For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021ರಲ್ಲಿ ಚಾಂಪಿಯನ್ಸ್‌ನಂತೆ ಕಾಣಿಸಿದ ತಂಡ ಹೆಸರಿಸಿದ ಗವಾಸ್ಕರ್

Sunil Gavaskar names team that looked like champion in IPL 2021

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ತಂಡ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರಲ್ಲಿ ನವೀಕರಿಸಿದ ಶಕ್ತಿಯ ತಂಡವಾಗಿ ಕಾಣಿಸಿತು ಎಂದು ಟೀಮ್ ಇಂಡಿಯಾ ಮಾಜಿ ಬ್ಯಾಟ್ಸ್‌ಮನ್‌ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಐಪಿಎಲ್ ಅಮಾನತಾಗುವಾಗ ಸಿಎಸ್‌ಕೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ದ್ವಿತೀಯ ಸ್ಥಾನದಲ್ಲಿತ್ತು.

ಈ ಬಾರಿಯ ಐಪಿಎಲ್‌ನಲ್ಲಿ ಆಡಿರುವ ಏಳು ಪಂದ್ಯಗಳಲ್ಲಿ 5ರಲ್ಲಿ ಗೆದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್‌ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. 3 ಬಾರಿಯ ಚಾಂಪಿಯನ್ಸ್ ಸಿಎಸ್‌ಕೆ ಕಳೆದ ಸೀಸನ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಆದರೆ ಈ ಬಾರಿ ಬಲಿಷ್ಠ ತಂಡವಾಗಿ ವಾಪಸ್ಸಾಗಿತ್ತು.

ಕಳೆದ ಸೀಸನ್‌ನಲ್ಲಿ ಸಿಎಸ್‌ಕೆಯಲ್ಲಿ ಆಲ್ ರೌಂಡರ್ ಸುರೇಶ್ ರೈನಾ ಆಡಿರಲಿಲ್ಲ. ನಾಯಕ ಎಂಎಸ್ ಧೋನಿಯೂ ಅಂಥ ಫಾರ್ಮ್‌ನಲ್ಲಿ ಇರಲಿಲ್ಲ. ಆದ್ದರಿಂದ ಐಪಿಎಲ್ ಇತಿಹಾಸದಲ್ಲೇ ಚೊಚ್ಚಲ ಬಾರಿಗೆ ಪ್ಲೇ ಆಫ್‌ಗೂ ಪ್ರವೇಶಿಸದೆ ಸಿಎಸ್‌ಕೆ ಹೊರಬಿದ್ದಿತ್ತು. ಆದರೆ ಈ ಬಾರಿ ಹೆಚ್ಚು ಬದಲಾವಣೆಯಾಗದ ಅದೇ ತಂಡ ಅದ್ಭುತ ಪ್ರದರ್ಶನದ ಮೂಲಕ ತಮ್ಮದು ಮಾಜಿ ಚಾಂಪಿಯನ್ಸ್ ತಂಡ ಎಂಬುದನ್ನು ಸಾರಿ ಹೇಳಿತ್ತು.

'ಎಲ್ಲಾ ತಂಡಗಳೂ ಉತ್ತಮ ಫಾರ್ಮ್‌ನಲ್ಲಿದ್ದಾಗ ಕಳೆದ ಸಾರಿ ನಿರಾಶೆ ಅನುಭವಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಹಿಂದಿನ ಬಾರಿಯಂತೆ ಅದೇ ಚಾಂಪಿಯನ್ಸ್ ತಂಡದಂತೆ ಕಾಣಿಸಿತು. ಈ ಬಾರಿ ತಂಡದಲ್ಲಿನ ಶಕ್ತಿ ನವೀಕರಿಸದಂತೆ ತೋರಿತು. ದೊಡ್ಡ ಬದಲಾವಣೆಯಿಲ್ಲದಿದ್ದರೂ ತಂಡ ಬಲಿಷ್ಠವೆಂಬುದನ್ನು ಹೇಳುತ್ತಿತ್ತು,' ಎಂದು ಗವಾಸ್ಕರ್ ಹೇಳಿದ್ದಾರೆ.

Story first published: Saturday, May 15, 2021, 14:52 [IST]
Other articles published on May 15, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+