For Quick Alerts
ALLOW NOTIFICATIONS  
For Daily Alerts
 

Steve Smith: ಬಿಗ್ ಬ್ಯಾಷ್ ಲೀಗ್‌ನಲ್ಲಿ ಸ್ಮಿತ್‌ ಶತಕ

ಐಪಿಎಲ್‌ ಮೆಗಾ ಹರಾಜಿನಲ್ಲಿ ಮಾಲೀಕರ ಚಿತ್ತವನ್ನು ಕದಿಯುವಲ್ಲಿ ವಿಫಲರಾಗಿರುವ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್‌ ಸ್ಟೀವನ್ ಸ್ಮಿತ್‌, ಬಿಗ್‌ ಬ್ಯಾಷ್ ಲೀಗ್‌ ಆಡಲು ಇಳಿಯುತ್ತಿದ್ದಂತೆ ದಾಖಲೆ ಬರೆದಿದ್ದಾರೆ. ಭಾರತ ವಿರುದ್ಧ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅಮೋಘ ಫಾರ್ಮ್‌ಗೆ ಮರಳಿದ್ದ ಸ್ಮಿತ್ ಭರವಸೆ ಮೂಡಿಸಿದ್ದರು. ತಮ್ಮ ಇದೇ ಫಾರ್ಮ್‌ನ್ನು ಸ್ಮಿತ್ ಮುಂದುವರೆಸಿದ್ದಾರೆ. ಇವರು ಬಿಗ್ ಬ್ಯಾಷ್ ಲೀಗ್ ನ 30ನೇ ಪಂದ್ಯದಲ್ಲಿ ಸ್ಮಿತ್‌ ಆರ್ಭಟ ನಡೆಸಿ ತಂಡಕ್ಕೆ ಜಯದ ಮಾಲೆ ತೊಡಿಸಿದರು.

ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಡ್ನಿ ಸಿಕ್ಸರ್ ತಂಡ ಸ್ಮಿತ್ ಅವರ ಶತಕದ ಸಹಾಯದಿಂದ 20 ಓವರ್ ಗಳಲ್ಲಿ 3 ವಿಕೆಟ್‌ಗೆ 220 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಪರ್ತ್ ಸ್ಕಾರ್ಚರ್ಸ್ 20 ಓವರ್ ಗಳಲ್ಲಿ 7 ವಿಕೆಟ್‌ಗೆ 206 ರನ್‌ ಸೇರಿಸಿ ಸೋಲು ಕಂಡಿತು. ಸಿಡ್ನಿ ಸಿಕ್ಸರ್‌ ತಂಡ ಈ ಮೂಲಕ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆಯಿತು. ಸಿಡ್ನಿ ಆಡಿದ 8ಪಂದ್ಯಗಳಲ್ಲಿ 5 ಜಯ ದಾಖಲಿಸಿದೆ.

Steven Smith s Century Leads Sydney Sixers to Victory in Big Bash League

ಸ್ಟೀವನ್‌ ಸ್ಮಿತ್‌ ಭರ್ಜರಿ ಬ್ಯಾಟಿಂಗ್ ಮೂಲಕ ಸಿಡ್ನಿ ತಂಡಕ್ಕೆ ನೆರವಾದರು. ಇವರು 64 ಎಸೆತಗಳಲ್ಲಿ 10 ಬೌಂಡರಿ, 7 ಸಿಕ್ಸರ್ ಸಹಾಯದಿಂದ 121 ರನ್‌ ಸಿಡಿಸಿ ಅಬ್ಬರಿಸಿದರು. ಈ ಮೂಲಕ ಸ್ಮಿತ್‌ ಟಿ20 ಕ್ರಿಕೆಟ್‌ನಲ್ಲಿ ಬಾರಿಸಿದ ನಾಲ್ಕನೇ ಶತಕವಾಗಿದೆ. ಇನ್ನು ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಬಾರಿಸಿದ ಮೂರನೇ ಶತಕವಾಗಿದೆ. ಪರ್ತ್‌ ತಂಡದ ವಿರುದ್ಧ ಅಮೋಘ ಶತಕ ಬಾರಿಸುವ ಮೂಲಕ ಸ್ಮಿತ್ ಈ ಲೀಗ್‌ನಲ್ಲಿ ಅಧಿಕ ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಸ್ಮಿತ್ ಬೆನ್ ಮೆಕ್‌ಡರ್ಮಾಟ್ ಅವರ 3 ಶತಕಗಳ ದಾಖಲೆಯನ್ನು ಸಮಗೊಳಿಸಿದರು.

ಉಳಿದಂತೆ ಮೊಯಿಸಿಸ್ ಹೆನ್ರಿಂಕ್ಸ್‌ 28 ಎಸೆತಗಳಲ್ಲಿ 46 ರನ್ ಬಾರಿಸಿ ತಂಡಕ್ಕೆ ಆಧಾರವಾದರು.

ಪರ್ತ್‌ಗೆ ನಿರಾಸೆ

ಗುರಿಯನ್ನು ಹಿಂಬಾಲಿಸಿದ ಪರ್ತ್‌ ಸ್ಕವಾಚರ್ಸ್‌ ತಂಡದ ಆರಂಭಿಕರಾದ ಸಾಧರಣ ಜೊತೆಯಾಟದ ಕಾಣಿಕೆ ನೀಡಿದರು. ನಾಯಕ ಫಿನ್‌ ಅಲೇನ್‌ 15, ಆರನ್ ಹಾರ್ಡಿ 0 ರನ್‌ ಕಲೆ ಹಾಕುವಲ್ಲಿ ವಿಫಲರಾದರು, ಮೂರನೇ ವಿಕೆಟ್‌ಗೆ ಕೂಪರ್ ಕಾನೊಲಿ ಹಾಗೂ ಸ್ಯಾಮ್ ಫಾನ್ನಿಂಗ್ ಜೋಡಿ ಅರ್ಧಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ಸ್ಯಾಮ್ ಫಾನ್ನಿಂಗ್ 45 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 41 ರನ್ ಬಾರಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಆಶ್ಟನ್ ಟರ್ನರ್ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 66 ರನ್‌ ಬಾರಿಸಿ ತಂಡದ ಪರ ಮಿಂಚಿದರು. ಅಲ್ಲದೆ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಸಿಡ್ನಿ ತಂಡದ ಪರ ಭರವಸೆಯ ಆಟಗಾರ ಸಿನ್ ಅಬೋಟ್ 43 ರನ್‌ ನೀಡಿ 4 ವಿಕೆಟ್ ಕಬಳಿಸಿದರು.

Story first published: Saturday, January 11, 2025, 15:16 [IST]
Other articles published on Jan 11, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+