ಇಂಗ್ಲೆಂಡ್ vs ವೆಸ್ಟ್ ಇಂಡೀಸ್: ದಾಖಲೆ ನಿರ್ಮಿಸಲಿದ್ದಾರೆ ಸ್ಟುವರ್ಟ್ ಬ್ರಾಡ್

ಮ್ಯಾನ್ಚೆಸ್ಟರ್: ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಮಧ್ಯೆ ಟೆಸ್ಟ್ ಸರಣಿ ನಡೆಯುತ್ತಿದೆ. ಆರಂಭಿಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 4 ವಿಕೆಟ್‌ಗಳ ಗೆಲುವನ್ನಾಚರಿಸಿದ್ದರೆ, ದ್ವಿತೀಯ ಟೆಸ್ಟ್‌ನಲ್ಲಿ ಜೋ ರೂಟ್ ಪಡೆ 113 ರನ್ ಜಯಭೇರಿ ಬಾರಿಸಿತ್ತು. ಮೂರು ಪಂದ್ಯಗಳ ಟೆಸ್ಟ್ ಸರಣಿಯೀಗ 1-1ರಿಂದ ಸಮಬಲಗೊಂಡಿದೆ. ಸರಣಿ ವಿಜೇತರನ್ನು ನಿರ್ಧರಿಸಲಿರುವ ನಿರ್ಣಾಯಕ ಪಂದ್ಯ ಸದ್ಯ ಮ್ಯಾನ್ಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ.
ಇಂಗ್ಲೆಂಡ್-ವೆಸ್ಟ್ ಇಂಡೀಸ್ ಆರಂಭಿಕ ಟೆಸ್ಟ್‌ನಲ್ಲಿ ಆಂಗ್ಲ ವೇಗಿ ಸ್ಟುವರ್ಟ್ ಬ್ರಾಡ್‌ಗೆ ತಂಡದಲ್ಲಿ ಅವಕಾಶ ನೀಡಿರಲಿಲ್ಲ. ಆದರೆ ದ್ವಿತೀಯ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ಮರಳಿದ್ದ ಬ್ರಾಡ್, ಕೆರಿಬಿಯನ್ನರ ಪ್ರಮುಖ 6 ವಿಕೆಟ್‌ಗಳನ್ನು ಮುರಿದು ಇಂಗ್ಲೆಂಡ್ ಗೆಲುವಿಗೆ ಕೊಡುಗೆ ನೀಡುದ್ದರು.
ಇಂಗ್ಲೆಂಡ್ vs ವೆಸ್ಟ್ ಇಂಡೀಸ್, 3ನೇ ಟೆಸ್ಟ್, Live ಸ್ಕೋರ್‌ಕಾರ್ಡ್
ಮೂರನೇ ಮತ್ತು ಕೊನೇಯ ಟೆಸ್ಟ್‌ನಲ್ಲಿ ಸ್ಟುವರ್ಟ್ ಬ್ರಾಡ್‌ಗೆ ವಿಶೇಷ ದಾಖಲೆ ನಿರ್ಮಿಸಲು ಅವಕಾಶವಿದೆ.

ಟೆಸ್ಟ್‌ನಲ್ಲಿ ಅಪರೂಪದ ದಾಖಲೆ
ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಟುವರ್ಟ್ ಬ್ರಾಡ್ 139 ಪಂದ್ಯಗಳಲ್ಲಿ 28.38ರ ಸರಾಸರಿಯಲ್ಲಿ 491 ವಿಕೆಟ್ ಪಡೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಎರಡು ಇನ್ನಿಂಗ್ಸ್‌ಗಳಲ್ಲಿ ಬ್ರಾಡ್ 9 ವಿಕೆಟ್ ಪಡೆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಪಡೆದ ಇಂಗ್ಲೆಂಡ್‌ನ ಎರಡನೇ ಬೌಲರ್ ಎನಿಸಿಕೊಳ್ಳಲಿದ್ದಾರೆ.

ಆ್ಯಂಡರ್ಸನ್ ಮೊದಲಿಗ
ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ 500+ ವಿಕೆಟ್ ದಾಖಲೆ ಮೊದಲು ನಿರ್ಮಿಸಿದ್ದು ವೇಗಿ ಜೇಮ್ಸ್ ಆ್ಯಂಡರ್ಸನ್. ಆ್ಯಂಡರ್ಸನ್ ಸದ್ಯ 153 ಪಂದ್ಯಗಳಲ್ಲಿ 587 ವಿಕೆಟ್ ಪಡೆದಿದ್ದಾರೆ. 1199 ರನ್ ದಾಖಲೆ ಕೂಡ ಹೊಂದಿದ್ದಾರೆ.

ವಿಶ್ವದ 4ನೇ ವೇಗಿಯೆಂಬ ಹಿರಿಮೆ
ಮೂರನೇ ಟೆಸ್ಟ್‌ನಲ್ಲೇ ಬ್ರಾಡ್ 500 ವಿಕೆಟ್‌ಗಳನ್ನು ಪೂರೈಸಿಕೊಂಡರೆ, ಟೆಸ್ಟ್‌ನಲ್ಲಿ 500 ವಿಕೆಟ್ ಪಡೆದ ವಿಶ್ವದ 4ನೇ ವೇಗಿ ಬೌಲರ್ ಎಂಬ ಹೆಗ್ಗಳಿಕೆಗೂ ಬ್ರಾಡ್ ಕಾರಣರಾಗಲಿದ್ದಾರೆ. ಅಷ್ಟೇ ಅಲ್ಲ, ಈ ಸಾಧನೆ ಮಾಡಿದ ಒಟ್ಟಾರೆ ವಿಶ್ವದ 7ನೇ ಬೌಲರ್ ಆಗಿ ಮೈಲಿಗಲ್ಲು ಸ್ಥಾಪಿಸಲಿದ್ದಾರೆ.

ಟೆಸ್ಟ್‌ನಲ್ಲಿ 500 ವಿಕೆಟ್ ಸಾಧಕರು
ಟೆಸ್ಟ್ ಕ್ರಿಕೆಟ್‌ನಲ್ಲಿ 500+ ವಿಕೆಟ್ ದಾಖಲೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (87 ಪಂದ್ಯಗಳು), ಭಾರತದ ಅನಿಲ್ ಕುಂಬ್ಳೆ (105), ಆಸ್ಟ್ರೇಲಿಯಾದ ಶೇನ್ ವಾರ್ನ್ (108), ಗ್ಲೆನ್ ಮೆಗ್ರಾತ್ (110), ವೆಸ್ಟ್ ಇಂಡೀಸ್‌ನ ಕರ್ಟ್ನಿ ವಾಲ್ಷ್ (129) ಮತ್ತು ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ ಹೆಸರುಗಳಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications