Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Steven Smith: ಆಡಿಲೇಡ್‌ ಟೆಸ್ಟ್ ಆರಂಭಕ್ಕೂ ಮುನ್ನವೇ ಆಸೀಸ್‌ಗೆ ಪೆಟ್ಟು: ಬ್ಯಾಟರ್‌ಗೆ ಗಾಯ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್ ಡಿಸೆಂಬರ್ 6ರಿಂದ ಆಡಿಲೇಡ್‌ನಲ್ಲಿ ನಡೆಯಲಿದೆ. ಈ ಟೆಸ್ಟ್ ಪಂದ್ಯದ ಮೇಲೆ ಆಸೀಸ್‌ ಕಣ್ಣು ನೆಟ್ಟಿದೆ. ಮೊದಲ ಟೆಸ್ಟ್‌ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿರು ಆಸೀಸ್, ಎರಡನೇ ಟೆಸ್ಟ್ ಗೆಲುವಿನ ಅನಿವಾರ್ಯತೆ ಇದೆ. ಈ ಟೆಸ್ಟ್‌ಗೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಎರಡು ಪೆಟ್ಟು ಬಿದ್ದಿದೆ. ಈಗಾಗಲೇ ಸ್ಟಾರ್‌ ವೇಗದ ಬೌಲರ್‌ ಜೋಶ್‌ ಹ್ಯಾಜಲ್‌ವುಡ್ ತಂಡದಿಂದ ದೂರ ಸರಿದಿದ್ದು, ತಂಡದ ಚಿಂತೆಯನ್ನು ಹೆಚ್ಚಿಸಿದೆ. ಇದರ ಬೆನ್ನಲ್ಲೇ ಆತಿಥೇಯ ತಂಡಕ್ಕೆ ಮತ್ತೊಂದು ಪೆಟ್ಟು ಬಿದ್ದಿದೆ.

ಬಾರ್ಡರ್-ಗವಾಸ್ಕರ್ ಟ್ರೋಫಿ ಆಸ್ಟ್ರೇಲಿಯಾಕ್ಕೆ ಇಲ್ಲಿಯವರೆಗೆ ಚೆನ್ನಾಗಿ ಬಂದಿಲ್ಲ. ಪರ್ತ್‌ನಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್‌ನಲ್ಲಿ ಆತಿಥೇಯ ತಂಡ ಸೋಲು ಅನುಭವಿಸಿದೆ. ಇದೀಗ ಅಡಿಲೇಡ್‌ನಲ್ಲಿ ನಡೆಯಲಿರುವ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್‌ಗೂ ಮುನ್ನ ತಂಡದ ಅನುಭವಿ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಗಾಯಗೊಂಡಿರುವ ಸುದ್ದಿ ಬೆಳಕಿಗೆ ಬಂದಿದೆ. ಅಡಿಲೇಡ್ ಟೆಸ್ಟ್‌ಗೂ ಮುನ್ನ ಆಸ್ಟ್ರೇಲಿಯಕ್ಕೆ ಇದು ಎರಡನೇ ದೊಡ್ಡ ಹಿನ್ನಡೆಯಾಗಿದೆ.

Steven Smith Suffers Finger Injury Ahead of Adelaide Test in Border-Gavaskar Trophy

