ಶ್ರೀಲಂಕಾ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಗಾಲೆಯಲ್ಲಿ ಮೊದಲ ಟೆಸ್ಟ್ ಆಡುತ್ತಿದೆ. ಟಾಸ್ ಗೆದ್ದ ಪ್ರವಾಸಿ ತಂಡ ಬ್ಯಾಟಿಂಗ್ ಮಾಡಲು ಮುಂದಾಯಿತು. ಬಹುವರ್ಷಗಳ ಬಳಿಕ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತಿರುವ ಸ್ಟೀವನ್ ಸ್ಮಿತ್, ಅಬ್ಬರಿಸಿದರು. ಮೊದಲ ಆಟದಲ್ಲಿ ಪ್ರವಾಸಿ ತಂಡ ಸಂಪೂರ್ಣ ಮೇಲುಗೈ ಸಾಧಿಸಿದೆ. ಕೇವಲ ಎರಡು ವಿಕೆಟ್ ಕಳೆದುಕೊಂಡಿರುವ ಆಸೀಸ್ 330 ರನ್ ಕಲೆ ಹಾಕಿದ್ದು, ದಿನದ ಗೌರವ ತನ್ನದಾಗಿಸಿಕೊಂಡಿದೆ.
ಗಾಲೆಯಲ್ಲಿ ಬುಧವಾರದಿಂದ ಆರಂಭವಾದ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಬ್ಯಾಟರ್‌ಗಳು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆರಂಭಿಕರಾಗಿ ಕಣಕ್ಕೆ ಇಳಿದ ಉಸ್ಮಾನ್ ಖವಾಜ್ ಹಾಗೂ ಟ್ರಾವಿಸ್ ಹೆಡ್, ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದರು. ಇವರಿಬ್ಬರೂ ಟೆಸ್ಟ್‌ನಲ್ಲಿ ಟಿ20 ಶೈಲಿಯ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಮೊದಲ ವಿಕೆಟ್‌ಗೆ ಈ ಜೋಡಿ 14.3 ಓವರ್‌ಗಳಲ್ಲಿ 92 ರನ್ ಸೇರಿಸಿ ತಂಡಕ್ಕೆ ಆಧಾರವಾಯಿತು. 40 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಹಾಯದಿಂದ 57 ರನ್ ಬಾರಿಸಿರುವ ಹೆಡ್ ಜಯಸೂರ್ಯಗೆ ಔಟ್ ಆದರು.

ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಮಾರ್ನಸ್ ಲಂಬುಶೇನ್ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪುರಕವಾಗಿ ಬ್ಯಾಟ್ ಮಾಡಲಿಲ್ಲ. ಆದರೇ ಮೂರನೇ ವಿಕೆಟ್‌ಗೆ ಜೊತೆಯಾದ ಆರಂಭಿಕ ಉಸ್ಮಾನ್ ಖವಾಜ್ ಹಾಗೂ ನಾಯಕ ಸ್ಟೀವನ್ ಸ್ಮಿತ್ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿ 307 ಎಸೆತಗಳಲ್ಲಿ ಅಜೇಯ 195 ರನ್ ಬಾರಿಸಿದೆ. ಉಸ್ಮಾನ್ ಅಜೇಯ 147 ರನ್ ಸಿಡಿಸಿದರೆ, ಸ್ಮಿತ್ ಅಜೇಯ 104 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಇತಿಹಾಸಲ್ಲಿ ಖವಾಜ ವಿಶೇಷ ದಾಖಲೆಯನ್ನು ಬರೆದರು. ಈ ಟೂರ್ನಿಯಲ್ಲಿ 3000ಕ್ಕೂ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಇವರು ಸ್ಥಾನವನ್ನು ಪಡೆದರು. ಉಸ್ಮಾನ್ ಖವಾಜಾ WTCಯಲ್ಲಿ ಮೂರು ಸಾವಿರ ರನ್ ಗಳಿಸಿದ ಆರನೇ ಬ್ಯಾಟ್ಸ್‌ಮನ್ ಆದರು. ಇದೇ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಟ್ರಾವಿಸ್ ಹೆಡ್ ಸಹ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ 3000 ರನ್ ಗಡಿ ದಾಟಿದ್ದಾರೆ.

ಜೋ ರೂಟ್, 5543 ರನ್
ಮಾರ್ನಸ್ ಲಂಬುಶೇನ್, 4156 ರನ್
ಸ್ಟೀವನ್ ಸ್ಮಿತ್, 3904 ರನ್
ಬೆನ್ ಸ್ಟೋಕ್ಸ್, 3312 ರನ್
ಉಸ್ಮಾನ್ ಖವಾಜಾ, 3017 ರನ್
ಟ್ರಾವಿಸ್ ಹೆಡ್, 3015 ರನ್,
ನಾಯಕರಾಗಿ ಕಣಕ್ಕೆ ಇಳಿದಿರುವ ಸ್ಟೀವನ್ ಸ್ಮಿತ್ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಲಂಕಾ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸುತ್ತಿದ್ದಂತೆ, ಈ ಫಾರ್ಮೆಟ್‌ನಲ್ಲಿ 35 ಶತಕ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡರು. ಈ ಮೂಲಕ ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದ್ದಾರೆ. ಈ ಶತಕದ ಸಹಾಯದಿಂದ ಸ್ಮಿತ್ ಸುನಿಲ್ ಗವಾಸ್ಕರ್, ಬ್ರಿಯಾನ್ ಲಾರಾ, ಯೂನಿಸ್ ಖಾನ್ ಮತ್ತು ಮಹೇಲಾ ಜಯವರ್ಧನೆ ಅವರ ದಾಖಲೆಯನ್ನು ಹಿಂದಿಕ್ಕಿದರು.
ಸಚಿನ್ ತೆಂಡೂಲ್ಕರ್, 51
ಜಾಕ್ ಕಾಲಿಸ್, 45
ರಿಕ್ಕಿ ಪಾಂಟಿಂಗ್, 41
ಕುಮಾರ್ ಸಂಗಾಕ್ಕರ್, 38
ಜೋ ರೂಟ್, 36
ರಾಹುಲ್ ದ್ರಾವಿಡ್, 36