದಿರೋದು ನಮಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಭಾರತಕ್ಕೆ ಇದೇ ದೊಡ್ಡ ತಲೆ ನೋವಾಗಿದೆ. ಸ್ಮಿತ್ ಪ್ರತೀಸಾರಿಯೂ ಭಾರತದ ವಿರುದ್ಧ ಒಳ್ಳೆಯ ರನ್ ಗಳಿಸುತ್ತಾರೆ,' ಎಂದು ಸರಣಿಯ ಅಧಿಕೃತ ಪ್ರಸಾರಕ ಸೋನಿ ಜೊತೆ ಮಾತನಾಡಿದ ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications