ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಆಕ್ರಣಕಾರಿ ಆಟಕ್ಕೆ ಹೊಸ ಹೆಸರಿಟ್ಟ ಸುನಿಲ್ ಗವಾಸ್ಕರ್
ನವದೆಹಲಿ: ಟೀಮ್ ಇಂಡಿಯಾ ಬಾಂಗ್ಲಾದೇಶ ವಿರುದ್ಧ ಕಾನ್ಪುರದಲ್ಲಿ ಅಮೋಘ ಪ್ರದರ್ಶನ ನೀಡಿ ಎರಡನೇ ಟೆಸ್ಟ್ ಪಂದ್ಯ ಗೆದ್ದಿತು. ರೋಹಿತ್ ಶರ್ಮಾ ಪಡೆಯ ಈ ಆಟಕ್ಕೆ ವಿಶ್ವವೇ ಸಲಾಂ ಎಂದಿತ್ತು. ಟೀಮ್ ಇಂಡಿಯಾದ ಅಟ್ಯಾಕಿಂಗ್ ಆಟವನ್ನು ಕಂಡು ಅಭಿಮಾನಿಗಳು ಫುಲ್ ಮಾರ್ಕಸ್ ನೀಡಿದ್ದರು. ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್ ರೋಹಿತ್ ಪಡೆಯ ಆಟವನ್ನು ಕಂಡು 'ಬೇಸ್‌ಬಾಲ್' ಎಂದು ಕರೆದಿದ್ದಾರೆ.
ಟೀಮ್ ಇಂಡಿಯಾದ ಆಟಗಾರ ಆಟಕ್ಕೆ ವಿಶ್ವವೇ ಸಲಾಂ ಎಂದು ತಿಳಿಸಿತ್ತು. ಕಾನ್ಪುರ್‌ನಲ್ಲಿ ಟೀಮ್ ಇಂಡಿಯಾ ಆಡಿದ ಅಗ್ರೇಸಿವ್ ಗೇಮ್ ಕಂಡು ಟೀಂ ಇಂಡಿಯಾದ ಮಾಜಿ ಅನುಭವಿ ಬ್ಯಾಟ್ಸ್ ಮನ್ ಸುನಿಲ್ ಗವಾಸ್ಕರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇತ್ತೀಚಿಗೆ ಸ್ಪೋರ್ಟ್ಸ್ ಸ್ಟಾರ್‌ನಲ್ಲಿ ಬರೆದ ಅಂಕಣದಲ್ಲಿ ಇದರ ಗೆಲುವಿನ ಶ್ರೇಯ ಯಾರಿಗೆ ಸಲ್ಲುತ್ತದೆ ಎಂದು ಬರೆದಿದ್ದಾರೆ.

ಎರಡನೇ ಟೆಸ್ಟ್ ಗೆಲುವಿನ ಶ್ರೇಯ ಯಾರಿಗೆ?
ಸುನಿಲ್ ಗವಾಸ್ಕರ್ ಅವರ ಪ್ರಕಾರ ಎರಡನೇ ಟೆಸ್ಟ್ ಪಂದ್ಯ ಗೆಲುವಿನ ಸಂಪೂರ್ಣ ಶ್ರೇಯ ನಾಯಕ ರೋಹಿತ್ ಶರ್ಮಾ ಅವರಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ ಟೀಮ್ ಇಂಡಿಯಾದ ಬ್ಯಾಟಿಂಗ್ ಅಮೋಘವಾಗಿತ್ತು. ಹಳೆಯ ವಿಧಾನಗಳಿಗೆ ನೀಡಿದ ಹೊಸ ಹೆಸರುಗಳು ಎಂದು ಬರೆದುಕೊಂಡಿದ್ದಾರೆ. ಹಲವರು ಗೌತಮ್ ಗಂಭೀರ್ ಅವರನ್ನು ಗ್ಯಾಂಬಲ್ ಎಂದು ಕರೆಯುತ್ತಿದ್ದಾರೆ ಎಂದು ಗವಾಸ್ಕರ್ ಬರೆದಿದ್ದಾರೆ.
ಇಂಗ್ಲೆಂಡ್ ತಂಡದ ಕೋಚ್ ಬ್ರೆಂಡನ್ ಮೆಕಲಮ್ ಮತ್ತು ನಾಯಕ ಬೆನ್ ಸ್ಟೋಕ್ಸ್ ಅವರ ಅವಧಿಯಲ್ಲಿ ಆಂಗ್ಲರು ತಮ್ಮ ಆಟದ ಶೈಲಿಯನ್ನು ಹೇಗೆ ಬದಲಿಸಿಕೊಂಡರು ಎಂಬುದು ತಿಳಿದಿದೆ. ರೋಹಿತ್ ಶರ್ಮಾ ಕೂಡ ಕಳೆದ ಕೆಲವು ವರ್ಷಗಳಿಂದ ಇದೇ ರೀತಿ ಬ್ಯಾಟಿಂಗ್ ಮಾಡುತ್ತಿದ್ದು, ತಂಡವನ್ನು ಇದೇ ರೀತಿ ಆಡಲು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದಿದ್ದಾರೆ.

ಟೀಮ್ ಇಂಡಿಯಾಕ್ಕೆ ಗವಾಸ್ಕರ್ ನೀಡಿದ ಹೆಸರೇನು?
ಟೀಮ್ ಇಂಡಿಯಾದ ಆಕ್ರಮಣಕಾರಿ ಆಟಕ್ಕೆ ಕೋಚ್ ಗಂಭೀರ್ ಅವರಿಗೆ ಕ್ರೆಡಿಟ್ ನೀಡುವುದು ಸರಿಯಲ್ಲಾ ಎಂದಿದ್ದಾರೆ. ಅವರು ತಮ್ಮ ವೃತ್ತಿಯನ್ನು ಈಗ ಆರಂಭಿಸಿದ್ದಾರೆ. ಅವರು ಮೈದಾನದಲ್ಲಿ ಎಂದು ಈ ರೀತಿ ಬ್ಯಾಟ್ ಮಾಡಿಲ್ಲ. ಎರಡನೇ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದ ಶ್ರೇಯ ರೋಹಿತ್ ಶರ್ಮಾ ಅವರಿಗೆ ಸಲ್ಲಬೇಕು. ಇನ್ನು ಟೀಮ್ ಇಂಡಿಯಾದ ಈ ಹೊಸ ಅಪ್ರೋಚ್‌ಗೆ ಸುನಿಲ್ ಗವಾಸ್ಕರ್ ರೋಹಿತ್ ಟೀಮ್‌ಗೆ ಹೊಸ ಹೆಸರನ್ನು ನೀಡಿದ್ದಾರೆ. ಗವಾಸ್ಕರ್ ಟೀಮ್ ಇಂಡಿಯಾವನ್ನು 'ಗೋಹಿತ್' ಎಂದು ಕರೆದಿದ್ದಾರೆ.
ಬಾಂಗ್ಲಾ ವಿರುದ್ಧ ಕ್ಲೀನ್ ಸ್ವೀಪ್ ಸಾಧನೆ
ಭಾರತ ಪ್ರವಾಸದಲ್ಲಿ ಬಾಂಗ್ಲಾ ಈಗಾಗಲೇ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದೆ. ಚೆನ್ನೈ ಹಾಗೂ ಕಾನ್ಪುರ್‌ದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಅಕ್ಟೋಬರ್ 16ರಿಂದ ಟೀಮ್ ಇಂಡಿಯಾ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications