For Quick Alerts
ALLOW NOTIFICATIONS  
For Daily Alerts
 

ಸ್ಟಂಪ್ಸ್ ಫಾಲ್‌ ಡೌನ್‌: ಟಿ20 ವಿಶ್ವಕಪ್‌ಗೆ ಬುಮ್ರಾ ಅಭ್ಯಾಸ ಕಂಡ ಮಗನ ಉದ್ಗಾರ

ಟೀಮ್ ಇಂಡಿಯಾ ಸದ್ಯ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಗಳನ್ನು ಆಡುತ್ತಿದೆ. ಈ ಸರಣಿಯ ಬಳಿಕ ಉಭಯ ತಂಡಗಳ ನಡುವಣ 5 ಪಂದ್ಯಗಳ ಟಿ20 ಸರಣಿಯ ಜನವರಿ 21 ರಿಂದ ಆರಂಭವಾಗಲಿದೆ. ಮುಂಬರುವ ಟಿ20 ವಿಶ್ವಕಪ್‌ಗೆ ತಯಾರಿ ನಡೆಸಲು ಈ ಸರಣಿ ಮಹತ್ವದಾಗಿದೆ. ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್‌ 2026ಕ್ಕೆ ಈಗಾಗಲೇ ಸೂರ್ಯ ಪಡೆಯನ್ನು ಘೋಷಿಸಲಾಗಿದೆ. ಭಾರತದ ವೇಗದ ಬೌಲಿಂಗ್‌ ನೊಗವನ್ನು ಈ ಮೆಗಾ ಟೂರ್ನಿಯಲ್ಲಿ ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್ಪ್ರೀತ್ ಬುಮ್ರಾ ಮುನ್ನಡೆಸಲಿದ್ದಾರೆ.

ವೆಸ್ಟ್‌ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ಜಸ್ಪ್ರೀತ್ ಬುಮ್ರಾ ಮಹತ್ವದ ಪಾತ್ರವನ್ನು ವಹಿಸಿದ್ದರು. ಮತ್ತೊಮ್ಮೆ ಇದೇ ಕಾರ್ಯವನ್ನು ಮಾಡಲು ಬುಮ್ರಾ ತಯಾರಿ ನಡೆಸಿದ್ದಾರೆ. ಟಿ 20 ವಿಶ್ವಕಪ್‌ಗೆ ಮುನ್ನ, ಜಸ್ಪ್ರೀತ್ ಬುಮ್ರಾ ಅವರ ಮಗನೊಂದಿಗೆ ಅಭ್ಯಾಸ ಮಾಡುತ್ತಿರುವ ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಬುಮ್ರಾ ಮುಂಬರುವ ವಿಶ್ವಕಪ್‌ಗೆ ತಯಾರಿ ನಡೆಸುತ್ತಿರುವುದು ಕಂಡು ಬರುತ್ತಿದೆ.

Stumps Fall Down Jasprit Bumrah s Son Angad Cheers During T20 World Cup Prep Video Goes Viral

ಜಸ್ಪ್ರೀತ್‌ ಬುಮ್ರಾ ಅವರು ಈ ವಿಡಿಯೋದಲ್ಲಿ ತಮ್ಮ ಮಗ ಅಂಗದ್ ಜೊತೆಗೆ ಬೌಲಿಂಗ್ ಅಭ್ಯಾಸ ಮಾಡುತ್ತಿರುವುದು ಕಂಡು ಬಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ವೈರಲ್ ಆದ ನಂತರ ಬಹಳ ಬೇಗ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಬುಮ್ರಾ ಜೊತೆಗೆ ಅವರ ಪುಟ್ಟು ಮಗು ಸಹ ಬೌಲಿಂಗ್ ಮಾಡುವುದನ್ನು ಕಾಣಬಹುದಾಗಿದೆ. ಬುಮ್ರಾ ಜೊತೆಗೆ ಬೌಲಿಂಗ್ ಮಾಡುವ ಅಂಗದ್ ಬೌಲಿಂಗ್‌ ಸಖತ್ ವೈರಲ್ ಆಗುತ್ತಿದೆ.

ಇದೇ ವೇಳೆ ಅಂಗದ್ ತಂದೆಗೆ ಪ್ರೋತ್ಸಾಹವನ್ನು ಸಹ ನೀಡಿದ್ದಾರೆ. ಸ್ಟಂಪ್ಸ್‌ ಫಾಲ್‌ ಡೌನ್ ಎಂದು ಹೇಳುವ ಮೂಲಕ ತಂದೆಯನ್ನು ಹುರಿದುಂಬಿಸಿದ್ದಾರೆ. ಈ ವಿಡಿಯೋದಲ್ಲಿ ಅಂಗದ್‌ ಸಹ ಬೌಲಿಂಗ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

ಬುಮ್ರಾ ಸಾಧನೆ

ಈ ವರೆಗೆ ಜಸ್ಪ್ರೀತ್ ಬುಮ್ರಾ ಒಟ್ಟು ಮೂರು ಟಿ20 ವಿಶ್ವಕಪ್‌ ಆಡಿರುವ ಅನುಭವ ಹೊಂದಿದ್ದಾರೆ. ಈ ವೇಳೆ ಬುಮ್ರಾ 18 ಪಂದ್ಯಗಳಲ್ಲಿ, 14.3 ರ ಸರಾಸರಿಯಲ್ಲಿ 26 ವಿಕೆಟ್‌ಗಳನ್ನು ಪಡೆದಿದ್ದಾರೆ. ಎರಡನೇ ಬಾರಿಗೆ ಬುಮ್ರಾ ಟಿ20 ವಿಶ್ವಕಪ್‌ ಭಾರತದಲ್ಲಿ ಆಡಲು ಸಜ್ಜಾಗಿದ್ದಾರೆ. ಭಾರತದ ಪರ ಟಿ20 ವಿಶ್ವಕಪ್‌ನಲ್ಲಿ ಗರಿಷ್ಠ ವಿಕೆಟ್‌ ಪಡೆದ ಬೌಲರ್‌ಗಳಲ್ಲಿ ಬುಮ್ರಾಗೆ ಎರಡನೇ ಸ್ಥಾನ. ಇವರು ಆಡಿದ 83 ಟಿ20 ಪಂದ್ಯಗಳಲ್ಲಿ 6.39ರ ಎಕಾನಮಿಯಲ್ಲಿ 103 ವಿಕೆಟ್‌ ಕಬಳಿಸಿದ್ದಾರೆ. ತಮ್ಮ ಧಮಾಕೆದಾರ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಾಡುವ ಬುಮ್ರಾ, ಪವರ್‌ ಪ್ಲೇ ಹಾಗೂ ಡೆತ್‌ ಓವರ್‌ಗಳಲ್ಲಿ ಬೌಲಿಂಗ್ ಮಾಡುವಲ್ಲಿ ಹೆಸರುವಾಸಿ.

33 ವರ್ಷದ ಬುಮ್ರಾ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

Story first published: Thursday, January 15, 2026, 13:49 [IST]
Other articles published on Jan 15, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+