Test Ranking: ವಿರಾಟ್ ಕೊಹ್ಲಿಯಿಂದ ನಂ.1 ಸ್ಥಾನ ಕಸಿದುಕೊಂಡ ಸ್ಮಿತ್!

ನವದೆಹಲಿ, ಸೆಪ್ಟೆಂಬರ್ 3: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಮತ್ತೆ ಅಗ್ರ ಸ್ಥಾನಕ್ಕೇರಿದ್ದಾರೆ. ಐಸಿಸಿ ನೂತನ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿರುವ ಸ್ಮಿತ್, ಅಗ್ರ ಸ್ಥಾನ ಅಲಂಕರಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ಪಾಲ್ಗೊಂಡು ಸ್ಮಿತ್, ಕ್ರಿಕೆಟ್ ಆಸ್ಟ್ರೇಲಿಯಾದಿಂದ 1 ವರ್ಷದ ನಿಷೇಧಕ್ಕೆ ಒಳಗಾಗುವುದಕ್ಕೂ ಮೊದಲು ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ರ್ಯಾಂಕ್‌ನಲ್ಲಿದ್ದರು. ಸ್ಮಿತ್ ನಿಷೇಧದ ಬಳಿಕ ಕೊಹ್ಲಿ ವಿಶ್ವ ನಂ.1 ಸ್ಥಾನಕ್ಕೇರಿಸಿದ್ದರು.
ಮಂಗಳವಾರ (ಸೆಪ್ಟೆಂಬರ್ 3) ಐಸಿಸಿ ನೂತನ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿದ್ದವರ ಮಾಹಿತಿ ಇಲ್ಲಿದೆ.

ಗಮನಾರ್ಹ ಜಿಗಿತ
ನಿಷೇಧ ಶಿಕ್ಷೆಯ ಬಳಿಕ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಣ ಆ್ಯಷಸ್ ಟೆಸ್ಟ್‌ನಲ್ಲಿ ಸ್ಮಿತ್ ಮೊದಲ ಬಾರಿಗೆ ಪಾಲ್ಗೊಂಡಿದ್ದರು. ಮೊದಲ ಪಂದ್ಯಗಳಲ್ಲಿ ಬಿರುಸಿನ ಬ್ಯಾಟಿಂಗ್ ಕೂಡ ನಡೆಸಿದ್ದರು. ಆ್ಯಷಸ್ ಮೊದಲ ಟೆಸ್ಟ್‌ನಲ್ಲಿ 144, 142 ರನ್ ಬಾರಿಸಿದ್ದರ ಪರಿಣಾಮ ಸ್ಮಿತ್, ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಗಮನಾರ್ಹ ಜಿಗಿತ ಕಂಡಿದ್ದರು.

ವಿರಾಟ್ ಡಕ್‌ಔಟ್
ಕೆಲ ದಿನಗಳ ಹಿಂದಷ್ಟೇ ಸ್ಮಿತ್ ಟೆಸ್ಟ್ ರ್ಯಾಂಕಿಂಗ್‌ನಲ್ಲಿ 2ನೇ ಸ್ಥಾನಕ್ಕೆ ಜಿಗಿಯುವ ಮೂಲಕ ಕೊಹ್ಲಿ ಹಿಂದಿಕ್ಕುವ ಮುನ್ಸೂಚನೆ ನೀಡಿದ್ದರು. ವೆಸ್ಟ್ ಇಂಡೀಸ್ ಪ್ರವಾಸ ಸರಣಿಯ ದ್ವಿತೀಯ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೊಹ್ಲಿ 0 ರನ್‌ಗೆ ವಿಕೆಟ್ ಒಪ್ಪಿಸಿದ್ದರಿಂದ ಸ್ಮಿತ್ ಅಗ್ರ ಸ್ಥಾನಕ್ಕೇರಲು ದಾರಿಯಾಗಿದೆ. ಇದೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ 76 ರನ್ ಗಳಿಸಿದ್ದರು.

ಕೊಹ್ಲಿಗಿಂತ 1 ಅಂಕ ಜಾಸ್ತಿ
ಸದ್ಯ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಸ್ಮಿತ್ 904 ರೇಟಿಂಗ್ ಪಾಯಿಂಟ್ ಹೊಂದಿದ್ದರೆ, ದ್ವಿತೀಯ ಸ್ಥಾನಿ ಕೊಹ್ಲಿ 903, ತೃತೀಯ ಸ್ಥಾನಿ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ 878, 4ನೇ ಸ್ಥಾನಿ ಭಾರತದ ಚೇತೇಶ್ವರ ಪೂಜಾರ 825, 5ನೇ ಸ್ಥಾನಿ ನ್ಯೂಜಿಲೆಂಡ್‌ನ ಹೆನ್ರಿ ನಿಕೋಲ್ಸ್ 749 ಪಾಯಿಂಟ್ ಗಳಿಸಿದ್ದಾರೆ.

3ನೇ ಸ್ಥಾನದಲ್ಲಿ ಬೂಮ್ರಾ
ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್, ದಕ್ಷಿಣ ಆಫ್ರಿಕಾದ ಕಾಗಿಸೋ ರಬಾಡ ಮೊದಲೆರಡು ಶ್ರೇಯಾಂಕದಲ್ಲಿದ್ದಾರೆ. ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ 3ನೇ ಸ್ಥಾನ, ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್ 4ನೇ, ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ 5ನೇ ಸ್ಥಾನ ಪಡೆದುಕೊಂಡಿದ್ದಾರೆ.

ಭಾರತಕ್ಕೆ ಅಗ್ರಸ್ಥಾನ
ಆಲ್ ರೌಂಡರ್‌ಗಳಲ್ಲಿ ವಿಂಡೀಸ್‌ನ ಜೇಸನ್ ಹೋಲ್ಡರ್, ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್, ಬಾಂಗ್ಲಾದ ಶಕೀಬ್ ಅಲ್ ಹಸನ್, ಭಾರತದ ರವೀಂದ್ರ ಜಡೇಜಾ ಮೊದಲ ನಾಲ್ಕು ಸ್ಥಾನಗಳಲ್ಲಿದ್ದಾರೆ. ತಂಡಗಳ ರ್ಯಾಂಕಿಂಗ್ ಯಾದಿಯಲ್ಲಿ ಭಾರತ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಮೊದಲ 5 ಸ್ಥಾನ ಪಡೆದುಕೊಂಡಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications