ಕ್ರಿಕೆಟ್: ಟಾಪ್ 5 ಶ್ರೇಷ್ಠ ಬೌಲಿಂಗ್ ಪ್ರದರ್ಶನ
ಢಾಕಾ, ಜೂ.18: ಅತಿಥೇಯ ಬಾಂಗ್ಲಾದೇಶ ವಿರುದ್ಧದ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಮೂರು ಏಕದಿನ ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಎರಡನೇ ಪಂದ್ಯದಲ್ಲಿ ಭಾರತೀಯ ವೇಗಿಗಳ ಅದ್ಭುತ ಪ್ರದರ್ಶನಕ್ಕೆ ಬಾಂಗ್ಲಾದೇಶ ತಲೆಬಾಗಿದೆ.
ಭಾರತದ ಪರ ಕೇವಲ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದ ಕರ್ನಾಟಕದ ಆಲ್ ರೌಂಡರ್ ಸ್ಟುವರ್ಟ್ ರೋಜರ್ ಬಿನ್ನಿ ಅವರು ಭಾರತದ ಪಾಲಿಗೆ ಹೊಸ ತಾರೆಯಾಗಿದ್ದಾರೆ. ಐಪಿಎಲ್ 7 ನಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತಿದ್ದ ಸಿಎಸ್ ಕೆ ತಂಡ ಮೋಹಿತ್ ಶರ್ಮ ಕೂಡಾ ಉತ್ತಮ ಪ್ರದರ್ಶನ ನೀಡಿದರು.
ಸ್ಕೋರ್ ಕಾರ್ಡ್ ನೋಡಿ | ಪಂದ್ಯದ ವರದಿ ಓದಿ
4.4 ಓವರ್ ಗಳಲ್ಲಿ 4 ರನ್ನಿತ್ತು 6 ವಿಕೆಟ್ ಕಬಳಿಸಿದ ಸ್ಟುವರ್ಟ್ ಬಿನ್ನಿ ಅವರು ಕರ್ನಾಟಕ ಮತ್ತೊಬ್ಬ ಆಟಗಾರ, ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಹೆಸರಿನಲ್ಲಿದ್ದ 21 ವರ್ಷಗಳ ಹಳೆದ ದಾಖಲೆಯನ್ನು ಮುರಿದರು. ಏಕದಿನ ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಭಾರತದ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ ಬೌಲರ್ ಎಂಬ ಕೀರ್ತಿಗೆ ಬಿನ್ನಿ ಪಾತ್ರರಾದರು.
ಈ ಹಿಂದೆ 1999ರಲ್ಲಿ ಕನ್ನಡಿಗ ಎಡಗೈ ಸ್ಪಿನ್ನರ್ ಸುನೀಲ್ ಜೋಶಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 10-6-6-5 ಶ್ರೇಷ್ಠ ಪ್ರದರ್ಶನ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಒಟ್ಟಾರೆ, ಬಿನ್ನಿ ಅವರ ಸಾಧನೆ ಏಕದಿನ ಕ್ರಿಕೆಟ್ ನಲ್ಲಿ 9ನೇ ಅತ್ಯುತ್ತಮ ಸಾಧನೆ ಎನಿಸಿದೆ. ಭಾರತದ ಟಾಪ್ 5 ಶ್ರೇಷ್ಠ ಸಾಧಕರು ಹಾಗೂ ವಿಶ್ವದ ಟಾಪ್ 5 ಶ್ರೇಷ್ಠ ಬೌಲಿಂಗ್ ಪಟ್ಟಿ ಮುಂದಿದೆ...

ಸ್ಟುವರ್ಟ್ ಬಿನ್ನಿ ಅವರಿಂದ ಶ್ರೇಷ್ಠ ಬೌಲಿಂಗ್
ಸ್ಟುವರ್ಟ್ ಬಿನ್ನಿ : 4 ರನ್ನಿತ್ತು 6 ವಿಕೆಟ್, ಬಾಂಗ್ಲಾದೇಶ ವಿರುದ್ಧ, ಮೀರ್ಪುರ್, 2014

ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ
ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ : 12 ರನ್ನಿತ್ತು 6 ವಿಕೆಟ್, ವೆಸ್ಟ್ ಇಂಡೀಸ್ ವಿರುದ್ಧ, ಕೋಲ್ಕತ್ತಾ, 1993

ಮೀಡಿಯಂ ಪೇಸರ್ ನೆಹ್ರಾ
ವೇಗಿ ಆಶೀಶ್ ನೆಹ್ರಾ: 2003ರಲ್ಲಿ ಇಂಗ್ಲೆಂಡ್ ವಿರುದ್ಧ 23 ರನ್ನಿತ್ತು 6 ವಿಕೆಟ್ ಕಿತ್ತಿದ್ದರು.

ಎಡಗೈ ಸ್ಪಿನ್ನರ್ ಮುರಳಿ ಕಾರ್ತಿಕ್
ಎಡಗೈ ಸ್ಪಿನ್ನರ್ ಮುರಳಿ ಕಾರ್ತಿಕ್: 27 ರನ್ನಿತ್ತು 6 ವಿಕೆಟ್ ಮುಂಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ 2004

ಮೀಡಿಯಂ ಪೇಸರ್ ಅಗರ್ಕರ್
ವೇಗಿ ಅಜಿತ್ ಅಗರ್ಕರ್: ಮೆಲ್ಬೋರ್ನ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ 2004ರಲ್ಲಿ 42 ರನ್ನಿತ್ತು 6 ವಿಕೆಟ್

ಟಾಪ್ 5 ಒಡಿಐ ಬೌಲರ್ ಗಳ ಪಟ್ಟಿ
* 8-19: ಶ್ರೀಲಂಕಾದ ಚಮಿಂಡಾ ವಾಸ್, ಜಿಂಬಾಬ್ವೆ ವಿರುದ್ಧ 2001
* 7-12 : ಪಾಕಿಸ್ತಾನದ ಶಹೀಸ್ ಅಫ್ರಿದಿ, ವೆಸ್ಟ್ ಇಂಡೀಸ್ ವಿರುದ್ಧ 2013
* 7-15 : ಆಸ್ಟ್ರೇಲಿಯಾದ ಗ್ಲೆನ್ ಮೆಗ್ರಾಥ್, ನಮೀಬಿಯಾ ವಿರುದ್ಧ 2003
* 7-20 : ಆಸ್ಟ್ರೇಲಿಯಾದ ಆಂಡಿ ಬಿಕೆಲ್, ಇಂಗ್ಲೆಂಡ್ ವಿರುದ್ಧ 2003
* 7-30 : ಶ್ರೀಲಂಕಾದ ಮುತ್ತಯ್ಯ ಮುರಳೀದರನ್, ಭಾರತ ವಿರುದ್ಧ 2000
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications