ರಾಹುಲ್ - ಅಥಿಯಾ ಶೆಟ್ಟಿ ಮದುವೆ ಫಿಕ್ಸ್: ದಿನಾಂಕದ ಬಗ್ಗೆ ಮುಕ್ತವಾಗಿ ಮಾತನಾಡಿದ ಸುನಿಲ್ ಶೆಟ್ಟಿ!

ಕ್ರಿಕೆಟ್ ಹಾಗೂ ಸಿನಿಮಾ ಎರಡೂ ಕ್ಷೇತ್ರಗಳಿಗೂ ಈ ಹಿಂದಿನಿಂದಲೂ ಬಿಡಿಸಲಾಗದ ಸಂಬಂಧವಿದೆ. ಕ್ರಿಕೆಟಿಗರು ಚಲನಚಿತ್ರಗಳಲ್ಲಿ ಅಭಿನಯಿಸಿದ ಉದಾಹರಣೆಗಳಿವೆ. ಇನ್ನು ಸಿನಿಮಾದ ಖ್ಯಾತ ನಟಿಯರು ಕ್ರಿಕೆಟಿಗರನ್ನು ವಿವಾಹವಾದ ತಾಜಾ ಉದಾಹರಣೆಗಳು ಕಣ್ಮುಂದಿವೆ. ಈ ಸಾಲಿಗೆ ಮತ್ತೊಂದು ಸೇರ್ಪಡೆಯೆಂದರೆ ಅದು ಕೆಎಲ್ ರಾಹುಲ್ ಹಾಗೂ ಖ್ಯಾತ ಚಲನಚಿತ್ರ ನಟ ಸುನಿಲ್ ಶೆಟ್ಟಿ ಅವರ ಪುತ್ರಿ ನಟಿ ಅಥಿಯಾ ಶೆಟ್ಟಿ. ಹೌದು, ಈ ಇಬ್ಬರೂ ಸಹ ಸಾಕಷ್ಟು ದಿನಗಳಿಂದ ಪ್ರೀತಿಯಲ್ಲಿದ್ದಾರೆ ಎಂಬ ವಿಷಯ ಹರಿದಾಡುತ್ತಿದ್ದು, ಇಬ್ಬರ ಮದುವೆ ಯಾವಾಗ ನಡೆಯಲಿದೆ ಎಂಬ ಚರ್ಚೆಗಳು ಇತ್ತೀಚಿಗೆ ಜೋರಾಗಿವೆ.
ಇಬ್ಬರ ಮದುವೆ ವಿಚಾರವಾಗಿ ಹಲವಾರು ಪ್ರಶ್ನೆಗಳು ಸ್ವತಃ ಕೆಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿಗೆ ಎದುರಾಗಿದ್ದು, ಇಬ್ಬರೂ ಸಹ ಎಲ್ಲಿಯೂ ಅಧಿಕೃತವಾಗಿ ತಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೇವೆ ಎಂಬುದನ್ನು ಬಹಿರಂಗಪಡಿಸಿಲ್ಲ. ಆದರೂ ಸಹ ಈ ಇಬ್ಬರು ತಾವು ಜತೆಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ರೀತಿಯನ್ನು ನೋಡಿದರೆ ಇಬ್ಬರ ನಡುವೆ ಪ್ರೀತಿಯಿದೆ ಎಂಬುದನ್ನು ಅರಿಯಲು ಹೆಚ್ಚಿನ ಸಮಯವೇನು ಬೇಕಿಲ್ಲ ಎನ್ನಬಹುದು.
ಹೀಗೆ ಹಲವು ದಿನಗಳಿಂದ ಕೆಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಇಬ್ಬರ ಪ್ರೀತಿಯ ಕುರಿತಾಗಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದು, ಈ ಕುರಿತಾಗಿ ಈ ಹಿಂದೆ ಪ್ರತಿಕ್ರಿಯಿಸಿದ್ದ ಅಥಿಯಾ ಶೆಟ್ಟಿ ತಂದೆ ಸುನಿಲ್ ಶೆಟ್ಟಿ ಮಾತನಾಡಿ ಇಬ್ಬರ ನಡುವಿನ ವಿವಾಹದ ಸುದ್ದಿಯನ್ನು ತಳ್ಳಿಹಾಕಿದ್ದರು. ಆದರೆ, ಇದೀಗ ಮಾತನಾಡಿರುವ ಸುನಿಲ್ ಶೆಟ್ಟಿ ಮಗಳು ಮತ್ತು ಕೆಎಲ್ ರಾಹುಲ್ ಶೆಟ್ಟಿ ವಿವಾಹದ ದಿನಾಂಕದ ಕುರಿತು ಮಾಹಿತಿ ನೀಡುವ ಮೂಲಕ ಇಬ್ಬರ ವಿವಾಹ ನಡೆಯುವುದು ಖಚಿತ ಎಂಬು ಸೂಚನೆಯನ್ನು ನೀಡಿದ್ದಾರೆ.

ಮದುವೆ ಒಂದು ದಿನದಲ್ಲಿ ನಡೆಯುವ ಕಾರ್ಯಕ್ರಮವಲ್ಲ
ಖಾಸಗಿ ಸಾಮಾಜಿಕ ಜಾಲತಾಣದ ಸಂದರ್ಶನವೊಂದರಲ್ಲಿ ಮಾತನಾಡಿದ ಸುನಿಲ್ ಶೆಟ್ಟಿ ಮಕ್ಕಳು ನಿರ್ಧರಿಸಿದ ತಕ್ಷಣ ಮದುವೆ ಸಂಭವಿಸುತ್ತದೆ ಎಂದು ಹೇಳಿಕೆ ನೀಡುವ ಮೂಲಕ ಇಬ್ಬರ ಮದುವೆ ಫಿಕ್ಸ್ ಎಂಬುದನ್ನು ಖಚಿತಪಡಿಸಿದ್ದಾರೆ. ಇನ್ನೂ ಮುಂದುವರೆದು ಮಾತನಾಡಿರುವ ಸುನಿಲ್ ಶೆಟ್ಟಿ ಕೆಎಲ್ ರಾಹುಲ್ ಸಾಲು ಸಾಲು ಪಂದ್ಯಗಳಲ್ಲಿ ನಿರತರಾಗಿದ್ದಾರೆ, ಏಷ್ಯಾಕಪ್, ವಿಶ್ವಕಪ್, ಆಸ್ಟ್ರೇಲಿಯಾ ಪ್ರವಾಸ ಹಾಗೂ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ರಾಹುಲ್ ಭಾಗವಹಿಸುವುರಿಂದ ಮಕ್ಕಳ ಮದುವೆ ಒಳ್ಳೆಯ ವಿಶ್ರಾಂತಿ ಸಿಕ್ಕಾಗ ಮಾತ್ರ ನಡೆಯಲಿದೆ ಹಾಗೂ ಕೇವಲ ಒಂದು ದಿನದ ವಿಶ್ರಾಂತಿ ಸಿಗುವ ದಿನದಂದು ಮದುವೆ ಮಾಡಲು ಆಗುವುದಿಲ್ಲ ಎಂದು ಸುನಿಲ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.

ರಾಹುಲ್ ವೇಳಾಪಟ್ಟಿ ನೋಡಿದರೆ ಭಯವಾಗುತ್ತೆ
ರಾಹುಲ್‌ಗೆ ವಿಶ್ರಾಂತಿ ಸಿಕ್ಕಾಗ ಮದುವೆಯಾಗಲಿದೆ ಹಾಗೂ ಅದು ಯಾವಾಗ ಆಗಬಹುದು ಎಂದು ಮಕ್ಕಳು ನಿರ್ಧರಿಸುತ್ತಾರೆ, ರಾಹುಲ್‌ನ ಕ್ಯಾಲೆಂಡರ್ ಅನ್ನು ನೋಡಿದರೆ ನೀವು ಭಯಪಡುತ್ತೀರಿ, ಕೇವಲ 1-2 ದಿನ ವಿರಾಮವಿದೆ, ಇಷ್ಟು ಕಡಿಮೆ ಸಮಯದಲ್ಲಿ ಮದುವೆ ಆಗುವುದಿಲ್ಲ. ಸಮಯವಿದ್ದಾಗ ಮದುವೆಯನ್ನು ಯೋಜಿಸಲಾಗುವುದು ಎಂದು ಸುನೀಲ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.

ಕೆಎಲ್ ರಾಹುಲ್ ಕಮ್‌ಬ್ಯಾಕ್
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯವಾದ ನಂತರ ನಡೆದ ಯಾವುದೇ ಸರಣಿಯಲ್ಲಿಯೂ ಕಣಕ್ಕಿಳಿಯದೇ ಇದ್ದ ಕೆಎಲ್ ರಾಹುಲ್ ಗಾಯದ ಸಮಸ್ಯೆ ಹಾಗೂ ಕೊರೊನಾ ವೈರಸ್ ಕಾರಣದಿಂದಾಗಿ ಸಾಲು ಸಾಲು ಪಂದ್ಯಗಳನ್ನು ಕೈತಪ್ಪಿಸಿಕೊಂಡರು. ಹೀಗೆ ಐಪಿಎಲ್ ನಂತರ ಕಣಕ್ಕಿಳಿಯದೇ ಇದ್ದ ಕೆಎಲ್ ರಾಹುಲ್ ಅವರನ್ನು ಏಷ್ಯಾಕಪ್ ಟೂರ್ನಿಗೆ ಪ್ರಕಟವಾದ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಇದಾದ ಬೆನ್ನಲ್ಲೇ ನಡೆದ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನಾಯಕನಾಗಿ ಕಣಕ್ಕಿಳಿದಿದ್ದ ರಾಹುಲ್ ಎಲ್ಲಾ ಮೂರೂ ಪಂದ್ಯಗಳಲ್ಲಿಯೂ ಜಯ ಸಾಧಿಸಿ ವೈಟ್‌ವಾಷ್ ಸಾಧನೆ ಮಾಡಿದ್ದಾರೆ. ಇನ್ನು ರಾಹುಲ್ ಈ ಏಷ್ಯಾಕಪ್ ಟೂರ್ನಿಯಲ್ಲಿ ಮಿಂಚಿ ತನ್ನ ಈ ಹಿಂದಿನ ಫಾರ್ಮ್ ಕಂಡುಕೊಂಡು ಕಮ್‌ಬ್ಯಾಕ್ ಮಾಡುವತ್ತ ಚಿತ್ತ ನೆಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications