For Quick Alerts
ALLOW NOTIFICATIONS  
For Daily Alerts
 

Team India next captain: ರೋಹಿತ್ ಶರ್ಮಾ ನಂತರ ಟೀಮ್‌ ಇಂಡಿಯಾದ ಮುಂದಿನ ನಾಯಕ ಯಾರು?; ಈ 3 ಆಟಗಾರರ ನಡುವೆ ಪ್ರಬಲ ಪೈಪೋಟಿ!

ಜೂನ್‌ 20 ಗುರುವಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶೀಘ್ರದಲ್ಲೇ ಟೀಮ್‌ ಇಂಡಿಯಾದ ಮುಂದಿನ ಮುಖ್ಯ ಕೋಚ್ ಹೆಸರನ್ನು ಪ್ರಕಟಿಸಬಹುದು. ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ನೇಮಕವಾಗುವುದು ಬಹುತೇಕ ಖಚಿತವಾಗಿದೆ.

ಗೌತಮ್ ಗಂಭೀರ್ ಬಿಸಿಸಿಐ ಜೊತೆಗೆ ಸಹಿ ಹಾಕಲಿರುವ ಒಪ್ಪಂದ 2027ರ ಏಕದಿನ ವಿಶ್ವಕಪ್ ವರೆಗೆ ಮುಂದುವರಿಯಲಿದೆ. ಗೌತಮ್ ಗಂಭೀರ್ ಆಗಮನದಿಂದ ಟೀಮ್‌ ಇಂಡಿಯಾದಲ್ಲಿ ಹೊಸ ಶಕೆ ಆರಂಭವಾಗಲಿದೆ.

ಟಿ20 ವಿಶ್ವಕಪ್ 2026 ಮತ್ತು 2027ರ ಏಕದಿನ ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾದ ನಾಯಕತ್ವವನ್ನು ವಹಿಸುವ ಭಾರತದ ಹೊಸ ಸಾರಥಿಯನ್ನು ರೆಡಿ ಮಾಡುವುದು ಗೌತಮ್ ಗಂಭೀರ್ ಅವರ ಗುರಿಯಾಗಿದೆ. 37ರ ವರ್ಷದ ರೋಹಿತ್ ಶರ್ಮಾ ಅವರು ಟೀಮ್‌ ಇಂಡಿಯಾ ನಾಯಕತ್ವವನ್ನು ಹೆಚ್ಚು ಕಾಲ ನಿರ್ವಹಿಸಲು ಸಾಧ್ಯವಿಲ್ಲ.

ಹೀಗಾಗಿ ಏಕದಿನ ಮತ್ತು ಟಿ20 ಮಾದರಿಗಳಲ್ಲಿ ರೋಹಿತ್ ಶರ್ಮಾ ಅವರ ಸ್ಥಾನಕ್ಕೆ ಸಮರ್ಥರಾಗಿರುವ ಮೂವರು ಆಟಗಾರರಿದ್ದಾರೆ. ಈ ಮೂರು ಆಟಗಾರರು ಯಾರು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

Strong competition between 3 players for the captaincy of the Indian team

ರಿಷಬ್ ಪಂತ್

ಟೀಮ್‌ ಇಂಡಿಯಾದ ಅತ್ಯುತ್ತಮ ವಿಕೆಟ್ ಕೀಪರ್ ಮತ್ತು ಬ್ಯಾಟರ್‌ ಆಗಿರುವ ರಿಷಬ್ ಪಂತ್ ಅವರು ಮುಂದಿನ ನಾಯಕ ಎಂದು ಹೇಳಲಾಗುತ್ತಿದೆ. ರಿಷಬ್ ಪಂತ್ ನಾಯಕನಾಗುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ.

ರಿಷಬ್ ಪಂತ್ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ವಹಿಸಿದ್ದು, ಉತ್ತಮವಾಗಿ ತಂಡವನ್ನು ಮುನ್ನೆಡೆಸಿದ್ದಾರೆ. ರಿಷಬ್ ಪಂತ್ ಕಲಿಕೆಯಲ್ಲಿ ತುಂಬಾ ಚಾಣಾಕ್ಷನಾಗಿದ್ದು, ಸ್ಟಂಪ್‌ ಹಿಂದೆ ತನ್ನ ಅತಿ ಬುದ್ಧಿವಂತಿಕೆಯಿಂದ ಪಂದ್ಯವನ್ನು ರೀಡ್‌ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ರಿಷಬ್ ಪಂತ್ ನಾಯಕತ್ವದಲ್ಲಿ ಒಂದು ಕಿಡಿ ಇದೆ. ಅದು ಭವಿಷ್ಯದಲ್ಲಿ ಉರಿಯುವ ಬೆಂಕಿಯಾಗಬಹುದು. ರಿಷಬ್ ಪಂತ್ ಕೂಡ ಎಂಎಸ್ ಧೋನಿಯಷ್ಟೇ ಶಕ್ತಿ ಹೊಂದಿದ್ದಾರೆ. ಮೈದಾನದಲ್ಲಿರುವ ಯಾವುದೇ ಆಟಗಾರರಿಗಿಂತ ವಿಕೆಟ್‌ಕೀಪರ್ ಆಟವನ್ನು ಹೆಚ್ಚು ಅರ್ಥಮಾಡಿಕೊಳ್ಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ರಿಷಬ್ ಪಂತ್ ಸಹ ಎಂಎಸ್ ಧೋನಿಯಂತೆ ನಾಯಕತ್ವದಲ್ಲಿ ಯಶಸ್ವಿಯಾಗುತ್ತಾರೆ ಎಂದು ಹೇಳಲಾಗುತ್ತಿದೆ.

Strong competition between 3 players for the captaincy of the Indian team

ಹಾರ್ದಿಕ್ ಪಾಂಡ್ಯ

ಟೀಮ್‌ ಇಂಡಿಯಾ ಸ್ಟಾರ್‌ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ರೋಹಿತ್ ಶರ್ಮಾ ಬದಲಿಗೆ ಏಕದಿನ ಮತ್ತು ಟಿ20 ನಾಯಕತ್ವ ವಹಿಸುವ ಸಾಮರ್ಥ್ಯ ಹೊಂದಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಕಪಿಲ್ ದೇವ್ ಅವರ ಶೈಲಿಯ ಒಂದು ನೋಟವನ್ನು ಕಾಣಬಹುದು.

ಪಾಂಡ್ಯ ಅವರು ತಮ್ಮ ನಾಯಕತ್ವದ ಚೊಚ್ಚಲ ಐಪಿಎಲ್ (2022) ಋತುವಿನಲ್ಲಿ ಗುಜರಾತ್ ಟೈಟಾನ್ಸ್ ತಂಡ ಪ್ರಶಸ್ತಿಯನ್ನು ಗೆಲ್ಲುವಂತೆ ಮಾಡಿದರು. ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡುವಾಗ ಸಂಯಮದಿಂದ ಆಡುತ್ತಾರೆ.

ಮತ್ತೊಂದೆಡೆ 140 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ವಿಶೇಷ ಶಕ್ತಿ ಇದೆ. ಹಾರ್ದಿಕ್ ಪಾಂಡ್ಯ ನಾಯಕನಾಗುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ. ರೋಹಿತ್ ಶರ್ಮಾ ನಂತರ ಹಾರ್ದಿಕ್ ಪಾಂಡ್ಯ ಭಾರತದ ಮುಂದಿನ ನಾಯಕರಾಗಬಹುದು.

Strong competition between 3 players for the captaincy of the Indian team

ಶ್ರೇಯಸ್ ಅಯ್ಯರ್

ಶ್ರೇಯಸ್ ಅಯ್ಯರ್ ಭಾರತದ ಏಕದಿನ ಮತ್ತು ಟಿ20 ನಾಯಕರಾಗಲು ದೊಡ್ಡ ಸ್ಪರ್ಧಿಯಾಗಿದ್ದಾರೆ. ಶ್ರೇಯಸ್ ಅಯ್ಯರ್ ಕೂಡ ನಾಯಕತ್ವ ಪಡೆದರೆ ಟೀಮ್‌ ಇಂಡಿಯಾ ಭವಿಷ್ಯವನ್ನೇ ಬದಲಿಸಬಹುದು.

ಟೀಮ್‌ ಇಂಡಿಯಾಕ್ಕೆ ಶ್ರೇಯಸ್ ಅಯ್ಯರ್ ಅವರಂತಹ ನಿರ್ಭೀತ ಬ್ಯಾಟರ್‌ ಮತ್ತು ಬುದ್ಧಿವಂತ ನಾಯಕನ ಅಗತ್ಯವಿದೆ. ಅವರ ಬ್ಯಾಟಿಂಗ್‌ನಂತೆ, ನಾಯಕತ್ವದಲ್ಲಿಯೂ ಆಕ್ರಮಣಶೀಲತೆಯನ್ನು ತರುತ್ತಾರೆ. ಇದು ಟೀಮ್ ಇಂಡಿಯಾಕ್ಕೆ ಭಾರಿ ಲಾಭವನ್ನು ನೀಡುತ್ತದೆ.

ಶ್ರೇಯಸ್ ಅಯ್ಯರ್ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ನಾಯಕರಾಗಿದ್ದಾರೆ. ತಮ್ಮ ನಾಯಕತ್ವದಲ್ಲಿ, ಶ್ರೇಯಸ್ ಅಯ್ಯರ್ ಐಪಿಎಲ್ 2024 ಟ್ರೋಫಿಯನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಗೆಲ್ಲುವಂತೆ ಮಾಡಿದ್ದಾರೆ. ಶ್ರೇಯಸ್ ಅಯ್ಯರ್ ಕೂಡ ಗೌತಮ್ ಗಂಭೀರ್ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Story first published: Thursday, June 20, 2024, 15:53 [IST]
Other articles published on Jun 20, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+