ಬೂಮ್ರಾನಷ್ಟು ಗ್ರೇಟ್ ನೀನಲ್ಲ ಎಂದ ಕ್ರಿಕೆಟ್ ಅಭಿಮಾನಿಗೆ ಬ್ರಾಡ್ ನೀಡಿದ ಉತ್ತರ ಹೀಗಿತ್ತು!

ಕ್ರಿಕೆಟ್‌ನಲ್ಲಿ ಹೋಲಿಕೆಗಳು ಬೇಡವೆಂದರೂ ನಡೆಯುತ್ತಲೇ ಇರುತ್ತದೆ. ಶ್ರೇಷ್ಠ ಆಟಗಾರರ ಪ್ರದರ್ಶಕ್ಕೆ ಇನ್ನೋರ್ವ ಶ್ರೇಷ್ಠ ಆಟಗಾರನ ಆಟವನ್ನು ತುಲನೆ ಮಾಡಿ ಮಿಮರ್ಷಿಸುವುದು ತೀರಾ ಸಾಮಾನ್ಯವಾಗಿದೆ. ಹೆಲ ಬಾರಿ ಬೇರೇ ಬೇರೆ ಕಾಳಮಾನದ ಆಟಗಾರರ ಜೊತೆಗೆ ಈ ಹೋಲಿಕೆಗಳು ನಡೆದರೆ ಸಮಕಾಲೀನ ಆಟಗಾರರೊಂದಿಗೂ ಅದೇ ರೀತಿಯ ಹೋಲಿಕೆಗಳು ನಡೆಯುತ್ತಿರುತ್ತದೆ.
ಈಗ ಸಾಮಾಜಿಕ ಜಾಲತಾಗಳ ಮೂಲಕ ಕ್ರಿಕೆಟಿಗರು ನೇರವಾಗಿ ಅಭಿಮಾನಿಗಳ ಜೊತೆಗೆ ಸಂವಹನ ನಡೆಸುವ ಅವಕಾಶವಿರುವುದರಿಂದ ಇಂತಾ ಸವಾಲುಗಳು ಸ್ವತಃ ಆಟಗಾರರಿಗೆ ತಲುಪುತ್ತದೆ. ಇಂತದ್ದೆ ಸಂದರ್ಭ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್‌ಗೂ ಎದುರಾಗಿತ್ತು. ಇದಕ್ಕೆ ಬ್ರಾಡ್ ಅದ್ಭುತವಾಗಿ ಪ್ರತಿಕ್ರಿಯೆ ನೀಡುವ ಮೂಲಕ ಜಾಣ್ಮೆ ಮೆರೆದರು.

ಕೆಣಕಿದ ಬೂಮ್ರಾ ಅಭಿಮಾನಿ
ಇನ್ಸ್ಟಾಗ್ರಾಮ್‌ನಲ್ಲಿ ಹಾಕಿದ್ದ ಪೋಸ್ಟ್‌ವೊಂದಕ್ಕೆ ಭಾರತೀಯ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅಭಿಮಾನಿಯೋರ್ವ ಬ್ರಾಡ್‌ಗೆ "ನೀವು ಬೂಮ್ರಾನಷ್ಟು ಶ್ರೇಷ್ಠರಲ್ಲ" ಎಂದು ಬರೆದುಕೊಂಡಿದ್ದ. ಈ ಕಾಮೆಂಟ್‌ಗೆ ಸ್ಟುವರ್ಟ್ ಬ್ರಾಡ್ ಪ್ರತಿಕ್ರಿಯಿಸದೆ ಸುಮ್ಮನಿದ್ದರೂ ನಡೆಯುತ್ತಿತ್ತು. ಆದರೆ ಬ್ರಾಡ್ ಈ ಸಂದರ್ಭವನ್ನು ಚೆನ್ನಾಗಿಯೇ ಬಳಸಿಕೊಂಡು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬೂಮ್ರಾ ಫೇವರೀಟ್ ಎಂದ ಬ್ರಾಡ್
"ನಾನು ಆತನನ್ನು ಇಷ್ಟಪಡುತ್ತೇನೆ. ನನ್ನ ಫೇವರೀಟ್ ಬೌಲರ್‌ಗಳಲ್ಲಿ ಓರ್ವ. ಆದರೆ ಹೋಲಿಕೆಯ ಅಗತ್ಯವಿಲ್ಲ. ಉತ್ತಮ ಬೌಲರ್‌ಗಳ ಪ್ರದರ್ಶನವನ್ನು ಆನಂದಿಸಿ" ಎಂದು ಸ್ಟುವರ್ಟ್ ಬ್ರಾಡ್ ಟ್ವಿಟ್ಟರ್‌ನಲ್ಲಿ ಅಭಿಮಾನಿಗೆ ಸಲಹೆ ರೂಪದಲ್ಲಿ ಉತ್ತರಿಸಿದ್ದಾರೆ. ಜೊತೆಗೆ ತನಗಿಂತ ಕಿರಿಯ ಬೌಲರ್ ಬಗ್ಗೆಯೂ ಮೆಚ್ಚುಗೆಯನ್ನು ವ್ಯಕ್ತಪಡಿಸುವ ಧಾರಾಳತನವನ್ನು ತೋರಿಸಿದ್ದಾರೆ.

500ಕ್ಕೂ ಅಧಿಕ ವಿಕೆಟ್ ಪಡೆದ ಬ್ರಾಡ್
ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಸ್ಟುವರ್ಟ್ ಬ್ರಾಡ್ 500 ವಿಕೆಟ್ ಗಳಿಸಿದ ಸಾಧನೆಯನ್ನು ಮಾಡಿದರು. ಈ ಮೂಲಕ ವೇಗದ ಬೌಲರ್‌ಗಳ ಪಟ್ಟಿಯಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ನಾಲ್ಕನೇ ವೇಗದ ಬೌಲರ್ ಎನಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications