For Quick Alerts
ALLOW NOTIFICATIONS  
For Daily Alerts
 

Ashes 2023: ಸ್ಟುವರ್ಟ್ ಬ್ರಾಡ್ ಐತಿಹಾಸಿಕ ಸಾಧನೆ: ಟೆಸ್ಟ್‌ನಲ್ಲಿ 600 ವಿಕೆಟ್‌ಗಳ ಮೈಲಿಗಲ್ಲು

ಇಂಗ್ಲೆಂಡ್ ತಂಡದ ಅನುಭವಿ ವೇಗಿ ಸ್ಟುವರ್ಟ್ ಬ್ರಾಡ್ ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠತ ಆಶಸ್ ಸರಣಿಯ ನಾಲ್ಕನೇ ಪಂದ್ಯದಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯದಲ್ಲಿ ಬ್ರಾಡ್ ಐತಿಹಾಸಿಕ ಮೈಲಿಗಲ್ಲೊಂದನ್ನು ದಾಟಿದ್ದಾರೆ. ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟ್‌ನಲ್ಲಿ 600 ವಿಕೆಟ್‌ಗಳ ಮೈಲಿಗಲ್ಲು ದಾಟಿದ ಕೇವಲ ಎರಡನೇ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಾಧನೆ ಮಾಡಿದ ಮತ್ತೋರ್ವ ಆಟಗಾರ ಅವರದೇ ತಂಡದ ಹಿರಿಯ ವೇಗಿ ಜೇಮ್ಸ್ ಆಂಡರ್ಸನ್.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದ ಮೊದಲ ದಿನದಾಟದ 50ನೇ ಓವರ್‌ನಲ್ಲಿ ಸ್ಟುವರ್ಟ್ ಬ್ರಾಡ್ ಆಸಿಸ್ ದಾಂಡಿಗ ಟ್ರೆವಿಸ್ ಹೆಡ್ ವಿಕೆಟ್ ಪಡೆಯುವ ಮೂಲಕ 600 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಸಾಲಿಗೆ ಸೇರಿಕೊಂಡರು. ಈ ಅಮೋಘ ಸಾಧನೆ ಕ್ರಿಕೆಟ್‌ನ ಮೇಲೆ ಅವರಿಗಿರುವ ಅಚಲ ಉತ್ಸಾಹ ಹಾಗೂ ಅತ್ಯದ್ಭುತ ಸಾಧನೆಗಳಿಗೆ ಸಾಕ್ಷಿಯಾಗಿದೆ.

Stuart Broad historical milestone; becomes second pacer to bag 600 wickets in test cricket

ನಾಟಿಂಗ್‌ಹ್ಯಾಮ್ ಮೂಲದ ಸ್ಟುವರ್ಟ್ ಬ್ರಾಡ ತಮ್ಮ ಸುದೀರ್ಘ ಟೆಸ್ಟ್ ವೃತ್ತಿ ಜೀವನದಲ್ಲಿ ತವರು ನೆಲದಲ್ಲಿ ಮಾತ್ರವಲ್ಲದೆ ತವರಿನಾಚೆಯೂ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. 600 ವಿಕೆಟ್‌ಗಳ ಪೈಕಿ 394 ವಿಕೆಟ್‌ಗಳನ್ನು ಬ್ರಾಡ್ ತವರಿನಲ್ಲಿ ಪಡೆದುಕೊಂಡಿದ್ದರೆ ಉಳಿದ 206 ವಿಕೆಟ್‌ಗಳು ವಿದೇಶಿ ನೆಲದಲ್ಲಿ ಪಡೆದಿರುವುದಾಗಿದೆ.

ಇನ್ನು 600ಕ್ಕೂ ಅಧಿಕ ಟೆಸ್ಟ್ ವಿಕೆಟ್‌ಗಳನ್ನು ಪಡೆದುಕೊಂಡಿರುವ ಬೌಲರ್‌ಗಳ ಅಪರೂಪದ ಪಟ್ಟಿಯಲ್ಲಿ ಸ್ಟುವರ್ಟ್ ಬ್ರಾಡ್ ಈಗ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಪಟ್ಟಿಯಲಿ ಕೇವಲ 5 ಬೌಲರ್‌ಗಳು ಮಾತ್ರವೇ ಇದ್ದು ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್, ಅನಿಲ್ ಕುಂಬ್ಳೆ ಮತ್ತು ಜೇಮ್ಸ್ ಆಂಡರ್ಸನ್ ಉಳಿದ ನಾಲ್ವರು ಬೌಲರ್‌ಗಳು.

ಈ ಪಂದ್ಯಕ್ಕೂ ಮುನ್ನ ಬ್ರಾಡ್ 598 ವಿಕೆಟ್‌ಗಳನ್ನು ಪಡೆದುಕೊಂಡಿದ್ದು ಈ ಮೈಲಿಗಲ್ಲು ಸ್ಥಾಪಿಸಲು ಅವರಿಗೆ 2 ವಿಕೆಟ್‌ಗಳ ಅಗತ್ಯವಿತ್ತು. ಉಸ್ಮಾನ್ ಖವಾಜ ಅವರನ್ನು ಆರಂಭದಲ್ಲಿಯೇ ಔಟ್ ಮಾಡಿದ ಸ್ಟುವರ್ಟ್ ಬ್ರಾಡ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟಿದ್ದರು. ಅದಾದ ಬಳಿಕ ಐದನೇ ವಿಕೆಟ್ ರೂಪದಲ್ಲಿ ಟ್ರಾವಿಸ್ ಹೆಡ್ ಔಟಾದಾಗ ಬ್ರಾಡ್ ಈ ಸಾಧನೆ ಮಾಡಿ ವಿಶೇಷ ಮೈಲಿಗಲ್ಲು ದಾಟಿದ್ದಾರೆ.

ಇನ್ನು ಆಶಸ್ ಸರಣಿಯ ಈ ನಾಲ್ಕನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಮೊದಲ ದಿನದಾಟದ ಅಂತ್ಯದ ವೇಳೆಗೆ 288 ರನ್‌ಗಳನ್ನು ಗಳಿಸಿದ್ದ 8 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಮೊದಲ ದಿನದಾಟದಲ್ಲಿ ಎರಡು ತಮಡಗಳು ಕೂಡ ಪೈಪೋಟಿಯ ಪ್ರದರ್ಶನ ನೀಡಿದ್ದು ಮೊದಲ ದಿನದ ಗೌರವವನ್ನು ಹಂಚಿಕೊಂಡಿದೆ. ಹೀಗಾಗಿ ಎರಡನೇ ದಿನದಾಟ ಈಗ ಕುತೂಹಲ ಮೂಡಿಸಿದೆ.

Story first published: Thursday, July 20, 2023, 9:57 [IST]
Other articles published on Jul 20, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+