For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಪಡೆ ವಿರುದ್ಧ ಸೇಡು ತೀರಿಸಿಕೊಳ್ಳಲು ಇಂಗ್ಲೆಂಡ್ ಆ ಕೆಲಸ ಮಾಡಬಹುದು: ಸುನಿಲ್ ಗವಾಸ್ಕರ್

Sunil Gavaskar gives his verdict on India tour of England

ವರ್ಷಾರಂಭದಲ್ಲಿ ಭಾರತ ಪ್ರವಾಸವನ್ನು ಕೈಗೊಂಡಿದ್ದ ಇಂಗ್ಲೆಂಡ್ ಎಲ್ಲಾ ಸರಣಿಗಳಲ್ಲಿಯೂ ಸೋತಿತ್ತು. ಎಲ್ಲಾ ಸರಣಿಗಳಲ್ಲಿಯೂ ಭಾರತಕ್ಕೆ ಶರಣಾದ ಬಳಿಕ ಇಂಗ್ಲೆಂಡ್ ತಂಡದ ಕೆಲ ಆಟಗಾರರು ಭಾರತದ ಪಿಚ್ ವಿನ್ಯಾಸದ ಕುರಿತು ಕ್ಯಾತೆ ತೆಗೆದಿದ್ದರು. ತಮಗೆ ಬೇಕಾದ ರೀತಿ ಪಿಚ್ ವಿನ್ಯಾಸಗೊಳಿಸಿಕೊಂಡಿದ್ದಾರೆ, ಹೀಗಾಗಿ ತಮ್ಮ ತಂಡದ ಆಟಗಾರರಿಗೆ ವಿಕೆಟ್ ಪಡೆಯಲು ಆಗುತ್ತಿಲ್ಲ ಎಂಬ ಆರೋಪಗಳು ಸಹ ಆಂಗ್ಲರಿಂದ ಕೇಳಿಬಂದಿದ್ದವು.

ಯಾರಾಗ್ತಾರೆ ಧೋನಿ ಬಳಿಕ ಚೆನ್ನೈ ತಂಡದ ನಾಯಕ? ಈ 5 ಆಟಗಾರರ ಮೇಲೆ ಸಿಎಸ್‌ಕೆ ಕಣ್ಣು!

ಇದೀಗ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಕೈಗೊಳ್ಳಲಿದ್ದು ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಬಳಿಕ ಇಂಗ್ಲೆಂಡ್ ವಿರುದ್ಧ ಆಗಸ್ಟ್ 4ರಿಂದ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿ ಕುರಿತು ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಮಾತನಾಡಿದ್ದು ಇಂಗ್ಲೆಂಡ್ ಭಾರತ ನೆಲದಲ್ಲಿ ಈ ಎಲ್ಲಾ ಸರಣಿಗಳನ್ನು ಸೋತಿದ್ದಕ್ಕೆ ಈ ಬಾರಿ ಸೇಡು ತೀರಿಸಿಕೊಳ್ಳುವ ಪ್ರಯತ್ನ ಮಾಡಲಿದೆ ಎಂದಿದ್ದಾರೆ.

'ಭಾರತ ನೆಲದಲ್ಲಿ ಎಲ್ಲಾ ಸರಣಿಗಳನ್ನು ಸೋತ ಬಳಿಕ ಪಿಚ್ ಕ್ಯಾತೆ ತೆಗೆದಿದ್ದ ಇಂಗ್ಲೆಂಡ್ ಮುಂಬರುವ ಸರಣಿಯಲ್ಲಿ ಹಸಿರು ಪಿಚ್‌ನ್ನು ವಿನ್ಯಾಸಗೊಳಿಸಿದರೆ ಯಾವುದೇ ಆಶ್ಚರ್ಯವಿಲ್ಲ. ಆದರೆ ಭಾರತ ತಂಡದ ಆಟಗಾರರು ಆ ಪಿಚ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎನ್ನುವ ನಂಬಿಕೆ ನನ್ನಲ್ಲಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮುಗಿದ ಮೇಲೂ 6 ವಾರಗಳ ಕಾಲಾವಕಾಶವಿರಲಿದ್ದು ಭಾರತೀಯ ಆಟಗಾರರು ಇಂಗ್ಲೆಂಡ್ ಪಿಚ್‌ಗಳಿಗೆ ಹೊಂದಿಕೊಂಡು ಅಲ್ಲಿಯೂ ಜಯ ಸಾಧಿಸಲಿದ್ದಾರೆ' ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

Story first published: Monday, May 31, 2021, 9:46 [IST]
Other articles published on May 31, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+