Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Stuart Broad: 'ಇದು ವಿರಾಟ್ ಕೊಹ್ಲಿಯ ಕೊನೆಯ ಇಂಗ್ಲೆಂಡ್ ಪ್ರವಾಸವಾಗಿರಬಹುದು'; ಬ್ರಾಡ್ ಭವಿಷ್ಯ

ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ ನಿವೃತ್ತಿ ಘೋಷಿಸಿದ್ದಾರೆ. ಅವರು ಟೀಮ್ ಇಂಡಿಯಾ ಪರ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಮಾತ್ರ ಆಡುತ್ತಿದ್ದಾರೆ. ಹೆಚ್ಚು ಕಡಿಮೆ ಎಂದರೆ ಇನ್ನೆರಡು ವರ್ಷಗಳಲ್ಲಿ ಎರಡು ಮಾದರಿಗಳಿಂದ ಅವರು ನಿವೃತ್ತಿ ಹೊಂದಬಹುದು ಎಂಬ ಲೆಕ್ಕಚಾರಗಳು ನಡೆಯುತ್ತಿವೆ.

ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ನೋಡಿದರೆ ಅವರು ಮುಂದಿನ 5 ವರ್ಷಗಳಿಗಿಂತ ಹೆಚ್ಚು ಕಾಲ ಕ್ರಿಕೆಟ್ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಆದರೂ ಅವರ ನಿವೃತ್ತಿ ಬಗ್ಗೆ ಮಾತ್ರ ಚರ್ಚೆಗಳು ನಿಲ್ಲುತ್ತಿಲ್ಲ. ಇದರ ಮಧ್ಯೆ ಇಂಗ್ಲೆಂಡ್‌ ತಂಡದ ದಿಗ್ಗಜ ಬೌಲರ್ ಸ್ಟುವರ್ಟ್ ಬ್ರಾಡ್ ಅವರು ವಿರಾಟ್ ಕೊಹ್ಲಿ ಬಗ್ಗೆ ದೊಡ್ಡ ಭವಿಷ್ಯ ನುಡಿದಿದ್ದಾರೆ.

Stuart Broad predicts Virat Kohli last Test

ಭವಿಷ್ಯವೇನು?

ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಮೂರು ಬಾರಿ ಇಂಗ್ಲೆಂಡ್‌ ಪ್ರವಾಸ ಮಾಡಿದ್ದಾರೆ. ಅವರು 2014, 2018 ಮತ್ತು 2021-22 ರಲ್ಲಿ ಭಾರತದ ಇಂಗ್ಲೆಂಡ್ ಪ್ರವಾಸಗಳಲ್ಲಿ ತಂಡದ ಭಾಗವಾಗಿದ್ದರು. ಮುಂದಿನ ವರ್ಷ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಮತ್ತೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಇದರಲ್ಲಿ ವಿರಾಟ್ ಕೊಹ್ಲಿ ಕೂಡ ಪ್ರಮುಖ ಪಾತ್ರ ವಹಿಸಲಿದ್ದಾರೆ. ಇದಕ್ಕೂ ಮುನ್ನ ಕೊಹ್ಲಿ ಬಗ್ಗೆ ಸ್ಟುವರ್ಟ್ ಬ್ರಾಡ್ ನುಡಿದಿರುವ ಭವಿಷ್ಯ ಅವರ ಅಭಿಮಾನಿಗಳಿಗೆ ಯೋಚಿಸುವಂತೆ ಮಾಡಿದೆ. ಮುಂದಿನ ವರ್ಷ ಭಾರತ ತಂಡದ ಇಂಗ್ಲೆಂಡ್ ಪ್ರವಾಸವು ವಿರಾಟ್ ಕೊಹ್ಲಿ ಅವರ ಕೊನೆಯ ಪ್ರವಾಸವಾಗಬಹುದು ಎಂದು ಬ್ರಾಡ್ ಹೇಳಿದ್ದಾರೆ.

ಇಂಗ್ಲೆಂಡ್ ಪ್ರವಾಸ ಯಾವಾಗ?

ಮುಂದಿನ ವರ್ಷ 2025ರ ಜೂನ್ 20 ರಿಂದ ಆಗಸ್ಟ್ 4 ರವರೆಗೆ ಭಾರತ ತಂಡವು 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ಗೆ ಪ್ರವಾಸ ಮಾಡಲಿದೆ. ಇದು ವಿರಾಟ್ ಕೊಹ್ಲಿ ಅವರ ನಾಲ್ಕನೇ ಇಂಗ್ಲೆಂಡ್ ಪ್ರವಾಸವಾಗಲಿದೆ. ಈ ಸರಣಿಯಲ್ಲಿ ವಿರಾಟ್ ಅವರನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಏಕೆಂದರೆ ಅವರು 2024ರ ಆರಂಭದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ತವರಿನ ಟೆಸ್ಟ್ ಸರಣಿಯ ಭಾಗವಾಗಿರಲಿಲ್ಲ.

ಇದೇ ವೇಳೆ ಸ್ಟುವರ್ಟ್ ಬ್ರಾಡ್ ಅವರು ಇಂಗ್ಲೆಂಡ್‌ನಲ್ಲಿ ಕೊಹ್ಲಿ ಪ್ರದರ್ಶನದ ಬಗ್ಗೆ ಮಾತನಾಡಿದ್ದಾರೆ. ಕೊಹ್ಲಿ 17 ಟೆಸ್ಟ್ ಪಂದ್ಯಗಳಲ್ಲಿ 1096 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಮತ್ತು ಐದು ಅರ್ಧ ಶತಕಗಳು ಸೇರಿವೆ. 2018ರ ಪ್ರವಾಸದ ವೇಳೆ ವಿರಾಟ್ ಉತ್ತಮ ಫಾರ್ಮ್‌ನಲ್ಲಿದ್ದರು. ಈ ಪ್ರವಾಸದಲ್ಲಿ ಅವರು ಎರಡೂ ಶತಕಗಳನ್ನು ಗಳಿಸಿದ್ದರು ಎಂದು ಹೇಳಿದ್ದಾರೆ.

Story first published: Thursday, October 3, 2024, 22:26 [IST]
Other articles published on Oct 3, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+