Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್‌ ಕೊಹ್ಲಿ ವಿರುದ್ಧ ಕಿಡಿಕಾರಿದ ಸುನೀಲ್‌ ಗವಾಸ್ಕರ್‌: ಕಾರಣವೇನು?

ಮುಂಬರುವ 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನಲ್ಲಿ ಟೀಮ್‌ ಇಂಡಿಯಾ ಆಟಗಾರರು ಸೇರಿದಂತೆ ಹಲವು ದೇಶಗಳ ಆಟಗಾರು ಮಿಂಚುತ್ತಿದ್ದಾರೆ. ಅದರಂತೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಬ್ಯಾಟರ್‌ ವಿರಾಟ್‌ ಕೊಹ್ಲಿ ಭರ್ಜರಿ ಫಾರ್ಮಾನಲ್ಲಿದ್ದಾರೆ.

ಶನಿವಾರ ಮೇ 4ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 52ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ (ಜಿಟಿ) ವಿರುದ್ಧ ಆರ್‌ಸಿಬಿ ಅಮೋಘ ಗೆಲುವು ಸಾಧಿಸಿದೆ.‌ ಈ ಪಂದ್ಯ ತಮ್ಮ ಫಾರ್ಮ್‌ ಮುಂದುವರೆಸಿದ ವಿರಾಟ್‌ ಕೊಹ್ಲಿ ಕೇವಲ 27 ಎಸೆತಗಳಲ್ಲಿ 4 ಸಿಕ್ಸರ್‌ ಹಾಗು 2 ಬೌಂಡರಿ ನೆರವಿನಿಂದ 42 ರನ್‌ ಗಳಿಸಿ ಅರ್ಧಶತಕ ಹೊಸ್ತಿಲಲ್ಲಿ ಔಟ್‌ ಆದರು.

Sunil Gavaskar angry with Virat Kohli Statement

ಈ ಮೂಲಕ ವಿರಾಟ್‌ ಕೊಹ್ಲಿ 2024ರ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ ಹೊಡೆದರ ಪಟ್ಟಿಯಲ್ಲಿ ಆಗ್ರಸ್ಥಾನಕ್ಕೇರಿದ್ದಾರೆ. ಆದರೂ ವಿರಾಟ್ ಕೊಹ್ಲಿ ಆಟದ ಬಗ್ಗೆ ಮಾತನಾಡವವರ ಸಂಖ್ಯೆ ಕಡಿಮೆ ಆಗಿಲ್ಲ. ವಿರಾಟ್‌ ಕೊಹ್ಲಿ ಎಷ್ಟು ರನ್‌ ಹೊಡೆದಿದ್ದರೆ ಎನ್ನುವುದಕ್ಕಿಂತ ಎಷ್ಟು ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟಿಂಗ್‌ ಮಾಡಿದ್ದಾರೆ ಎಂಬುದೆ ಸದ್ಯಕ್ಕೆ ಸಾಕಷ್ಟು ಚರ್ಚೆಯಾಗುತ್ತಿದೆ.

ಈ ಹಿಂದೆಯೇ ಈ ಬಗ್ಗೆ ಪ್ರತಿಕ್ರಿಯಿಸಿದ ವಿರಾಟ್‌ ಕೊಹ್ಲಿ ತಮ್ಮ ಸ್ಟ್ರೈಕ್‌ ರೇಟ್ ಬಗ್ಗೆ ಮಾತನಾಡುವವರಿಗೆ ಸರಿಯಾಗಿ ಉತ್ತರ ಕೊಟ್ಟಿದ್ದರು. ಹಲವರು ನನ್ನ ಸ್ಟ್ರೈಕ್‌ ರೇಟ್‌ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಮೈದಾನದಲ್ಲಿ ಪಂದ್ಯವಾಡುವಾಗ ಅಲ್ಲಿನ ಪರಿಸ್ಥಿತಿಗಳು ನನಗೆ ಮಾತ್ರ ಬಹಳ ಚೆನ್ನಾಗಿ ಗೊತ್ತಿರುತ್ತದೆ. ಕಾಮೆಂಟರಿ ಬಾಕ್ಸ್‌ ಒಳಗೆ ಕೂತು ಮಾತನಾಡುವವರಿಗಲ್ಲ. ಹೀಗಾಗಿ ಪಂದ್ಯವನ್ನು ಗೆಲ್ಲಿಸುವುದು ನನ್ನ ಕೆಲಸ ಎಂದು ವಿರಾಟ್‌ ಕೊಹ್ಲಿ ಟೀಕಾಕಾರ ಬಾಯಿ ಮುಚ್ಚಿಸಿದ್ದರು.‌

ಕಾಮೆಂಟ್‌ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದರೆ ನೀನು ಉತ್ತರಿಸಬೇಡ :

ಇದೀಗ ವಿರಾಟ್‌ ಕೊಹ್ಲಿ ಅವರ ಈ ಹೇಳಿಕೆ ವಿರುದ್ಧ ಟೀಮ್‌ ಇಂಡಿಯಾ ಮಾಜಿ ಕ್ರಿಕೆಟಿಗ ಸುನೀಲ್ ಗವಸ್ಕಾರ್ ಕಿಡಿಕಾರಿದ್ದಾರೆ. ನಾವು ಕಮೆಂಟರಿ ಬಾಕ್ಸ್‌ನಲ್ಲಿ ಕುಳಿತು ನಮಗೇನು ಕಾಣಿಸುತ್ತೋ ಅದರ ಬಗ್ಗೆ ಹೇಳುತ್ತೇವೆ. ನಮ್ಮ ಬಗ್ಗೆ ಮಾತನಾಡಿರುವ ವಿಡಿಯೋವನ್ನು ಸ್ಟಾರ್‌ ಸ್ಪೋಟ್ಸ್ ಮತ್ತೆ ಪ್ರಸಾರ ಮಾಡಿದರೆ ನಾನು ಸುಮ್ಮನಿರುವುದಿಲ್ಲ. ವಿರಾಟ್‌ ಕೊಹ್ಲಿ ಹೇಳಿಕೆ ಎಲ್ಲ ಕಾಮೆಂಟೇಟರ್ಸ್‌ಗೆ ಮಾಡಿದ ‌ಅವಮಾನ. ಹೊರಗಿನವರ ಕಾಮೆಂಟ್‌ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದರೆ ನೀನು ಉತ್ತರಿಸಬೇಡ ಎಂದು ಸುನೀಲ್ ಗವಸ್ಕಾರ್ ಗರಂ ಆಗಿದ್ದಾರೆ.

Sunil Gavaskar angry with Virat Kohli Statement

ಕೊಹ್ಲಿ ವಿರೋಧಿಗಳ ವಿರುದ್ಧ ಕೈಫ್‌ ವಾಗ್ದಾಳಿ :

ಇದಕ್ಕೂ ಟೀಮ್‌ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್‌ ಕೈಫ್‌ ಅವರು ವಿರಾಟ್‌ ಕೊಹ್ಲಿ ಪರ ಬ್ಯಾಟ್‌ ಬೀಸಿದ್ದರು. ಟಿ20 ಕ್ರಿಕೆಟ್‌ ಅನ್ನುವುದು ಕೇವಲ ಸ್ಟ್ರೈಕ್‌ ರೇಟ್‌ ಮಾತ್ರ ಅಲ್ಲ ಎಂದು ವಿರಾಟ್‌ ಕೊಹ್ಲಿ ಸಾಬೀತು ಪಡಿಸಿದ್ದಾರೆ. 2022ರ ಟಿ2o ವಿಶ್ವಕಪ್‌ ವೇಳೆ ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಕಿಕ್ಕಿರಿದು ತುಂಬಿದ ಜನಸಾಗರ ಮಧ್ಯೆ ಪಾಕಿಸ್ತಾನ ವಿರುದ್ಧ ಹ್ಯಾರಿಸ್‌ ರಾಫ್‌ ಬೌಲಿಂಗ್‌ನಲ್ಲಿ ಸಿಕ್ಸರ್‌ ಹೊಡೆದು ಪಂದ್ಯ ಗೆಲ್ಲಿಸಲು ಸಿಂಹದ ಗುಂಡಿಗೆ ಬೇಕು. ಸ್ಟ್ರೈಕ್‌ ರೇಟ್‌ ಅಲ್ಲ ಎಂದು ಕೊಹ್ಲಿ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು.

Story first published: Sunday, May 5, 2024, 11:43 [IST]
Other articles published on May 5, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+