For Quick Alerts
ALLOW NOTIFICATIONS  
For Daily Alerts
 

Steve Smith: ಐಪಿಎಲ್‌ನಲ್ಲಿ ಹೇಗಿದೆ ಸ್ಟೀವನ್‌ ಸ್ಮಿತ್‌ ದಾಖಲೆ? ಯಾವೆಲ್ಲಾ ತಂಡಗಳ ಪರ ಆಡಿದ್ದಾರೆ ಸ್ಟಾರ್

ವಿಶ್ವದ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾಗಿರುವ ಸ್ಟೀವನ್‌ ಸ್ಮಿತ್‌, ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಸೋತ ಬಳಿಕ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ವೇಳೆ ಇವರು ತೆಗೆದುಕೊಂಡ ದಿಢೀರ್ ನಿರ್ಧಾರ ಭಾರೀ ಸದ್ದು ಮಾಡುತ್ತಿದೆ. ಬಹು ವರ್ಷಗಳ ಬಳಿಕ ಆಸ್ಟ್ರೇಲಿಯಾ ತಂಡವನ್ನು ಏಕದಿನ ಫಾರ್ಮೆಟ್‌ನಲ್ಲಿ ಮುನ್ನಡೆಸುವ ಅವಕಾಶವನ್ನು ಸ್ಮಿತ್ ಕೈ ಚೆಲ್ಲಿದ್ದಾರೆ. ಆಸೀಸ್ ತಂಡಕ್ಕೆ ಚಾಂಪಿಯನ್ಸ್ ಟ್ರೋಫಿ ಮುಕುಟವನ್ನು ತೊಡಿಸುವಲ್ಲಿ ಇವರು ಸಂಪೂರ್ಣ ವಿಫಲರಾಗಿದ್ದಾರೆ. ಇದರಿಂದಾಗಿ ಇವರು ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ರಾ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸ್ಟೀವನ್‌ ಸ್ಮಿತ್‌ ಏಕದಿನ ಫಾರ್ಮೆಟ್‌ಗೆ ವಿದಾಯ ಹೇಳಿರಬಹುದು. ಆದರೆ ಟಿ20 ಕ್ರಿಕೆಟ್ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡದ ಪರ ಅಖಾಡಕ್ಕೆ ಇಳಿಯಲಿದ್ದಾರೆ. ಇವರು ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸದ್ದು ಮಾಡಿರುವ ಆಟಗಾರ. ನಾಲ್ಕು ಫ್ರಾಂಚೈಸಿ ಪರ ಆಡಿ ಸೈ ಎನಿಸಿಕೊಂಡಿರುವ ಸ್ಟೀವನ್‌ ಸ್ಮಿತ್‌, ಈ ಬಾರಿಯ ಐಪಿಎಲ್‌ ಮೆಗಾ ಹರಾಜಿನಲ್ಲಿ ಅನ್‌ ಸೋಲ್ಡ್‌ ಆಗಿದ್ದಾರೆ.

Steven Smith s IPL Journey Stats Teams and His Impact on the League

ರಾಜಸ್ಥಾನ ರಾಯಲ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು 2 ವರ್ಷ ಬ್ಯಾನ್ ಮಾಡಿದಾಗ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡ ಐಪಿಎಲ್‌ನಲ್ಲಿ ಪದಾರ್ಪಣೆ ಮಾಡಿತು. ಆಗ ಈ ತಂಡವನ್ನು ಮುನ್ನಡೆಸಿದ ಹೆಗ್ಗಳಿಕೆ ಸ್ಟೀವನ್‌ ಸ್ಮಿತ್‌ ಅವರಿಗೆ ಸಲ್ಲುತ್ತದೆ. ಈ ವೇಳೆ ಅಮೋಘ ಪ್ರದರ್ಶನ ನೀಡಿದ್ದ ಇವರು ತಂಡವನ್ನು ಫೈನಲ್‌ಗೆ ಕರೆದೊಯ್ದಿದ್ದರು. ಆದರೆ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಸೋಲು ಕಂಡಿರುವ ಪುಣೆ ನಿರಾಸೆ ಅನುಭವಿಸಿತ್ತು.

ಹೇಗಿದೆ ಐಪಿಎಲ್‌ನಲ್ಲಿ ದಾಖಲೆ?

35 ವರ್ಷದ ಭರವಸೆಯ ಬ್ಯಾಟರ್‌ ಸ್ಮಿತ್‌ ಐಪಿಎಲ್‌ನಲ್ಲಿ ಆಡಿ ಅಬ್ಬರಿಸಿದ್ದಾರೆ. ಇವರು 103 ಪಂದ್ಯಗಳಲ್ಲಿ 34.51ರ ಸರಾಸರಿಯಲ್ಲಿ 2458 ರನ್‌ ಸಿಡಿಸಿದ್ದಾರೆ. ಈ ವೇಳೆ ಒಂದು ಶತಕ ಹಾಗೂ 11 ಅರ್ಧಶತಕಗಳು ಸೇರಿವೆ. ಇವರು ಕೊನೆಯ ಬಾರಿಗೆ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಿದ್ದರು. ಆಗ ಹರಾಜಿಗೂ ಮುನ್ನ ಸ್ಟೀವನ್‌ ಸ್ಮಿತ್ ಅವರನ್ನು ರಾಜಸ್ಥಾನ ಕೈ ಬಿಟ್ಟಿತ್ತು. ಇವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿಸಿತ್ತು. ಇವರಿಗೆ 2.20 ಕೋಟಿ ನೀಡಿದ್ದರು. ಆದರೆ 2021ರ ಐಪಿಎಲ್‌ನಲ್ಲಿ ಇವರು ಆಡಿದ 8 ಪಂದ್ಯಗಳಲ್ಲಿ ಜಸ್ಟ್‌ 152 ರನ್‌ ಸಿಡಿಸಿದ್ದಾರೆ.

Take a Poll

ಸ್ಟೀವನ್‌ ಸ್ಮಿತ್‌ ಪುಣೆ ವಾರಿಯರ್ಸ್‌, ರಾಜಸ್ಥಾನ ರಾಯಲ್ಸ್‌, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಪ್ರತಿನಿಧಿಸಿದ್ದಾರೆ. 2016ರ ಐಪಿಎಲ್‌ನ 25ನೇ ಪಂದ್ಯದಲ್ಲಿ ಸ್ಮಿತ್‌ ಅಬ್ಬರಿಸಿದ್ದರು. ಗುಜರಾತ್‌ ಲಯನ್ಸ್‌ ವಿರುದ್ಧದ ಪಂದ್ಯದಲ್ಲಿ ಸ್ಮಿತ್‌ ಶತಕದ ಸಾಧನೆಯನ್ನು ಮಾಡಿದ್ದರು. ಈ ಪಂದ್ಯದಲ್ಲಿ 54 ಎಸೆತಗಳನ್ನು ಎದುರಿಸಿ 8 ಬೌಂಡರಿ, 5 ಸಿಕ್ಸರ್ ಸಹಾಯದಿಂದ 101 ರನ್‌ ಬಾರಿಸಿದ್ದರು. ಈ ಪಂದ್ಯದಲ್ಲಿ ಪುಣೆ ತಂಡ ಸೋಲು ಕಂಡಿತ್ತು. ಆದರೆ ಸ್ಮಿತ್‌ ಇನಿಂಗ್ಸ್‌ ಇನ್ನು ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿದೆ.

Story first published: Wednesday, March 5, 2025, 14:21 [IST]
Other articles published on Mar 5, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+