Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗಬ್ಬಾ ಪಿಚ್‌ಗೆ ಎಷ್ಟು ಡಿಮೆರಿಟ್ ಅಂಕ ನೀಡಿದ್ದೀರಾ? ಐಸಿಸಿ ವಿರುದ್ಧ ಸುನಿಲ್ ಗವಾಸ್ಕರ್ ಕಿಡಿ

Sunil Gavaskar Criticizes ICC For Indore Pitch Demerit Points Which Was Deemed To Be Poor

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್ ಪಂದ್ಯ ಮೂರು ದಿನಕ್ಕೆ ಮುಕ್ತಾಯವಾಗಿದೆ. ಸ್ಪಿನ್ನರ್ ಗಳಿಗೆ ಹೆಚ್ಚಿನ ನೆರವು ನೀಡಿದ ಪಿಚ್‌ನಲ್ಲಿ ಆಸ್ಟ್ರೇಲಿಯಾ 9 ವಿಕೆಟ್‌ಗಳ ಜಯ ಸಾಧಿಸಿದೆ. ಇಂದೋರ್ ಪಿಚ್‌ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.

ಭಾರತದ ಸೋಲಿನ ಬೆನ್ನಲ್ಲೇ ಐಸಿಸಿ ಬಿಸಿಸಿಗೆ ಮತ್ತೊಂದು ಶಾಕ್ ನೀಡಿತ್ತು. ಪಿಚ್ ಮತ್ತು ಔಟ್‌ಫೀಲ್ಡ್ ಮಾನಿಟರಿಂಗ್ ಪ್ರಕ್ರಿಯೆಯ ಅಡಿಯಲ್ಲಿ ಐಸಿಸಿ ಇಂದೋರ್ ಪಿಚ್ ಅನ್ನು ಕಳಪೆ ಎಂದು ಪರಿಗಣಿಸಿದೆ.

ಐಸಿಸಿ ನೀಡಿದ ತೀರ್ಪಿನ ಬಗ್ಗೆ ಭಾರತ ಮಾಜಿ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2022ರ ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯವನ್ನು ಆಯೋಜಿಸಿದ್ದ ಗಬ್ಬಾ ಪಿಚ್‌ ಬಗ್ಗೆ ಅವರು ನೆನಪಿಸಿದ್ದಾರೆ.

ಇಂದೋರ್ ಟೆಸ್ಟ್‌ನಲ್ಲಿ ಮೊದಲನೇ ದಿನವೇ ಚೆಂಡು 4.8 ಡಿಗ್ರಿಯಷ್ಟು ತಿರುವು ಪಡೆಯುತ್ತಿತ್ತು. ಸ್ಪಿನ್ನರ್‌ಗಳು ಇಡೀ ಪಂದ್ಯದಲ್ಲಿ ಪ್ರಾಬಲ್ಯ ಮೆರೆದರು. ನಾಥನ್ ಲಿಯಾನ್ 11 ವಿಕೆಟ್ ಪಡೆಯುವ ಮೂಲಕ ಭಾರತ ತಂಡದ ಸೋಲಿಗೆ ಪ್ರಮುಖ ಕಾರಣವಾದರು. ಪಂದ್ಯದಲ್ಲಿ ಬಿದ್ದ 31 ವಿಕೆಟ್‌ಗಳಲ್ಲಿ ಸ್ಪಿನ್ನರ್ ಗಳು 26 ವಿಕೆಟ್ ಪಡೆದುಕೊಂಡು ಮಿಂಚಿದರು.

ಮೂರು ಡಿಮೆರಿಟ್ ಅಂಕ ನೀಡಿದ ಐಸಿಸಿ

ಮೂರು ಡಿಮೆರಿಟ್ ಅಂಕ ನೀಡಿದ ಐಸಿಸಿ

ಇಂದೋರ್ ಪಿಚ್ ಅನ್ನು ಕಳಪೆ ಎಂದು ಪರಿಗಣಿಸಿದ ಐಸಿಸಿ ಮೂರು ಡಿಮೆರಿಟ್ ಅಂಕ ನೀಡಿದೆ. ಪಿಚ್‌ನಲ್ಲಿ ಮಾತನಾಡಿದ ಐಸಿಸಿ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್, "ಪಿಚ್ ತುಂಬಾ ಶುಷ್ಕವಾಗಿತ್ತು, ಬ್ಯಾಟ್ ಮತ್ತು ಬಾಲ್‌ಗೆ ಸಮನಾದ ಸಹಕಾರ ನೀಡಲಿಲ್ಲ. ಆರಂಭದಿಂದಲೂ ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿತ್ತು. ವೇಗಿಗಳಿಗೆ ಪಿಚ್ ಯಾವುದೇ ನೆರವು ನೀಡಲಿಲ್ಲ. ಪಂದ್ಯದುದ್ದಕ್ಕೂ ಅಸಮವಾದ ಬೌನ್ಸ್ ಇತ್ತು" ಎಂದು ಹೇಳಿದರು.

ಐಸಿಸಿ ವಿರುದ್ಧ ಸುನಿಲ್ ಗವಾಸ್ಕರ್ ಟೀಕೆ

ಐಸಿಸಿ ವಿರುದ್ಧ ಸುನಿಲ್ ಗವಾಸ್ಕರ್ ಟೀಕೆ

ಇಂಡಿಯಾ ಟುಡೆ ಜೊತೆ ಮಾತನಾಡಿದ ಗವಾಸ್ಕರ್, ಗಬ್ಬಾ ಅಂಗಳದಲ್ಲಿ ಎರಡೇ ದಿನಕ್ಕೆ ಮುಕ್ತಾಯವಾದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯವನ್ನು ನೆನಪಿಸಿಕೊಂಡರು.

"ನವೆಂಬರ್‌ನಲ್ಲಿ ಬ್ರಿಸ್ಬೇನ್ ಗಬ್ಬಾದಲ್ಲಿ ಟೆಸ್ಟ್ ಪಂದ್ಯ ನಡೆಯಿತು. ಆ ಪಂದ್ಯ ಎರಡೇ ದಿನಕ್ಕೆ ಮುಕ್ತಾಯವಾಗಿತ್ತು. ಆ ಪಿಚ್‌ಗೆ ಐಸಿಸಿ ಎಷ್ಟು ಡಿಮೆರಿಟ್ ಅಂಕ ನೀಡಿದೆ, ಮತ್ತು ಅಲ್ಲಿ ಮ್ಯಾಚ್ ರೆಫರಿ ಯಾರು?" ಎಂದು ಪ್ರಶ್ನೆ ಮಾಡಿದರು.

ಇಂದೋರ್ ಪಿಚ್‌ಗೆ ಮೂರು ಡಿಮೆರಿಟ್ ಅಂಕಗಳನ್ನು ನೀಡಿರುವುದು ಕಠಿಣ ನಿರ್ಧಾರ ಎಂದು ಅವರು ಹೇಳಿದರು. ಈ ಪಿಚ್‌ನಲ್ಲಿ, ಹೌದು ಚೆಂಡು ತಿರುಗಿತು, ಆದರೆ ಅದು ಅಪಾಯಕಾರಿ ಅಲ್ಲ. ಆಸ್ಟ್ರೇಲಿಯ ಒಂದು ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿದಾಗ ಪಿಚ್ ಉತ್ತಮವಾಗಿ ಎಂದು ಅರ್ಥವಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಗಬ್ಬಾ ಪಿಚ್‌ ಬಗ್ಗೆ ಟೀಕೆ

ಗಬ್ಬಾ ಪಿಚ್‌ ಬಗ್ಗೆ ಟೀಕೆ

ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದ ನಾಯಕ ಡೀನ್ ಎಲ್ಗರ್ ಸೇರಿದಂತೆ ಹಲವರಿಂದ ಟೀಕೆಗೆ ಗುರಿಯಾಗಿದ್ದ ಗಬ್ಬಾ ಪಿಚ್‌ಗೆ ಐಸಿಸಿಯಿಂದ ಸರಾಸರಿಗಿಂತ ಕಡಿಮೆ ರೇಟಿಂಗ್ ಪಡೆದಿತ್ತು. ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರೀಸ್ ಸದಸ್ಯ ರಿಚಿ ರಿಚರ್ಡ್‌ಸನ್ ಗಬ್ಬಾ ಪಿಚ್‌ ಬಗ್ಗೆ ಮಾತನಾಡಿ, "ಗಬ್ಬಾ ಪಿಚ್ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತಿತ್ತು. ಹೆಚ್ಚುವರಿ ಬೌನ್ಸ್ ಮತ್ತು ಸಾಂದರ್ಭಿಕ ಅತಿಯಾದ ಸೀಮ್ ಚಲನೆ ಇತ್ತು. ಬ್ಯಾಟಿಂಗ್ ಮಾಡಲು ಇದು ಕಷ್ಟಕರವಾದ ಪಿಚ್ ಆಗಿತ್ತು. ಐಸಿಸಿ ಮಾರ್ಗಸೂಚಿಗಳ ಪ್ರಕಾರ ಪಿಚ್ ಸರಾಸರಿಗಿಂತ ಕಡಿಮೆಯಾಗಿದೆ" ಎಂದು ಹೇಳಿದ್ದಾರೆ.

Story first published: Saturday, March 4, 2023, 16:03 [IST]
Other articles published on Mar 4, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+