ಭಾರತದ ವಿರುದ್ಧ ಸ್ಮಿತ್ ಇನಿಂಗ್ಸ್ ಆರಂಭಿಸುತ್ತಾರಾ? ಕೋಚ್ ಹೇಳಿದ್ದೇನು?
ಈ ವರ್ಷದ ಬಹು ನಿರೀಕ್ಷಿತ ಟೆಸ್ಟ್ ಸರಣಿಗಳಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಗೂ ಸ್ಥಾನವಿದೆ. ಈ ಸರಣಿಗೆ ಇನ್ನು ತಿಂಗಳುಗಳು ಬಾಕಿ ಇದ್ದು, ಈಗಿನಿಂದಲೇ ಈ ಸರಣಿಯ ಬಗ್ಗೆ ಚರ್ಚೆಗಳು ಆರಂಭವಾಗಿವೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಡಿಯಲ್ಲಿ ಆಡಲಾಗುವ ಈ ಸರಣಿಯಲ್ಲಿ ಐದು ಟೆಸ್ಟ್ ಪಂದ್ಯಗಳನ್ನು ಆಯೋಜಿಸಲಾಗಿದೆ. ಈಗಾಗಲೇ ಆಸೀಸ್ ನೆಲದಲ್ಲಿ ಗೆಲುವಿನ ರುಚಿ ನೋಡಿರುವ ಭಾರತ, ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದೆ.
ಈಗಾಗಲೇ ಈ ಟೆಸ್ಟ್ ಸರಣಿ ಆಸ್ಟ್ರೇಲಿಯಾ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವುದರಿಂದ, ಆರಂಭಿಕರಾಗಿ ಕಣಕ್ಕೆ ಇಳಿಯುವುದು ಯಾರು ಎಂಬ ಪ್ರಶ್ನೆಗಳು ಎದ್ದಿವೆ. ಒಂದು ಮಾಹಿತಿಯ ಪ್ರಕಾರ ಉಸ್ಮಾನ್ ಖವಾಜಾ ಅವರು ಇನಿಂಗ್ಸ್ ಆರಂಭಿಸುವುದು ಪಕ್ಕಾ ಆದಂತೆ ಕಾಣುತ್ತದೆ. ಆದರೆ ಇವರೊಂದಿಗೆ ಇನ್ನಿಂಗ್ಸ್ ಆರಂಭಿಸುವ ಇನ್ನೊರ್ವ ಬ್ಯಾಟರ್ ಹುಡುಕಾಟ ಜೋರಾಗಿದೆ.

ಕೋಚ್ ಹೇಳಿದ್ದೇನು?
ನವೆಂಬರ್ 22 ರಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಬಗ್ಗೆ ಆಸ್ಟ್ರೇಲಿಯಾದ ಹೆಡ್ ಕೋಚ್ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಮೌನ ಮುರಿದಿದ್ದಾರೆ. ಸ್ಟೀವನ್ ಸ್ಮಿತ್ ಅವರನ್ನು ಈಗಾಗಲೇ ಓಪನರ್ ಆಗಿ ಪ್ರಯೋಗಿಸಿದ್ದೇವೆ. ಈ ವೇಳೆ ಅವರ ಸಾಧನೆ ತೃಪ್ತಿದಾಯಕವಿಲ್ಲ ಎಂದು ಕೋಚ್ ತಿಳಿಸಿದ್ದಾರೆ. ಸ್ಮಿತ್ 4 ಟೆಸ್ಟ್ ಪಂದ್ಯಗಳಲ್ಲಿ ಇನಿಂಗ್ಸ್ ಆರಂಭಿಸಿದ್ದು 28.50 ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.
ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಆಂಡ್ರ್ಯೂ ಮೆಕ್‌ಡೊನಾಲ್ಡ್, ಸ್ಟೀವನ್ ಸ್ಮಿತ್ ಒಬ್ಬ ಪ್ರತಿಭಾವಂತ ಆಟಗಾರ. ಕಳೆದ ದಶಕದಲ್ಲಿ ಅವರು ಆಸೀಸ್ ಬ್ಯಾಟಿಂಗ್‌ಗೆ ಆಧಾರ. ಆದರೆ ಅವರು ಆರಂಭಿಕರಾಗಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದಾರೆ. ಸ್ಮಿತ್ ಯಾವ ಕ್ರಮಾಂಕದಲ್ಲಿ ಆಡುತ್ತಾರಾ ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲೂ ಇದೆ. ನಮಗೂ ಈ ಬಗ್ಗೆ ಚಿಂತೆ ಇದೆ. ಆದರೆ ಈ ವಿಷಯದ ಬಗ್ಗೆ ನಾವು ಯಾವುದೇ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಈ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿವೆ ಎಂದಿದ್ದಾರೆ.

ಸ್ಟೀವನ್ ಸ್ಮಿತ್ ದೇಶೀಯ ಟೂರ್ನಿಯಲ್ಲಿ ಆಡಿದರೆ, ಆ ತಂಡದ ಪರ ಅವರು ಯಾವ ಸ್ಥಾನದಲ್ಲಿ ಆಡುತ್ತಾರೆ ಎಂಬುದನ್ನು ಗಮನಿಸತ್ತೇವೆ. ಸ್ಮಿತ್ ಅವರ ಬ್ಯಾಟಿಂಗ್ ಸ್ಥಾನವನ್ನು ನಿರ್ಧರಿಸುವಲ್ಲಿ ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್ ಕೂಡ ಪಾತ್ರ ವಹಿಸುತ್ತಾರೆ ಎಂದು ಮೆಕ್‌ಡೊನಾಲ್ಡ್ ಹೇಳಿದರು. ನಾವು ಸ್ಟೀವ್ ಸ್ಮಿತ್ ಅವರನ್ನು ಆರಂಭಿಕ ಸ್ಥಾನದಿಂದ ಕೆಳಗಿಳಿಸಿದರೆ, ಬೇರೆಯವರು ಅಲ್ಲಿಗೆ ಹೋಗಬೇಕಾಗುತ್ತದೆ. ಅಲ್ಲದೆ ಕ್ಯಾಮರೂನ್ ಗ್ರೀನ್ ನಾಲ್ಕನೇ ಕ್ರಮಾಂಕದಲ್ಲಿ ಭರವಸೆ ಮೂಡಿಸಿದ್ದಾರೆ ಎಂದು ಕೋಚ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications