ಇಂಗ್ಲೆಂಡ್‌ನ ದಿಗ್ಗಜ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಆಶಸ್ ಸರಣಿಯ ಅಂತಿಮ ಪಂದ್ಯವೇ ಅವರ ವೃತ್ತಿಜೀವನದ ಕೊನೆಯ ಪಂದ್ಯ ಎಂಬುದನ್ನು ಕೂಡ ಬ್ರಾಡ್ ಘೋಷಣೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 600 ವಿಕೆಟ್‌ಗಳನ್ನು ಪಡೆದು ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಕೇವಲ ಎರಡನೇ ವೇಗದ ಬೌಲರ್ ಎನಿಸಿಕೊಂಡಿದ್ದರೂ ಬಾರತೀಯ ಅಭಿಮಾನಿಗಳು ಅವರನ್ನು ನೆನಪಿಸಿಕೊಳ್ಳಲು ಕಾರಣ ಬೇರಯೇ ಇದೆ.
ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ದಿಗ್ಗಜ ಯುವರಾಜ್ ಸಿಂಗ್ ಇದೇ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಎಲ್ಲಾ ಆರು ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದ್ದು ಯಾವಾಗಲೂ ಸ್ಮರಣೀಯ. ಆದರೆ ವೃತ್ತಿ ಜೀವನದ ಆರಂಭದಲ್ಲಿ ಕಂಡ ಆ ದೊಡ್ಡ ಆಘಾತದ ನಂತರ ಸ್ಟುವರ್ಟ್ ಬ್ರಾಡ್ ಬೆಳೆದುಬಂದ ಹಾದಿ ನಿಜಕ್ಕೂ ಸ್ಪೂರ್ತಿ. ಅದೇ ಕಾರಣಕ್ಕೆ ಸ್ಟುವರ್ಟ್ ಬ್ರಾಡ್ ತಮ್ಮ ನಿವೃತ್ತಿಯ ಈ ಸಂದರ್ಭದಲ್ಲಿ ಯುವರಾಜ್ ಸಿಂಗ್ ಅವರ ಆ ಆರು ಸಿಕ್ಸರ್‌ಗಳ ಕ್ಷಣವನ್ನು ನೆನಪಿಸಿಕೊಂಡಿದ್ದು ಆ ಘಟನೆ ತನ್ನನ್ನು ಸ್ಪರ್ಧಾತ್ಮಕವಾಗಿ ಮತ್ತಷ್ಟು ಗಟ್ಟಿಗೊಳಿಸಿತು ಎಂದಿದ್ದಾರೆ.

"ಖಂಡಿತವಾಗಿಯೂ ಅದೊಂದು ಬಹಳ ಕಠಿಣವಾದ ದಿನ. 21-22ರ ಹರೆಯದಲ್ಲಿ ಹೇಗಾಗಿರಲು ಸಾಧ್ಯ? ಅದರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಆ ಸಂದರ್ಭದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಹಳ ಕಡಿಮೆ ಅನುಭವವಿದ್ದ ಕಾರಣ ಆ ಅನುಭವದ ಮೇಲೆಯೇ ನನ್ನ ದಿನಚರಿಯನ್ನು ಆರಮಭಿಸುತ್ತಿದ್ದೆ. ನಾನು ನನ್ನ ಸಿದ್ಧತೆಗೆ ಕಾತರಿಸುತ್ತಿದ್ದೆ. ಆ ಅನುಭವದಿಂದಾಗಿ ನಾನು ಹೋರಾಟದ ಮನೋಭಾವವನ್ನು ರೂಢಿಸಿಕೊಂಡೆ" ಎಂದು ಯುವರಾಜ್ ಸಿಂಗ್ ಅವರು 6 ಎಸೆತಗಳಿಗೆ 6 ಸಿಕ್ಸರ್ ಬಾರಿಸಿದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಬ್ರಾಡ್.
ಮುಂದುವರಿದು ಬ್ರಾಡ್ "ನಾನು ಇಷ್ಟು ಅದ್ಭುತವಾದ ಸರಣಿಯಲ್ಲಿ ಭಾಗಿಯಾಗಿರುವುದು ಅದ್ಭುತವಾದ ಅನುಭವ. ನಾನು ಯಾವಾಗಲೂ ಅತ್ಯುನ್ನತ ಮಟ್ಟದಲ್ಲಿದ್ದಾಗಲೇ ವೃತ್ತಿಜೀವನ ಕೊನೆಯಗೊಳಿಸಲಯ ಬಯಸಿದ್ದೆ. ಈ ಸರಣಿ ನಾನು ಬಹಳಷ್ಟು ಆನಂದಿಸಿದ ಆನಂದಿಸಿದ ಸರಣಿಗಳಲ್ಲಿ ಒಂದಾಗಿದೆ" ಎಂದು ಅವರು ಹೇಳಿಕೆ ನೀಡಿದ್ದಾರೆ.
2007ರ ಡಿಸಂಬರ್‌ನಲ್ಲಿ ಟೆಸ್ಟ್ ಮಾದರಿಗೆ ಪದಾರ್ಪಣೆ ಮಾಡಿದ ಸ್ಟುವರ್ಟ್ ಬ್ರಾಡ್ 167 ಪಂದ್ಯಗಳನ್ನು ಆಡಿದ್ದಾರೆ. ಪ್ರಸ್ತಿತ ನಡೆಯುತ್ತಿರುವ ಆಶಸ್ ಸರನಿಯ ಮೂಲಕವೇ ಅವರು ಟೆಸ್ಟ್ ಮಾದರಿಯಲ್ಲಿ 600 ವಿಕೆಟ್ ಪಡೆದ ದೊಡ್ಡ ಮೈಲಿಗಲ್ಲನ್ನು ಕೂಡ ದಾಟಿದ್ದರು. ಅತಿ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಸ್ಟುವರ್ಟ್ ಬ್ರಾಡ್ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್‌ಗಳ ಪಟ್ಟಿಯಲ್ಲಿ ಕೇವಲ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿ ಸುದೀರ್ಘ ಕಾಲದ ಜೊತೆಗಾರ ಜೇಮ್ಸ್ ಆಂಡರ್ಸನ್ ಇದ್ದಾರೆ.
ಇನ್ನು ಇಂಗ್ಲೆಂಡ್‌ನ ಈ ದಿಗ್ಗಜ ವೇಗದ ಬೌಲರ್ ಟೆಸ್ಟ್‌ಬಲ್ಲಿ ಅತಿ ಹೆಚ್ಚಿನ ಸಾಧನೆ ಮಾಡಿದ್ದರೂ ವೈಟ್‌ವಾಲ್ ಕ್ರಿಕೆಟ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. 121 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿರುವ ಬ್ರಾಡ್ 178 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಇನ್ನು 56 ಟಿ20 ಪಂದ್ಯಗಳಲ್ಲಿಯೂ ಆಡಿರುವ ಬ್ರಾಡ್ 65 ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ.