ಭಾರತ vs ಆಸ್ಟ್ರೆಲಿಯಾ: ಭಾರತೀಯ ಬೌಲಿಂಗ್ ವಿಭಾಗದ ಬಗ್ಗೆ ಸ್ಟೀವ್ ಸ್ಮಿತ್ ಪ್ರಶಂಸೆ

ಆಸ್ಟ್ರೇಲಿಯಾದ ಬ್ಯಾಟಿಂಗ್ ವಿಭಾಗದ ಪ್ರಮುಖ ಅಸ್ತ್ರ ಸ್ಟೀವ್ ಸ್ಮಿತ್ ಟೀಮ್ ಇಂಡಿಯಾದ ಬೌಲರ್ ಓರ್ವನ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅನುಭವಿ ಆಟಗಾರ ಇಶಾಂತ್ ಶರ್ಮಾ ತಂಡದಲ್ಲಿ ಇಲ್ಲದಿದ್ದರೂ ಭಾರತೀಯ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಅಂಕಗಳನ್ನು ಸ್ಟೀವ್ ಸ್ಮಿತ್ ನೀಡಿದ್ದಾರೆ.
"ಅವರು ಅತ್ಯುತ್ತಮ ಬೌಲಿಂಗ್ ಲೈನ್‌ಅಪ್ ಹೊಂದಿದ್ದಾರೆ. ಈಗ ಸ್ವಲ್ಪ ಹೆಚ್ಚಿನ ಅನುಭವಿಗಳು ಆಗಿದ್ದಾರೆ. ಮೊಹಮ್ಮದ್ ಶಮಿ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಜಸ್ಪ್ರಿತ್ ಬೂಮ್ರಾ ಕೂಡ ಗಮನಾರ್ಹ ಪಂದ್ಯಗಳನ್ನು ಮಾಡಿದ್ದು ಉತ್ತಮ ಗುಣಮಟ್ಟದ ಬೌಲರ್ ಎನಿಸಿದ್ದಾರೆ. ಸ್ಪಿನ್ ವಿಭಾಗದಲ್ಲಿ ಅವರು ಆರ್ ಅಶ್ವಿನ್, ಜಡೇಜಾ ಅಥವಾ ಕುಲ್ದೀಪ್ ಯಾರನ್ನೇ ಆಡಿಸಿದರೂ ಅವರೆಲ್ಲಾ ಅತ್ಯುತ್ತಮ ಕ್ರಿಕೆಟ್ ಪ್ರದರ್ಶನ ನೀಡಬಲ್ಲವರಾಗಿದ್ದಾರೆ" ಎಂದು ಸ್ಟೀವ್ ಸ್ಮಿತ್ ಟೀಮ್ ಇಂಡಿಯಾ ಬೌಲಿಂಗ್ ಪಡೆಯ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.
ಇನ್ನು ಇಶಾಂತ್ ಶರ್ಮಾ ಅಲಭ್ಯತೆಯ ಬಗ್ಗೆ ಮಾತನಾಡಿದ ಸ್ನಿತ್ " ಅವರಿಗೆ ಇಶಾಂತ್ ಶರ್ಮಾ ಆಡದೇ ಇದ್ದರೆ ಆರಂಭದಲ್ಲಿ ಖಂಡಿತಾ ದೊಡ್ಡ ನಷ್ಟವಾಗಲಿದೆ. ಯಾಕೆಂದರೆ ಇಶಾಂತ್ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಬಹುಶಃ ಇಶಾಂತ್ ಇಲ್ಲದೆ ಅವರು ಅತ್ಯಂತ ಬಲಿಷ್ಠರಾಗಿರಲಾರರು. ನನಗನಿಸುತ್ತದೆ ಆತನನ್ನು ಅವರು ಆಡಿಸಲು ಬಯಸುತ್ತಾರೆ" ಎಂದು ಸ್ಮಿತ್ ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾ ಬ್ಯಾಟಿಂಗ್ ವಿಭಾಗದ ಬಗ್ಗೆ ಸ್ಟೀವ್ ಸ್ಮಿತ್ ಮಾತನಾಡಿದರು. ಡೇವಿಡ್ ವಾರ್ನರ್ ಅಲಭ್ಯತೆಯಲ್ಲಿ ಆಸ್ಟ್ರೇಲಿಯಾದ ಬ್ಯಾಟಿಂಗ್ ವಿಭಾಗ ಡಿಸೆಂಬರ್ 17 ರಿಂದ ಆರಂಭವಾಗುವ ಮೊದಲ ಟೆಸ್ಟ್‌ನಲ್ಲಿ ಅತಿ ದೊಡ್ಡ ಪರೀಕ್ಷೆಗೆ ಒಳಗಾಗಲಿದೆ ಎಂದಿದ್ದಾರೆ.
ನಮ್ಮ ಬ್ಯಾಟಿಂಗ್ ವಿಭಾಗ ಡೇವಿಡ್ ವಾರ್ನರ್ ಅಲಭ್ಯತೆಯಲ್ಲಿ ಖಂಡಿತವಾಗಿಯೂ ಪರೀಕ್ಷೆಗೆ ಒಳಗಾಗಲಿದೆ ಮತ್ತು ಕೆಲ ಸಾಮರ್ಥ್ಯವುಳ್ಳ ಯುವ ಆಟಗಾರರು ತಂಡವನ್ನು ಸೇರಿಕೊಳ್ಳಲಿದ್ದಾರೆ. ಇದು ಅತ್ಯುತ್ತಮ ತಂಡವನ್ಉ ಹೊಂದಿರುವ ಭಾರತದ ವಿರುದ್ಧ ನಾವು ಪರೀಕ್ಷೆಗೆ ಒಳಗಾಗಲಿದ್ದೇವೆ ಎಂಬುದಕ್ಕೆ ಯಾವುದೇ ಅನುಮಾನವಿಲ್ಲ ಎಂದು ಸ್ಟೀವ್ ಸ್ಮಿತ್ ಹೇಳಿಕೆಯನ್ನು ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications