For Quick Alerts
ALLOW NOTIFICATIONS  
For Daily Alerts
 

ಲಂಕೆಗೆ ಹಾರಲಿರುವ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ

By Mahesh

ಮುಂಬೈ, ಆಗಸ್ಟ್ 17: ಕರ್ನಾಟಕದ ಆಲ್ ರೌಂಡರ್ ಆಟಗಾರ ಸ್ಟುವರ್ಟ್ ಬಿನ್ನಿ ಅವರಿಗೆ ಟೀಂ ಇಂಡಿಯಾದ ಟೆಸ್ಟ್ ತಂಡ ಸೇರುವಂತೆ ಬಿಸಿಸಿಐನಿಂದ ಕರೆ ಬಂದಿದೆ. ಮೂರು ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೂ ಮುನ್ನ ಬಿನ್ನಿ ಅವರು ತಂಡದ ಜೊತೆ ಕೂಡಿಕೊಳ್ಳಲಿದ್ದಾರೆ.

ಆಲ್ ರೌಂಡರ್ ಬಿನ್ನಿ ಅವರನ್ನು ಕೂಡಲೇ ಶ್ರೀಲಂಕಾಕ್ಕೆ ತೆರಳಿ ಅಭ್ಯಾಸ ನಿರತರಾಗುವಂತೆ ಸೂಚಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ಸೂಚಿಸಿತ್ತು.

Stuart Binny to join Indian team before 2nd Sri Lanka Test

ಅದರೆ, ಯಾವ ಆಟಗಾರನ ಬದಲಿಗೆ ಬಿನ್ನಿ ಅವರನ್ನು ಕರೆಸಿಕೊಳ್ಳಲಾಗುತ್ತಿದೆ ಎಂಬುದನ್ನು ಹೇಳಿರಲಿಲ್ಲ. 16ನೇ ಆಟಗಾರರನಾಗಿ ತಂಡ ಸೇರಲಿದ್ದಾರೆ ಎನ್ನಲಾಗಿತ್ತು. ಆರಂಭಿಕ ಆಟಗಾರ ಮುರಳಿ ವಿಜಯ್ ಅವರು ಸ್ನಾಯುಸೆಳೆತಕ್ಕೆ ಒಳಗಾಗಿ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದನ್ನು ಇಲ್ಲಿ ಸ್ಮರಿಸಬಹುದು.[ಶ್ರೀಲಂಕಾ ಟೆಸ್ಟ್ ಸರಣಿಯಿಂದ ಶಿಖರ್ ಧವನ್ ಔಟ್]

ಗುರುವಾರ (ಆಗಸ್ಟ್ 20)ದಿಂದ ಕೊಲಂಬೋದಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ವಿಜಯ್ ಲಭ್ಯರಿರುತ್ತಾರೆ. ಈ ನಡುವೆ ಮೂರು ಟೆಸ್ಟ್ ಪಂದ್ಯಗಳನ್ನಾಡಿರುವ ಅನುಭವ ಹೊಂದಿರುವ ಬಿನ್ನಿ ಅವರು ತಂಡಕ್ಕೆ ಹೆಚ್ಚಿನ ಬಲ ತರುವುದರಲ್ಲಿ ಸಂಶಯವಿಲ್ಲ.

ಮೊದಲ ಟೆಸ್ಟ್ ಪಂದ್ಯವನ್ನು 63 ರನ್ ಗಳಿಂದ ಸೋತಿರುವ ವಿರಾಟ್ ಕೊಹ್ಲಿ ಪಡೆ ಈಗ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 0-1ರಿಂದ ಹಿಂದಿದೆ. ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 20ರಿಂದ ಕೊಲಂಬೋದಲ್ಲಿ ಆರಂಭವಾಗಲಿದೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+