ಸ್ಟೀವ್ ಸ್ಮಿತ್ ಗೆ ಐಸಿಸಿ ಕ್ರಿಕೆಟರ್ 2015 ಪ್ರಶಸ್ತಿ
ಬೆಂಗಳೂರು, ಡಿ.23 : ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಅವರು 2015ನೇ ಸಾಲಿನ ಐಸಿಸಿ ವರ್ಷದ ಕ್ರಿಕೆಟರ್ 2015 (ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಟ್ರೋಫಿ) ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಜೊತೆಗೆ ವರ್ಷದ ಶ್ರೇಷ್ಠ ಟೆಸ್ಟ್ ಕ್ರಿಕೆಟರ್ ಪ್ರಶಸ್ತಿ ಕೂಡಾ ಸ್ಮಿತ್ ಪಾಲಾಗಿದೆ. ಈ ವರ್ಷದ ಐಸಿಸಿ ಶ್ರೇಷ್ಠ ಕ್ರಿಕೆಟರ್ ಗಳ ಪಟ್ಟಿಯಲ್ಲಿ ಯಾವ ಭಾರತೀಯ ಆಟಗಾರರು ಸ್ಥಾನ ಪಡೆದುಕೊಂಡಿಲ್ಲ.
ದಕ್ಷಿಣ ಆಫ್ರಿಕಾದ ಏಕದಿನ ಕ್ರಿಕೆಟ್ ತಂಡದ ನಾಯಕ ಎಬಿ ಡಿ ವಿಲಿಯರ್ಸ್ ಅವರು ಐಸಿಸಿ ಏಕದಿನ ಕ್ರಿಕೆಟರ್ 2015 ಟ್ರೋಫಿ ಗೆದ್ದಿದ್ದಾರೆ. ಆಸ್ಟ್ರೇಲಿಯಾದ ವೇಗಿ ಜೋಶ್ ಹಾಜೇಲ್ ವುಡ್ ಅವರಿಗೆ ಉದಯೋನ್ಮುಖ ತಾರೆ ಪ್ರಶಸ್ತಿ ಲಭಿಸಿದೆ.

ಐಸಿಸಿ ವಾರ್ಷಿಕ ಪ್ರಶಸ್ತಿ ಪಟ್ಟಿ 2015
* ಐಸಿಸಿ ವರ್ಷದ ಕ್ರಿಕೆಟರ್ (ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿ)- ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)
* ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟರ್- ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)
* ಐಸಿಸಿ ವರ್ಷದ ಏಕದಿನ ಕ್ರಿಕೆಟರ್ -ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ)
* ಐಸಿಸಿ ವರ್ಷದ ಮಹಿಳಾ ಏಕದಿನ ಕ್ರಿಕೆಟರ್ - ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯಾ)
* ಐಸಿಸಿ ವರ್ಷದ ಮಹಿಳಾ ಟಿ20 ಕ್ರಿಕೆಟರ್- ಸ್ಟಫನಿ ಟೇಲರ್ (ವೆಸ್ಟ್ ಇಂಡೀಸ್)
* ಐಸಿಸಿ ವರ್ಷದ ಟಿ20 ಉತ್ತಮ ಪ್ರದರ್ಶಕ - ಫಾಫ್ ಡು ಪ್ಲೆಸಿಸ್ (ದಕ್ಷಿಣ ಆಫ್ರಿಕಾ) (119, 56ಎಸೆತಗಳು, 11x4, 5x6) ವೆಸ್ಟ್ ಇಂಡೀಸ್ ವಿರುದ್ಧ 11 ಜನವರಿ 2015, ಜೋಹಾನ್ಸ್ ಬರ್ಗ್)

* ಐಸಿಸಿ ವರ್ಷದ ಉದಯೋನ್ಮುಖ ಆಟಗಾರ- ಜೋಶ್ ಹಾಜೇಲ್ ವುಡ್ (ಆಸ್ಟ್ರೇಲಿಯಾ)
* ಐಸಿಸಿ ವರ್ಷದ ಸಹಾಯಕ ಸಂಸ್ಥೆ : ಕುರಂ ಖಾನ್ (ಯುಎಇ)
* ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿ: ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್)
* ಐಸಿಸಿ ಅಂಪೈರ್ ಪ್ರಶಸ್ತಿ (ಡೇವಿಡ್ ಶೆಫರ್ಡ್ ಪ್ರಶಸ್ತಿ) -ರಿಚರ್ಡ್ ಕೆಟರ್ಲ್ ಬರೋ (ಇಂಗ್ಲೆಂಡ್)
(ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications