Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ranji Trophy: ವಿರಾಟ್ ಕೊಹ್ಲಿ ರಣಜಿ ಪಂದ್ಯದ ವೇಳೆ ಕಠಿಣ ಕ್ರಮ

ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ದೆಹಲಿ ಮತ್ತು ರೈಲ್ವೇಸ್ ನಡುವಿನ ರಣಜಿ ಟ್ರೋಫಿ ಗ್ರೂಪ್ ಡಿ ಪಂದ್ಯದ ಮೂರನೇ ದಿನ ಪುನರಾರಂಭಗೊಂಡಾಗ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ (ಡಿಡಿಸಿಎ) ಕಠಿಣ ಕ್ರಮವನ್ನು ತೆಗೆದುಕೊಂಡಿದೆ. ಅರುಣ್ ಜೇಟ್ಲಿ ಸ್ಟೇಡಿಯಂನ ಪೆವಿಲಿಯನ್‌ನಲ್ಲಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮ್‌ನ ಪಕ್ಕದಲ್ಲಿರುವ ಬಿಷನ್ ಸಿಂಗ್ ಬೇಡಿ ಸ್ಟ್ಯಾಂಡ್‌ನ ಬದಿಯಲ್ಲಿ ಕಪ್ಪು ಕವರ್‌ಗಳನ್ನು ಅಳವಡಿಸಲಾಗಿದೆ. ವಿರಾಟ್ ಕೊಹ್ಲಿ ದೆಹಲಿ ತಂಡವನ್ನು ಕಣಕ್ಕಿಳಿದಿದ್ದರು.

ಕಳೆದ ಎರಡು ದಿನಗಳಿಂದ ಬಿಶನ್ ಸಿಂಗ್ ಬೇಡಿ ಸ್ಟ್ಯಾಂಡ್‌ನಲ್ಲಿರುವ ಡ್ರೆಸ್ಸಿಂಗ್ ರೂಮ್‌ಗಳ ಬದಿಗಳಲ್ಲಿ ಅಭಿಮಾನಿಗಳ ಗದ್ದಲದಿಂದ ದೆಹಲಿ ಮತ್ತು ರೈಲ್ವೇಸ್ ತಂಡಗಳು ತೊಂದರೆಗೀಡಾದ ಕಾರಣ ಶನಿವಾರ ಬೆಳಿಗ್ಗೆ ಕಪ್ಪು ಕವರ್‌ಗಳನ್ನು ಅಳವಡಿಸಲಾಗಿದೆ ಎಂದು ಡಿಡಿಸಿಎ ಮೂಲಗಳು ತಿಳಿಸಿವೆ.

Strict action during Ranji Trophy Group D match between Delhi and Railways

ಶುಕ್ರವಾರದ ಎರಡನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ 6 ರನ್‌ಗಳಿಗೆ ಔಟಾದ ನಂತರ ದೆಹಲಿ ತಂಡದ ಡ್ರೆಸ್ಸಿಂಗ್ ರೂಮ್‌ನ ಬಾಲ್ಕನಿಯಲ್ಲಿ ಕುಳಿತಿದ್ದ ವಿರಾಟ್ ಕೊಹ್ಲಿಯನ್ನು ನೋಡಲು ಅಭಿಮಾನಿಗಳು ಸೈಡ್‌ಲೈನ್‌ಗಳನ್ನು ಸುತ್ತುವರೆದಿದ್ದರು. ಈ ವೇಳೆ ಅಭಿಮಾನಿಗಳು ಜೋರಾಗಿ ಘೋಷಣೆಗಳನ್ನು ಕೂಗಿದ್ದಾರೆ. ರಾಟ್..ವಿರಾಟ್..ಆರ್‌ಸಿಬಿ..ಆರ್‌ಸಿಬಿ ಎಂದು ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಅಭಿಮಾನಿಗಳ ಗದ್ದಲದಿಂದ ದೆಹಲಿ ಮತ್ತು ರೈಲ್ವೇಸ್ ತಂಡಗಳು ತೊಂದರೆಗೀಡಾದ್ದು, ಈ ಬಗ್ಗೆ ದೂರು ನೀಡಿದ್ದರು ಎಂದು ವರದಿಗಳಾಗಿವೆ.

