For Quick Alerts
ALLOW NOTIFICATIONS  
For Daily Alerts
 

AUS vs IND Test: ಬಾರ್ಡರ್‌ ಗವಾಸ್ಕರ್‌ ಟ್ರೋಫಿಯಲ್ಲಿ ದಾಖಲೆ ಬರೆದ ಸ್ಮಿತ್

ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಸ್ಟೀವನ್‌ ಸ್ಮಿತ್‌ ಬಾರ್ಡರ್‌ ಗವಾಸ್ಕರ್‌ ಸರಣಿಯಲ್ಲಿ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿದ್ದಾರೆ. ಮೆಲ್ಬೋರ್ನ್‌ನ ಐತಿಹಾಸಿಕ ಅಂಗಳದಲ್ಲಿ ಕ್ಲಾಸಿಕ್‌ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಸ್ಮಿತ್ ಅಬ್ಬರಿಸಿದರು. ಇವರು ಪ್ರಸಕ್ತ ಸರಣಿಯಲ್ಲಿ ಎರಡನೇ ಬಾರಿಗೆ ಮೂರಂಕಿ ಮುಟ್ಟಿ ಸಂಭ್ರಮಿಸಿದರು. ಈ ಮೂಲಕ ಇವರು ಒಂದೇ ಇನಿಂಗ್ಸ್‌ನಲ್ಲಿ ಅವರು ಹಲವು ದಾಖಲೆಗಳನ್ನು ಬರೆದರು. ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಸ್ಮಿತ್‌ ಇತಿಹಾಸ ನಿರ್ಮಿಸಿದರು.

ಬಾಕ್ಸಿಂಗ್‌ ಡೇ ಟೆಸ್ಟ್‌ನ ಎರಡನೇ ದಿನದಂದು ತಮ್ಮ ಶಿಸ್ತು ಬದ್ಧ ಆಟವನ್ನು ಆಡಿದ ಸ್ಮಿತ್‌ ಟೀಮ್ ಇಂಡಿಯಾದ ಬೌಲರ್‌ಗಳನ್ನು ಕಾಡಿದರು. ಇವರು ಮೊದಲ ದಿನ 68 ರನ್‌ಗಳಿಸಿ ಅಜೇಯರಾಗಿ ಉಳಿದಿದ್ದರು. ಇಲ್ಲಿಂದ ಆಟವನ್ನು ಮುಂದುವರಿಸಿ ನೈಜ ಆಟವನ್ನು ಆಡಿದರು. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಸ್ಮಿತ್‌ ಮಿಂಚಿದರು. ಐತಿಹಾಸಿಕ ಎಂಸಿಜೆ ಅಂಗಳದಲ್ಲಿ ಮೂರಂಕಿ ಮುಟ್ಟಿದರು.

Steven Smith Creates History in Border-Gavaskar Trophy with Stunning Boxing Day Test Performance

ಆಸ್ಟ್ರೇಲಿಯಾದ ಭರವಸೆಯ ಆಟಗಾರ ಸ್ಟೀವನ್ ಸ್ಮಿತ್ ಕಳೆದ 500 ದಿನಗಳಿಂದ ಶತಕ ವಂಚಿತರಾಗಿದ್ದರು. ಆದರೆ ಬ್ರಿಸ್ಬೇನ್‌ ಅಂಗಳದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದರು. ಅದೇ ಫಾರ್ಮ್‌ನ್ನು ಇವರು ಮುಂದುವರೆಸಿದರು. 167 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್‌ ನೆರವಿನಿಂದ 103 ರನ್‌ ಸಿಡಿಸಿದರು. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ 34ನೇ ಶತಕ ಬಾರಿಸಿ ಅಬ್ಬರಿಸಿದರು.


ಸ್ಮಿತ್‌ ದಾಖಲೆ

ಸ್ಟೀವನ್‌ ಸ್ಮಿತ್‌ ಭಾರತದ ವಿರುದ್ಧ ಗರಿಷ್ಠ ಶತಕ ಬಾರಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು ಭಾರತದ ವಿರುದ್ಧ 11 ಶತಕಗಳನ್ನು ಸಿಡಿಸಿದರು. ಸ್ಟೀವನ್‌ ಸ್ಮಿತ್‌ ಬಾರ್ಡರ್‌ ಗವಾಸ್ಕರ್‌ ಸರಣಿಯಲ್ಲಿ ಗರಿಷ್ಠ ಶತಕ ಬಾರಿಸಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡರು. ಮೆಲ್ಬೋರ್ನ್‌ನಲ್ಲಿ ಶತಕ ಬಾರಿಸುವ ಮೂಲಕ ಇವರು ಈ ಸರಣಿಯಲ್ಲಿ 10ನೇ ಬಾರಿ ಶತಕ ಬಾರಿಸಿ ಸಂಭ್ರಮಿಸಿದರು. ಇದಕ್ಕೂ ಮೊದಲು ಬಾರ್ಡರ್‌ ಗವಾಸ್ಕರ್‌ ಸರಣಿಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆ ಟೀಮ್ ಇಂಡಿಯಾದ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರ ಹೆಸರಲ್ಲಿನಲ್ಲಿತ್ತು. ಸಚಿನ್ ತೆಂಡೂಲ್ಕರ್‌ ಸರಣಿಯಲ್ಲಿ 9 ಶತಕ ಬಾರಿಸಿದ್ದಾರೆ.

Steven Smith Creates History in Border-Gavaskar Trophy with Stunning Boxing Day Test Performance

ಕುಕ್‌ ದಾಖಲೆ ಮೀರಿದ ಸ್ಮಿತ್‌

ಸ್ಟೀವನ್‌ ಸ್ಮಿತ್‌ ಮೆಲ್ಬೋರ್ನ್‌ ಅಂಗಳದಲ್ಲಿ ಶತಕ ಬಾರಿಸುತ್ತಿದ್ದಂತೆ ಇಂಗ್ಲೆಂಡ್ ತಂಡದ ಅಲಿಸ್ಟರ್‌ ಕುಕ್, ನ್ಯೂಜಿಲೆಂಡ್‌ ತಂಡದ ಕೇನ್‌ ವಿಲಿಯಮ್ಸನ್‌ ಅವರ ಗರಿಷ್ಠ ಶತಕಗಳ ದಾಖಲೆಯನ್ನು ಮೀರಿ ನಿಂತರು. ಸ್ಮಿತ್ 114 ಟೆಸ್ಟ್‌ ಪಂದ್ಯಗಳ 201 ಇನಿಂಗ್ಸ್‌ಗಳಲ್ಲಿ 34 ಶತಕ ಬಾರಿಸಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡರು.

ಏಳನೇ ವಿಕೆಟ್‌ಗೆ ಶತಕದ ಜೊತೆಯಾಟ

ಸ್ಟೀವನ್‌ ಸ್ಮಿತ್‌ ಹಾಗೂ ನಾಯಕ ಪ್ಯಾಟ್‌ ಕಮಿನ್ಸ್‌ ನಡುವಣ ಏಳನೇ ವಿಕೆಟ್‌ಗೆ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 135 ಎಸೆತಗಳಲ್ಲಿ 112 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಕಮಿನ್ಸ್‌ 63 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ 49 ರನ್‌ ಬಾರಿಸಿ ಜಡೇಜಾಗೆ ಕ್ಯಾಚ್ ನೀಡಿದರು.

Story first published: Friday, December 27, 2024, 6:33 [IST]
Other articles published on Dec 27, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+