For Quick Alerts
ALLOW NOTIFICATIONS  
For Daily Alerts
 

ಭಾರತದ ಪರವಾಗಿ ವೈಟ್‌ಬಾಲ್ ಕ್ರಿಕೆಟ್ ಆಡುವ ಆಶಯ ವ್ಯಕ್ತಪಡಿಸಿದ ಚೇತೇಶ್ವರ್ ಪೂಜಾರ

Still have aspirations to play white-ball cricket for Team India says Cheteshwar Pujara

ಭಾರತೀಯ ಕ್ರಿಕೆಟಿಗ ಚೇತೇಶ್ವರ್ ಪೂಜಾರ ಕಳೆದ ಹಲವು ವರ್ಷಗಳಿಂದ ಟೀಮ್ ಇಂಡಿಯಾ ಟೆಸ್ಟ್ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್‌ನ ಸ್ಪೆಶಲಿಸ್ಟ್ ಎನಿಸಿಕೊಂಡಿರುವ ಪೂಜಾರ ಟೀಮ್ ಇಂಡಿಯಾ ಪರವಾಗಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸ್ಥಾನವನ್ನು ಪಡೆಯಲು ವಿಫಲರಾಗಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಪೂಜಾರ ಟೀಮ್ ಇಂಡಿಯಾ ಪರವಾಗಿ ವೈಟ್‌ಬಾಲ್ ಮಾದರಿಯಲ್ಲಿ ಸ್ಥಾನವನ್ನು ಪಡೆಯುವ ಆಶಯವನ್ನು ಕೈಬಿಟ್ಟಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

33ರ ಹರೆಯದ ಚೇತೇಶ್ವರ್ ಪೂಜಾರ ಭಾರತ ತಂಡದ ಪರವಾಗಿ ಕೇವಲ 5 ಏಕದಿನ ಪಂದ್ಯಗಳಲ್ಲಿ ಮಾತ್ರವೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. 2014ರಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಕೊನೆಯ ಬಾರಿಗೆ ಚೇತೇಶ್ವರ್ ಪೂಜಾರ ಟೀಮ್ ಇಂಡಿಯಾವನ್ನು ಏಕದಿನ ಮಾದರಿಯಲ್ಲಿ ಪ್ರತಿನಿಧಿಸಿದ್ದರು.

"ನಾನಿನ್ನು ಕೂಡ ಟೀಮ್ ಇಂಡಿಯಾ ಪರವಾಗಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸ್ಥಾನವನ್ನು ಪಡೆಯುವ ಹಂಬಲವನ್ನು ಕೈಬಿಟ್ಟಿಲ್ಲ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇದೇ ಸಂದರ್ಭದಲ್ಲಿಇತರ ಆಟಗಾರರಿಗೆ ಹೆಚ್ಚಿನ ಪಂದ್ಯಗಳಲ್ಲಿ ಆಡುವ ಅವಕಾಶವಿರುವ ಕಾರಣ ಮರಳಿ ಸ್ಥಾನವನ್ನು ಪಡೆಯುವುದು ಕೂಡ ಕಠಿಣವಾಗಿದೆ" ಎಂದು ಸ್ಪೋರ್ಟ್ಸ್ ಟುಡೇ ಗೆ ನೀಡಿದ ಸಂದರ್ಶನದಲ್ಲಿ ಪೂಜಾರ ಹೇಳಿದ್ದಾರೆ.

"ಲಾಕ್‌ಡೌನ್‌ನ ನಂತರ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಯಾವುದೇ ಪಂದ್ಯದ ಅಭ್ಯಾಸದಲ್ಲಿ ನಾನು ಪಾಲ್ಗೊಂಡಿರಲಿಲ್ಲ. ಆಸ್ಟ್ರೇಲಿಯಾದಂತಾ ದೊಡ್ಡ ಸರಣಿಗೆ ಅಭ್ಯಾಸವಿಲ್ಲದೆ ತೆರಳುವುದು ತುಂಬಾ ಕಠಿಣ. ಕೊರೊನಾ ವೈರಸ್‌ನ ಸಂದರ್ಭಗಳು ಇಲ್ಲದಿದ್ದರೆ ನಾನು ದೇಶೀಯ ಕ್ರಿಕೆಟ್‌ನಮಲ್ಲಿ ಪಾಲ್ಗೊಳ್ಳುತ್ತಿದ್ದೆ. ಆದರೆ ಕೊರೊನಾ ಕಾರಣದಿಂದಾಗಿ ಪ್ರಥಮದರ್ಜೆ ಪಂದ್ಯಗಳು ಕೂಡ ನಡೆದಿರಲಿಲ್ಲ. ಹಾಗಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಗೆ ಮುನ್ನ ನಾನು ಕೇವಲ 1 ಅಭ್ಯಾಸ ಪಂದ್ಯವನ್ನು ಮಾತ್ರವೇ ಆಡಿದ್ದೆ" ಎಂದು ಪೂಜಾರ ಹೇಳಿದ್ದಾರೆ.

ಇನ್ನು ಅಭ್ಯಾಸ ಪಂದ್ಯಗಳ ಕೊರತೆಯ ಮಧ್ಯೆಯೂ ಚೇತೇಶ್ವರ್ ಪೂಜಾರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಸದ್ಯ ಪೂಜಾರ ಚೆನ್ನೈನಲ್ಲಿ ಹೋಟೆಲ್ ಕ್ವಾರಂಟೈನ್‌ನಲ್ಲಿದ್ದು ಮತ್ತೊಂದು ಸರಣಿಯಲ್ಲಿ ಮಿಂಚುವ ಭರವಸೆಯಲ್ಲಿದ್ದಾರೆ.

Story first published: Saturday, January 30, 2021, 9:54 [IST]
Other articles published on Jan 30, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+