ಬ್ಯಾಟರ್‌ಗೆ ಗಾಯ

ಆಡಿಲೇಡ್‌ನಲ್ಲಿ ನಡೆಯಲಿರುಬ ಹಗಲು ರಾತ್ರಿ ಟೆಸ್ಟ್‌ ಪಂದ್ಯದಿಂದ ಸ್ಟಾರ್ ವೇಗದ ಬೌಲರ್‌ ಜೋಶ್‌ ಹ್ಯಾಜಲ್‌ವುಡ್‌ ಈಗಾಗಲೇ ತಂಡದಿಂದ ಹೊರ ನಡೆದಿರುವುದು ತಂಡಕ್ಕೆ ಪೆಟ್ಟು ಬಿದ್ದಿದೆ. ಈ ಬೆನ್ನಲ್ಲೆ ಈಗ ತಂಡದ ಸ್ಟಾರ್‌ ಬ್ಯಾಟರ್‌ ಒಬ್ಬರು ಸಹ ಗಾಯಕ್ಕೆ ತುತ್ತಾಗಿದ್ದಾರೆ. ಗಾಯಕ್ಕೆ ತುತ್ತಾಗಿರುವ ಆಟಗಾರ ಸ್ಟೀವನ್ ಸ್ಮಿತ್. ಸ್ಮಿತ್‌ ಗಾಯಕ್ಕೆ ತುತ್ತಾಗಿರುವುದು ಆಸೀಸ್‌ಗೆ ಒಳ್ಳೆಯ ಸೂಚನೆಯಲ್ಲ. ಸಾಮಾಜಿಕ ತಾಣದಲ್ಲಿ ಪತ್ರಕರ್ತ ವಿಮಲ್‌ ಕುಮಾರ್‌ ಅವರು ವಿಡಿಯೋ ಹಂಚಿಕೊಂಡಿದ್ದು, ಈ ವೇಳೆ ಬೆಳಕಿಗೆ ಬಂದಿದೆ.

ಎರಡನೇ ಟೆಸ್ಟ್‌ಗೂ ಮುನ್ನ ನಡೆದ ಅಭ್ಯಾಸದ ವೇಳೆ ಸ್ಟೀವನ್‌ ಸ್ಮಿತ್ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಸ್ಮಿತ್ ಗಾಯದ ಸ್ವರೂಪ ಹೇಗಿದೆ ಎಂದು ತಿಳಿದು ಬಂದಿಲ್ಲ. ಅವರು ಎರಡನೇ ಟೆಸ್ಟ್‌ನಲ್ಲಿ ಭಾಗವಹಿಸುತ್ತಾರೋ ಇಲ್ಲವೋ ಅನ್ನುವ ಬಗ್ಗೆಯೂ ಮಾಹಿತಿ ಇಲ್ಲ ಎಂದು ವಿಡಿಯೋದಲ್ಲಿ ಹೇಳಲಾಗಿದೆ.

Steven Smith Suffers Finger Injury Ahead of Adelaide Test in Border-Gavaskar Trophy

ವಿಶ್ವದ ಸ್ಟಾರ್ ಬ್ಯಾಟರ್‌ಗಳ ಸಾಲಿನಲ್ಲಿ ನೋಡಲಾಗುವ ಸ್ಮಿತ್‌ ಅವರಿಗೆ ಪ್ರಸಕ್ತ ವರ್ಷ ಅಷ್ಟೊಂದು ಉತ್ತಮವಾಗಿಲ್ಲ. ಈ ವರೆಗೆ ಅವರು ಕೇವಲ ಆರು ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, ಈ ವೇಳೆ ಅವರು 25ರ ಸರಾಸರಿಯಲ್ಲಿ 230 ರನ್‌ ಸಿಡಿಸಿದ್ದಾರೆ. ಈ ವರ್ಷ ಅವರು ಒಂದೇ ಒಂದು ಶತಕವನ್ನೂ ಸಿಡಿಸಿಲ್ಲ. ಅಡಿಲೇಡ್ ಟೆಸ್ಟ್‌ನಲ್ಲಿ ಪಾಲ್ಗೊಳ್ಳುತ್ತಾರೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ.

ಪರ್ತ್ ಟೆಸ್ಟ್‌ನಲ್ಲಿ ಸ್ಮಿತ್ ವಿಫಲ

ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್‌ನಲ್ಲಿ ಸ್ಮಿತ್ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಇವರು ಮೊದಲ ಇನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ್ದರೆ, ಎರಡನೇ ಇನಿಂಗ್ಸ್‌ನಲ್ಲಿ 17 ರನ್‌ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 295 ರನ್‌ಗಳಿಂದ ಸೋಲು ಅನುಭವಿಸಿತ್ತು. ಹೀಗಾಗಿ ಸ್ಮಿತ್‌ ಗಾಯಕ್ಕೆ ತುತ್ತಾಗಿರುವುದು ಆಸೀಸ್‌ ಪಡೆಯ ನಿದ್ದೆಗೆಡಿಸಿದೆ.

Story first published: Tuesday, December 3, 2024, 15:08 [IST]
Other articles published on Dec 3, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+