ಭಾರತ ವಿರುದ್ಧದ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ, ಸ್ಟೋಕ್ಸ್ ಇನ್!

ಲಂಡನ್, ಜೂನ್ 29: ಗಾಯಗೊಂಡು ತಂಡದಿಂದ ಹೊರಗುಳಿದಿದ್ದ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಮತ್ತೊಮ್ಮೆ ತಂಡಕ್ಕೆ ಮರಳಿದಿದ್ದಾರೆ. ಭಾರತದ ವಿರುದ್ಧದ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಗೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ.
ಐರ್ಲೆಂಡ್ ವಿರುದ್ಧದ ಎರಡು ಟಿ20ಐ ಪಂದ್ಯಗಳ ನಂತರ, ಇಂಗ್ಲೆಂಡ್ ವಿರುದ್ಧ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಭಾರತ ತಂಡ ಆಡಲಿದೆ.
ಸ್ನಾಯುಸೆಳೆತಕ್ಕೆ ಒಳಗಾಗಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ಸ್ಟೋಕ್ ಅವರು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಹಾಗೂ ಟಿ20ಐ ಪಂದ್ಯ ಮಿಸ್ ಮಾಡಿಕೊಂಡಿದ್ದರು.
ಈಗ ಗಾಯದಿಂದ ಗುಣಮುಖರಾಗಿರುವ ಸ್ಟೋಕ್ಸ್ ಅವರು ಡರ್ ಹ್ಯಾಮ್ ನಲ್ಲಿ ಟಿ20 ಬ್ಲಾಸ್ಟ್ ಕ್ಲಾಶ್ ನಲ್ಲಿ ಯಾರ್ಕ್ ಶೈರ್ ಪರ ಆಡಲಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಟ್ರೆಂಟ್ ಬ್ರಿಡ್ಜ್ ನಲ್ಲಿ ಜುಲೈ 12ರಿಂದ ಆರಂಭವಾಗಲಿದೆ. ಎರಡನೆ ಪಂದ್ಯ ಜುಲೈ 14ರಂದು ಲಾರ್ಡ್ಸ್ ನಲ್ಲಿ ನಡೆಯಲಿದೆ. ಮೂರನೇ ಪಂದ್ಯ ಜುಲೈ 17ರಂದು ಹೆಂಡಿಗ್ಲೆಯಲ್ಲಿ ನಿಗದಿಯಾಗಿದೆ.
ಇಂಗ್ಲೆಂಡ್ ಏಕದಿನ ತಂಡ: ಮೋಯಿನ್ ಅಲಿ, ಜಾನಿ ಬೈರ್ಸ್ಟೋ, ಜೇಕ್ ಬಾಲ್, ಜೋಸ್ ಬಟ್ಲರ್, ಟಾಮ್ ಕುರಮ್, ಅಲೆಕ್ಸ್ ಹೇಲ್ಸ್, ಇಯಾನ್ ಮಾರ್ಗನ್ (ನಾಯಕ), ಲಿಯಾನ್ ಪ್ಲಂಕೆಟ್, ಅದಿಲ್ ರಶೀದ್, ಜೋ ರೂಟ್, ಜಾಸನ್ ರಾಯ್, ಬೆನ್ ಸ್ಟೋಕ್ಸ್, ಡೇವಿಡ್ ವಿಲ್ಲಿ, ಮಾರ್ಕ್ ವುಡ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications