2024ರ ಟಿ20 ವಿಶ್ವಕಪ್‌ನ 4 ಸೆಮಿಫೈನಲಿಸ್ಟ್ ಆಯ್ಕೆ ಮಾಡಿದ ಸುನಿಲ್ ಗವಾಸ್ಕರ್
ಜೂನ್ 2ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಮತ್ತೊಂದು ಕ್ರಿಕೆಟ್ ಹಬ್ಬಕ್ಕಾಗಿ ಅಭಿಮಾನಿಗಳು ಕಾತರರಾಗಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಈಗಾಗಲೇ ಯುಎಸ್‌ಎ ತಲುಪಿದ್ದು, ಜೂನ್ 5ರಂದು ಐರ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ತಮ್ಮ ಎರಡನೇ ಟಿ20 ವಿಶ್ವಕಪ್ ಪ್ರಶಸ್ತಿ ಅನ್ವೇಷಣೆಯನ್ನು ಪ್ರಾರಂಭಿಸಲಿದೆ.

ಭಾರತ ತಂಡ ತನ್ನ ಎ ಗುಂಪಿನಲ್ಲಿ ಐರ್ಲೆಂಡ್, ಪಾಕಿಸ್ತಾನ, ಯುಎಸ್ಎ ಮತ್ತು ಕೆನಡಾ ತಂಡಗಳನ್ನು ಹೊಂದಿದೆ. ಆದರೆ, ಭಾರತ ತಂಡಕ್ಕೆ ನಿಜವಾದ ಪರೀಕ್ಷೆ ಸೂಪರ್ 8 ಹಂತದಿಂದ ಪ್ರಾರಂಭವಾಗುತ್ತದೆ. ಏಕೆಂದರೆ, ಅಲ್ಲಿಗೆ ಸುಲಭವಾಗಿ ಅರ್ಹತೆ ಪಡೆಯುವ ಸಾಧ್ಯತೆಯಿದೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಬುಧವಾರ, ಜೂನ್ 5ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ತಮ್ಮ ಟಿ20 ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ.
ನಂತರ ಜೂನ್ 9ರ ಭಾನುವಾರದಂದು ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನದ ವಿರುದ್ಧ ಭಾರತ ತಂಡ ಹೈ-ವೋಲ್ಟೇಜ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
ಸೂಪರ್ 8 ಹಂತದಿಂದ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಿಸುತ್ತವೆ. 2022ರ ಟಿ20 ವಿಶ್ವಕಪ್‌ನಲ್ಲಿ ಭಾರತವು ಅಂತಿಮವಾಗಿ ಚಾಂಪಿಯನ್ ಇಂಗ್ಲೆಂಡ್ ತಂಡದ ವಿರುದ್ಧ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದಿತು.

ಹಲವು ಮಾಜಿ ಕ್ರಿಕೆಟಿಗರು ಇತ್ತೀಚೆಗೆ 2024ರ ಟಿ20 ವಿಶ್ವಕಪ್‌ನಲ್ಲಿ ಸಂಭಾವ್ಯ ನಾಲ್ಕು ಸೆಮಿಫೈನಲಿಸ್ಟ್‌ಗಳಿಗಾಗಿ ತಮ್ಮ ಆಯ್ಕೆಯನ್ನು ತೆಗೆದುಕೊಂಡರು.
ಎಲ್ಲರೂ ಭಾರತವನ್ನು ತಮ್ಮ ಸಂಭಾವ್ಯ ಸೆಮಿಫೈನಲಿಸ್ಟ್ ತಂಡಗಳಲ್ಲಿ ಒಂದಾಗಿ ಆಯ್ಕೆ ಮಾಡಿದ್ದರೆ, ಮಾಜಿ ಲೆಜೆಂಡ್ ಸುನಿಲ್ ಗವಾಸ್ಕರ್ ಕಳೆದ ಆವೃತ್ತಿಯ ರನ್ನರ್-ಅಪ್ ಪಾಕಿಸ್ತಾನ ತಂಡವನ್ನು ತಮ್ಮ ಸೆಮಿಫೈನಲಿಸ್ಟ್‌ಗಳಿಂದ ಹೊರಗಿಟ್ಟಿದ್ದಾರೆ.
2024ರ ಟಿ20 ವಿಶ್ವಕಪ್‌ನಲ್ಲಿ ಸುನಿಲ್ ಗವಾಸ್ಕರ್ ಅವರ ಸಂಭಾವ್ಯ ನಾಲ್ಕು ಸೆಮಿಫೈನಲ್ ಆಯ್ಕೆಯಲ್ಲಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ತಂಡಗಳನ್ನು ಹೆಸರಿಸಿದ್ದಾರೆ.
ಇನ್ನು ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಅವರು ಭಾರತ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳನ್ನು ಸಂಭಾವ್ಯ ಸೆಮಿಫೈನಲ್‌ಗೆ ಹೆಸರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications