For Quick Alerts
ALLOW NOTIFICATIONS  
For Daily Alerts
 

ಜೆಮಿಮಾ ರೊಡ್ರಿಗಸ್‌ಗೆ ಸ್ಮರಣೀಯ ಉಡುಗೊರೆ ನೀಡಿದ ಗವಾಸ್ಕರ್

ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಜೆಮಿಮಾ ರೋಡ್ರಿಗಸ್‌ ಅವರಿಗೆ ದಿಗ್ಗಜ ಆಟಗಾರ ಸುನಿಲ್‌ ಗವಾಸ್ಕರ್‌ ಉಡುಗೊರೆಯನ್ನು ನೀಡಿದ್ದಾರೆ. ಈ ಉಡುಗೊರೆ ಜೆಮಿಮಾ ಅವರ ಮನಸ್ಸಿಗೆ ತುಂಬಾ ಹತ್ತಿರವಾಗಿದೆ. ಗವಾಸ್ಕರ್ ಅವರು ಟೀಮ್ ಇಂಡಿಯಾ ಏಕದಿನ ವಿಶ್ವಕಪ್‌ ಗೆದ್ದರೆ ಜೆಮಿಮಾ ಅವರೊಂದಿಗೆ ಒಂದು ಹಾಡನ್ನು ಹಾಡುವುದಾಗಿ ತಿಳಿಸಿದ್ದರು. ಇವರು ಈ ಮಾತನ್ನು ಉಳಿಸಿಕೊಂಡಿದ್ದಾರೆ.

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಆತಿಥೇಯ ತಂಡ ಅಮೋಘ ಪ್ರದರ್ಶನ ನೀಡಿತ್ತು. ಅಲ್ಲದೆ ಸೆಮಿಫೈನಲ್‌ ಪಂದ್ಯದಲ್ಲಿ ದಾಖಲೆ ಚಾಂಪಿಯನ್‌ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡೆದಿತ್ತು. ಈ ಪಂದ್ಯದಲ್ಲಿ ಜೆಮಿಮಾ ರೋಡ್ರಿಗಸ್‌ ಅವರು ಭರ್ಜರಿ ಬ್ಯಾಟಿಂಗ್ ನಡೆಸಿ ತಂಡಕ್ಕೆ ಜಯದ ಮಾಲೆ ತೊಡಿಸಿದ್ದರು. ಈ ಪಂದ್ಯದಲ್ಲಿ ಜೆಮಿಮಾ ಅವರು ಅಜೇಯ 127 ರನ್‌ ಸಿಡಿಸಿ ಅಬ್ಬರಿಸಿದ್ದರು. ಪರಿಣಾಮ ಭಾರತ ಪ್ರಶಸ್ತಿ ಸುತ್ತಿಗೆ ಅರ್ಹತೆಯನ್ನು ಪಡೆದಿತ್ತು.

Sunil Gavaskar Gifts Custom Bat-Shaped Guitar to Jemimah Rodrigues After World Cup Victory

ನವಿ ಮುಂಬೈನ ಡಿವೈ ಪಾಟೀಲ್‌ ಮೈದಾನದಲ್ಲಿ ಭಾರತ, ದಕ್ಷಿಣ ಆಫ್ರಿಕಾ ತಂಡಗಳು ಪ್ರಶಸ್ತಿಗಾಗಿ ಕಾದಾಟವನ್ನು ನಡೆಸಿದವು. ಈ ವೇಳೆ ಭಾರತ ಸಂಘಟಿತ ಆಟದ ಪ್ರದರ್ಶನ ನೀಡಿ 52 ರನ್‌ ಜಯ ಸಾಧಿಸಿತು. ಈ ಮೂಲಕ ತವರಿನಲ್ಲಿ ಏಕದಿನ ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿತು. ಭಾರತ ಟ್ರೋಫಿಗೆ ಮುತ್ತಿಟ್ಟು ದಿನಗಳೇ ಕಳೆದಿದ್ದವು. ಆಗ ಅಭಿಮಾನಿಗಳು ಗವಾಸ್ಕರ್‌ ಅವರು ರೋಡ್ರಿಗಸ್‌ ಅವರೊಂದಿಗೆ ಯಾವಾಗ ಹಾಡು ಹೇಳುತ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಈಗ ಅವರ ಆಸೆ ಈಡೇರಿದೆ.

ಜೆಮಿಮಾಗೆ ಗವಾಸ್ಕರ್‌ ಉಡುಗೊರೆ

ಸುನಿಲ್ ಗವಾಸ್ಕರ್‌ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಜೆಮಿಮಾ ರೋಡ್ರಿಗಸ್ ಅವರಿಗೆ ಬ್ಯಾಟ್ ಆಕಾರದ ಗಿಟಾರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕೆ ಜೆಮಿಮಾ ಬ್ಯಾಟರ್ ಎಂದು ಹೆಸರಿಸಿದರು. ಈ ಸುಂದರ್ ಕ್ಷಣವನ್ನು ಜೆಮಿಮಾ ತಮ್ಮ ಸಾಮಾಜಿಕ ತಾಣದಲ್ಲಿ ಹಾಕಿಕೊಂಡಿದ್ದಾರೆ.

ಜೆಮಿಮಾ ಅವರು ಕ್ರಿಕೆಟ್‌ ಆಟವನ್ನು ಎಷ್ಟು ಪ್ರೀತಿಸುತ್ತಾರೋ ಅಷ್ಟೇ, ಗಿಟಾರ್‌ ನುಡಿಸುವುದನ್ನು ಸಹ ಇಷ್ಟ ಪಡುತ್ತಾರೆ. ಜೆಮಿಮಾ ಎಲ್ಲಿಯೇ ಪ್ರವಾಸ ಕೈಗೊಂಡರೂ ಅವರೊಂದಿಗೆ ಗಿಟಾರ್‌ಗೂ ಸ್ಥಾನ ಇರುತ್ತದೆ. ಸಮಯ ಸಿಕ್ಕಾಗ ಅದನ್ನು ನುಡಿಸಿ ಖುಷಿ ಪಡುತ್ತಾರೆ. ಅವರು ಗಿಟಾರ್‌ ನುಡಿಸುವ ವಿಡಿಯೋಗಳು ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗಿವೆ. ಈಗ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಸಹ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಇದರ ವಿಡಿಯೋ ಜೆಮಿಮಾ ಅವರ ಇನ್‌ಸ್ಟಾಗ್ರಾಮ್‌ನಲ್ಲಿ ಇದೆ.

ಗವಾಸ್ಕರ್ ಯುವ ಕ್ರಿಕೆಟಿಗನೊಂದಿಗೆ ಶೋಲೆ ಚಿತ್ರದ "ಯೇ ದೋಸ್ತಿ ಹಮ್ ನಹಿ ತೋಡೆಂಗೆ" ಹಾಡನ್ನು ಹಾಡಿದರು. ಈ ವಿಡಿಯೋ ಸಖತ್‌ ವೈರಲ್ ಆಗುತ್ತಿದೆ.

ಜೆಮಿಮಾ ರೋಡ್ರಿಗಸ್ ಅವರು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮೊದಲ ಬಾರಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇವರು ನಾಲ್ಕನೇ ಆವೃತ್ತಿಯಲ್ಲಿ ಕಪ್‌ಗೆ ಮುತ್ತಿಡುವ ಆಸೆಯನ್ನು ಹೊಂದಿದ್ದಾರೆ.

Story first published: Saturday, January 10, 2026, 21:35 [IST]
Other articles published on Jan 10, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+