ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿಗೆ ಧೋನಿ ಸಹಾಯ ಬೇಕು: ಗವಾಸ್ಕರ್

ಮುಂಬೈ, ಅಕ್ಟೋಬರ್ 30: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ 2019ರ ವಿಶ್ವಕಪ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಅವರ ಸಹಾಯದ ಅಗತ್ಯವಿದೆ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಕಪ್ ತಂಡದಲ್ಲಿ ಧೋನಿ ಇರುವುದರಿಂದ ವಿರಾಟ್ ಕೊಹ್ಲಿಗೆ ಭಾರಿ ದೊಡ್ಡ ಲಾಭವಾಗಲಿದೆ ಎಂದು ಗವಾಸ್ಕರ್ ಹೇಳಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಎಂ.ಎಸ್. ಧೋನಿಯ ಸಲಹೆ ಮತ್ತು ಅನುಭವವು ವಿರಾಟ್ ಕೊಹ್ಲಿಗೆ ಅನುಕೂಲಕರವಾಗಿದೆ. ಅದರಲ್ಲಿ ಯಾವ ಅನುಮಾನವೂ ಇಲ್ಲ. 50 ಓವರ್‌ಗಳ ವಿಭಾಗದಲ್ಲಿ ಧೋನಿ ಇರುವುದರಿಂದ ಕೊಹ್ಲಿಗೆ ನಿರಾಳತೆ ಹೆಚ್ಚು.
ಧೋನಿ ಸಣ್ಣಪುಟ್ಟ ಫೀಲ್ಡಿಂಗ್ ಬದಲಾವಣೆಗಳನ್ನು ಮಾಡುತ್ತಾರೆ. ಬೌಲರ್‌ಗಳ ಜತೆ ಹಿಂದಿಯಲ್ಲಿ ಮಾತನಾಡುತ್ತಾರೆ. ಎಲ್ಲಿ ಯಾವ ರೀತಿ ಬೌಲ್ ಮಾಡಬೇಕು ಎಂದು ಸೂಚಿಸುತ್ತಾರೆ. ಇದು ಕೊಹ್ಲಿಗೆ ದೊಡ್ಡ ಲಾಭವಾಗಿದೆ ಎಂದಿದ್ದಾರೆ.
ಧೋನಿ ಅವರಿಗೆ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಮತ್ತು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗಳಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಧೋನಿ ಅನುಪಸ್ಥಿತಿಯಲ್ಲಿ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ತಂಡವನ್ನು ಟಿ20ಯಲ್ಲಿ ಮುನ್ನಡೆಸಬೇಕಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ ಸಹ ಆಡುತ್ತಿಲ್ಲ. ರೋಹಿತ್ ಶರ್ಮಾ ನಾಯಕತ್ವದಲ್ಲಿ ತಂಡ ಆಡಲಿದೆ. ಈ ಎರಡೂ ಸರಣಿಗಳಿಗೆ ರಿಷಬ್ ಪಂತ್ ವಿಕೆಟ್ ಕೀಪರ್ ಆಗಿರಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications