ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡುವ ಸಾಧ್ಯತೆಯಿಲ್ಲ: ಸ್ಟೀವ್ ಸ್ಮಿತ್

ಅಬುಧಾಬಿ: ಮುಂಬರಲಿರುವ ಬಿಗ್ ಬ್ಯಾಷ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿಲ್ಲ. ಬಯೋ ಬಬಲ್‌ನಿಂದ ದೂರ ಉಳಿಯುವ ಆಲೋಚನೆಯಿಂದ ಈ ನಿರ್ಧಾರಕ್ಕೆ ಬರುತ್ತಿದ್ದೇನೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ. ಡಿಸೆಂಬರ್ 3ರಿಂದ ಬಿಗ್ ಬ್ಯಾಷ್ ಆರಂಭಗೊಳ್ಳಲಿದೆ.
ಕೊರೊನಾ ವೈರಸ್ ಭೀತಿ ಶುರುವಾದ ಬಳಿಕ ನಿಲುಗಡೆಯಾಗಿದ್ದ ಕ್ರಿಕೆಟ್ ಚಟುವಟಿಕೆಗಳು ಪುನರಾರಂಬಗೊಂಡಿವೆ. ಆದರೆ ಟೂರ್ನಿಗಳು ನಡೆಯುವಾಗ ಬಯೋ ಬಬಲ್ (ಜೈವಿಕ ಪರದೆ) ಒಳಗೆ ಆಟಗಾರರು ಇರಬೇಕಾಗುತ್ತದೆ. ಅಂದರೆ ಹೊರಗಿನ ಸಂಪರ್ಕದಿಂದ ಆಟಗಾರರು ದೂರವಿರಬೇಕಾಗುತ್ತದೆ.
ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕನಾಗಿರುವ ಸ್ಮಿತ್, ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಬಯೋ ಬಬಲ್ ಒಳಗಿದ್ದಾರೆ. ಸುಮಾರು ಒಂದೂವರೆ ತಿಂಗಳ ಐಪಿಎಲ್ ಮುಗಿಯುವಾಗಲೇ ಬಯೋ ಬಬಲ್ ಒಳಗಿನ ಜೀವನ ಸಾಕಾಗಿರುತ್ತದೆ. ಮತ್ತೆ ಬಿಗ್ ಬ್ಯಾಷ್‌ನಲ್ಲಿ ಅದೇ ಬಯೋ ಬಬಲ್ ಬೇಡ ಎಂಬರ್ಥದಲ್ಲಿ ಸ್ಮಿತ್ ಮಾತನಾಡಿದ್ದಾರೆ.
'ನಾನು ಈ ವಿಚಾರದಲ್ಲಿ ಪ್ರಮಾಣಿಕವಾಗಿ ಹೇಳುತ್ತೇನೆ. ಬಿಗ್ ಬ್ಯಾಷ್ ಲೀಗ್‌ನಲ್ಲಿ ನಾನು ಪಾಲ್ಗೊಳ್ಳುವ ಸಾಧ್ಯತೆಯಿಲ್ಲ,' ಎಂದು ನ್ಯೂಸ್ ಕಾರ್ಪ್ ಜೊತೆ ಸ್ಮಿತ್ ಹೇಳಿಕೊಂಡಿದ್ದಾರೆ. ಸ್ಮಿತ್ ಜೊತೆ ಆಟಗಾರರಾದ ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್ ಕೂಡ ಈ ಬಾರಿಯ ಬಿಗ್ ಬ್ಯಾಷ್ ಮಿಸ್ ಮಾಡಿಕೊಳ್ಳುವ ಸಾಧ್ಯತೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications