"ಭಾರತದ ಭವಿಷ್ಯದ ಸೂಪರ್ ಸ್ಟಾರ್ ಆಟಗಾರ ಆತ" : ಸುನಿಲ್ ಗವಾಸ್ಕರ್

ಯುಎಇನಲ್ಲಿ ಐಪಿಎಲ್ ಭರ್ಜರಿಯಾಗಿ ಆರಂಭಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಭವಿಷ್ಯದ ಆಟಗಾರನನ್ನು ಹೆಸರಿಸಿ ಆತ ಭವಿಷ್ಯದ ಸೂಪರ್ ಸ್ಟಾರ್ ಆಟಗಾರನಾಗಿಲಿದ್ದಾರೆ ಎಂದು ಹೇಳಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿರುವ ಆ ಕ್ರಿಕೆಟಿಗನನ್ನು ತಂಡ ಈ ಬಾರಿ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಎಂದು ಹೇಳಿದ್ದಾರೆ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ತನ್ನ ಮೊದಲ ಪಂದ್ಯವನ್ನು ಆಡುವುದಕ್ಕೂ ಮುನ್ನ ಸುನಿಲ್ ಗವಾಸ್ಕರ್ ಈ ಹೇಳಿಕೆಯನ್ನು ನೀಡಿದ್ದಾರೆ. ಅಬುಧಾಬಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ತನ್ನ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಆಡಲಿದೆ.
ಸ್ಪೋರ್ಟ್ಸ್ ತಕ್ ಜೊತೆಗೆ ಮಾತನಾಡಿದ ಸುನಿಲ್ ಗವಾಸ್ಕರ್ ಭಾರತ ಭವಿಷ್ಯದ ಆಟಗಾರ ಎಂದು ಹೇಳಲ್ಪಟ್ಟ ಆಟಗಾರ ಯಾರು? ಆತನ ವಿಶೇಷತೆಯೇನು ಮುಂದೆ ಓದಿ..

ಸುನಿಲ್ ಗವಾಸ್ಕರ್ ಹೇಳಿದ ಆಟಗಾರ ಯಾರು?
ಸುನಿಲ್ ಗವಾಸ್ಕರ್ ಭಾರತದ ಭವಿಷ್ಯದ ಸೂಪರ್ ಸ್ಟಾರ್ ಆಟಗಾರ ಎಂದು ಹೇಳಿದ್ದು ಬೇರೆ ಯಾರನ್ನೂ ಅಲ್ಲ. ಆದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಯುವ ಆಟಗಾರ ಶುಬ್ಮನ್ ಗಿಲ್ ಬಗ್ಗೆ. ಆತನನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸೂಕ್ತವಾಗಿ ಬಳಸಿಕೊಳ್ಳಬೇಕು. ಪ್ರತಿ ಪಂದ್ಯದಲ್ಲೂ ಆತನಿಗೆ ಆಡಲು ಅವಕಾಶವನ್ನು ನೀಡಬೇಕು ಎಂದು ಹೇಳಿದ್ದಾರೆ.

ಕೆಕೆಆರ್ ಬೆಂಬಲವಾಗಿ ನಿಲ್ಲಬೇಕು
"ಶುಭ್ಮನ್ ಗಿಲ್‌ಗೆ ಕೆಕೆಆರ್ ತಂಡ ಬೆಂಬಲವಾಗಿ ನಿಲ್ಲಬೇಕು. ಪ್ರತಿ ಪಂದ್ಯದಲ್ಲೂ ನೀನು ಅಡಲು ಇಳಿಯುತ್ತೀಯ ಎಂಬ ವಿಶ್ವಾಸವನ್ನು ಆತನಿಗೆ ತುಂಬುವುದರ ಜೊತೆಗೆ ಆರಂಭಿನಾಗಿ ಆತನನ್ನು ಕಣಕ್ಕಿಳಿಸಬೇಕು. ಆಗ ಆತನಲ್ಲಿರುವ ನೈಜ ಸಾಮರ್ಥ್ಯವನ್ನು ಹೊರಗೆಡವಲು ಸಾಧ್ಯ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

'ಯಾರನ್ನೇ ಕೇಳಿ ಗಿಲ್ ಹೆಸರು ಹೇಳುತ್ತಾರೆ'
ಶತನೋರ್ವ ನಿಜಕ್ಕೂ ಶಾಸ್ತ್ರೀಯ ಆಟಗಾರ. ನೀವು ಯಾವುದೇ ಭಾರತೀಯ ಕ್ರಿಕೆಟ್ ಆಟಗಾರರಲ್ಲಿ ಭವಿಷ್ಯದ ತಾರೆ ಯಾರು ಎಂದು ಕೇಳಿ. ಅವರು ಶುಭ್ಮನ್ ಗಿಲ್ ಹೆಸರನ್ನೇ ಹೇಳುತ್ತಾರೆ. ತಾನು ಯಾಕೆ ಭವಿಷ್ಯದ ತಾರೆ ಎಂಬುದನ್ನು ನಿರೂಪಿಸಲು ಆತನಿಗೂ ಇದೊಂದು ಅತ್ಯುತ್ತಮ ಅವಕಾಶ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಕೊಲ್ಕತ್ತಾ ಗೆಲ್ಲುವ ಅವಕಾಶವನ್ನು ಹೊಂದಿದೆ
ಇದೇ ಸಂದರ್ಭದಲ್ಲಿ ಸುನಿಲ್ ಗವಾಸ್ಕರ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆ ಉತ್ತಮವಾಗಿದ್ದು ಯುಎಇನಲ್ಲಿ ನಡೆಯುತ್ತಿರುವ ಈ ಬಾರಿಯ ಟೂರ್ನಿಯನ್ನು ಗೆಲ್ಲುವ ಅವಕಾಶವನ್ನು ಹೊಂದಿದೆ ಎಂದು ಹೇಳಿದ್ದಾರೆ. ಕೊಲ್ಕತ್ತಾ ಹೆಚ್ಚು ಸಮತೋಲನವನ್ನು ಹೊಂದಿರುವ ತಂಡವಾಗಿದೆ ಎಂದು ಗವಾಸ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications