
ಆಸ್ಟ್ರೇಲಿಯಾದ ಮಾಜಿ ನಾಯಕ ಟೆಸ್ಟ್ ಕ್ರಿಕೆಟ್‌ನ ನಂಬರ್1 ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ತಮ್ಮ ಕ್ರಿಕೆಟ್ ವೃತ್ತಿಜೀವನದ ಬಹುದೊಡ್ಡ ಕನಸೊಂದನ್ನು ಬಿಚ್ಚಿಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲೆ ಬರೆಯುತ್ತಿರುವ ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಾನು ಸಾಧಿಸಲೇಬೇಕಿರುವ ಕನಸನ್ನು ಹಂಚಿಕೊಂಡಿದ್ದಾರೆ.
ಸ್ಟೀವ್ ಸ್ಮಿತ್ ಅವರ ಕನಸೇನು ಅಂತ ತಿಳಿದರೆ ಖಂಡಿತಾ ಅಚ್ಚರಿಯಯಾಗದಿರದು. ಯಸ್.. ಆಸ್ಟ್ರೇಲಿಯಾದ ಪ್ರತಿಭಾನ್ವಿತ ಆಟಗಾರ ಸ್ಟೀವ್ ಸ್ಮಿತ್ ಅವರ ಕನಸು ಭಾರತದ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲುವುದಾಗಿದೆ. ಸ್ವತಃ ಸ್ಟೀವ್ ಸ್ಮಿತ್ ಈ ವಿಚಾರವನ್ನು ತಿಳಿಸಿದ್ದಾರೆ.
ಸದ್ಯ ಟೀಮ್ ಇಂಡಿಯಾ ಟೆಸ್ಟ್ ತಮಡದಲ್ಲಿ ನಂಬರ್1 ತಂಡವಾಗಿದೆ. ಮೊದಲೇ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲುವುದು ಇತರ ದೇಶಗಳಿಗೆ ಕಠಿಣ. ಇಂತಾ ಅದ್ಭುತ ತಂಡವನ್ನು ಹೊಂದಿರುವ ಸಂದರ್ಭದಲ್ಲಿ ಟೀಮ್ ಇಂಡಿಯಾವನ್ನು ಮಣಿಸಿ ಭಾರತದ ನೆಲದಲ್ಲಿ ಸರಣಿಯನ್ನು ಜಯಿಸುವುದು ನನ್ನ ಕನಸು ಎಂದು ಸ್ಮಿತ್ ಹೇಳಿಕೊಂಡಿದ್ದಾರೆ.
ಆಸ್ಟ್ರೇಲಿಯಾದ ಕ್ರಿಕೆಟಿಗರಿಗೆ ಆ್ಯಷಸ್ ಸರಣಿ ಬಹಳ ಮಹತ್ವದ್ದು. ಮತ್ತು ಏಕದಿನ ವಿಶ್ವಕಪ್‌ಕೂಡ ಪ್ರತಿಷ್ಠೆಯ ಟೂರ್ನಿಯಾಗಿದೆ. ಆದರೆ ಈಗ ಟೆಸ್ಟ್ ಕ್ರಿಕೆಟ್ ಗೆಲ್ಲಲು ಕಠಿಣ ಸ್ಥಳವೆಂದರೆ ಅದು ಭಾರತ. ಭಾರತ ತಂಡವನ್ನು ಅದರದೇ ನೆಲದಲ್ಲಿ ಸೋಲಿಸಿ ಸರಣಿ ಗೆಲ್ಲಬೇಕು ಎಂದು ಸ್ಟೀವ್ ಸ್ಮಿತ್ ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ
ಇದೇ ಸಂದರ್ಭದಲ್ಲಿ ಸ್ಟೀವ್ ಸ್ಮಿತ್ ಇದನ್ನು ಹೊರತು ಪಡಿಸಿ ಅಂತಾ ದೊಡ್ಡ ಗುರಿಯನ್ನು ನಾನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು. ನಾನು ಸಮಯಕ್ಕೆ ತಕ್ಕನಾಗಿ ಗುರಿಯನ್ನು ನಿಗದಿಪಡಿಸಿಕೊಳ್ಳುತ್ತೇನೆ. ದಿನದಿಂದ ದಿನಕ್ಕೆ ಸರಣಿಯಿಂದ ಸರಣಿಗೆ ಆಟವನ್ನು ಉತ್ತಮಪಡಿಸಿಕೊಳ್ಳುವತ್ತ ಗಮನ ಹರಿಸುತ್ತೇನೆ ಎಂದು ಸ್ಟೀವ್ ಸ್ಮಿತ್ ಹೇಳಿದ್ದಾರೆ.