ಡಿಡಿಸಿಎ ಮತ್ತು ಭದ್ರತಾ ಅಧಿಕಾರಿಗಳು ಶನಿವಾರದ ಮೂರನೇ ದಿನದಾಟಕ್ಕೆ ಹೇಳಿದ ಸೈಡ್‌ಲೈನ್‌ಗಳಲ್ಲಿ ಕಪ್ಪು ಕವರ್‌ಗಳನ್ನು ಅಳವಡಿಸಲು ನಿರ್ಧರಿಸಿದ್ದರು. ಇದಲ್ಲದೇ, ಭದ್ರತಾ ದೃಷ್ಟಿಯಿಂದ ಶನಿವಾರ ಅಭಿಮಾನಿಗಳ ಪ್ರವೇಶಕ್ಕಾಗಿ ಗೇಟ್ 17 ಮತ್ತು 18 ಅನ್ನು ಮುಚ್ಚಲಾಗಿದೆ. ಮೂರನೇ ದಿನದಾಟಕ್ಕೆ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಕ್ಷನ್ ವೀಕ್ಷಿಸಲು ಉತ್ಸುಕರಾದ ಅಭಿಮಾನಿಗಳು ಗೌತಮ್ ಗಂಭೀರ್ ಮತ್ತು ಮೊಹಿಂದರ್ ಅಮರನಾಥ್ ಸ್ಟ್ಯಾಂಡ್‌ಗಳಲ್ಲಿ ಕುಳಿತುಕೊಂಡರೆ, ಡಿಡಿಸಿಎ ಸದಸ್ಯರು ಓಲ್ಡ್ ಕ್ಲಬ್‌ಹೌಸ್ ಸ್ಟ್ಯಾಂಡ್‌ನಲ್ಲಿ ಕುಳಿತುಕೊಂಡಿದ್ದಾರೆ. ವೆಸ್ಟ್ ಸ್ಟ್ಯಾಂಡ್‌ಗೆ ಯಾವುದೇ ಪ್ರವೇಶವಿಲ್ಲದಿದ್ದರೂ, ಕಡಿಮೆ ಸಂಖ್ಯೆಯ ಪ್ರೇಕ್ಷಕರು ಕೊಹ್ಲಿ ಹೆಸರನ್ನು ಕೂಗುತ್ತಲೇ ಇದ್ದರು.

ದೆಹಲಿಗೆ ಜಯ

ರೈಲ್ವೇಸ್ ತಂಡವನ್ನು ದೆಹಲಿ 19 ರನ್ ಮತ್ತು ಒಂದು ಇನ್ನಿಂಗ್ಸ್‌ನಿಂದ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ರೈಲ್ವೇಸ್, ಉಪೇಂದ್ರ ಯಾದವ್ ಅವರ 95 ರನ್ ಮತ್ತು ಕರಣ್ ಶರ್ಮಾ ಅವರ 50 ರನ್‌ಗಳ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 241 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ದೆಹಲಿ ಮೊದಲ ಇನಿಂಗ್ಸ್‌ನಲ್ಲಿ 374 ರನ್ ಗಳಿಸಿ 133 ರನ್‌ಗಳ ಮುನ್ನಡೆ ಸಾಧಿಸಿತ್ತು.

ದೆಹಲಿ ಪರ ನಾಯಕ ಆಯುಷ್ ಬದೋನಿ ಅವರ 99 ರನ್ ಮತ್ತು ಸುಮಿತ್ ಮಾಥುರ್ ಅವರ 86 ರನ್‌ ಕೆಲ ಹಾಕಿದರು. ರೈಲ್ವೇಸ್ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ 114 ರನ್‌ಗಳಿಗೆ ಆಲೌಟ್ ಆಯಿತು. ಪರಿಣಾಮ ದೆಹಲಿ 19 ರನ್ ಮತ್ತು ಒಂದು ಇನ್ನಿಂಗ್ಸ್‌ನಿಂದ ಗೆದ್ದುಕೊಂಡಿತು.

Story first published: Saturday, February 1, 2025, 14:33 [IST]
Other articles published on Feb 1, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+