ಸುನಿಲ್ ಗವಾಸ್ಕರ್ ಪ್ರಕಾರ ಟೀಮ್ ಇಂಡಿಯಾ 2019ರ ವಿಶ್ವಕಪ್ ಗೆಲ್ಲೋಲ್ಲ!

ನವದೆಹಲಿ, ಮಾರ್ಚ್ 13: ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪ್ರಕಾರ 2019ರ ಕ್ರಿಕೆಟ್ ವಿಶ್ವಕಪ್ ಅನ್ನು ಇಂಗ್ಲೆಂಡ್ ತಂಡ ಜಯಿಸಲಿದೆ. ಇದಕ್ಕೆ ಗವಾಸ್ಕರ್ ಕುತೂಹಲಕಾರಿ ಕಾರಣ ಕೊಟ್ಟಿದ್ದಾರೆ. ಟೂರ್ನಿಯ ಆತಿಥ್ಯವನ್ನು ಇಂಗ್ಲೆಂಡ್ ವಹಿಸುವುದರಿಂದ ಇಂಗ್ಲೆಂಡ್ ಈ ಬಾರಿ ವಿಶ್ವಕಪ್ ಟ್ರೋಫಿ ಎತ್ತಲಿದೆ ಎಂದಿದ್ದಾರೆ.
ಭಾರತ vs ಆಸ್ಟ್ರೇಲಿಯಾ, 5ನೇ ಏಕದಿನ ಪಂದ್ಯ, Live ಸ್ಕೋರ್‌ಕಾರ್ಡ್
'ನೀವು ಈಚಿನ ಎರಡು ಮೂರು ವಿಶ್ವಕಪ್ ಇತಿಹಾಸ ಗಮನಿಸಿದರೆ, 2011ರ ಟೂರ್ನಿಯ ಆತಿಥ್ಯ ವಹಿಸಿದ್ದ ಭಾರತ ಟ್ರೋಫಿ ಜಯಿಸಿತ್ತು, 2015ರಲ್ಲಿ ಆತೀಥೇಯ ಆಸ್ಟ್ರೇಲಿಯಾ ವರ್ಲ್ಡ್‌ಕಪ್ ಗೆದ್ದಿತ್ತು. ಹೀಗಾಗಿ 2019ರಲ್ಲಿ ಇಂಗ್ಲೆಂಡ್‌ಗೆ ವಿಶ್ವಕಪ್ ಗೆಲ್ಲುವ ಅವಕಾಶ ಹೆಚ್ಚಿದೆ' ಎಂದು ಬ್ರಿಟಿಷ್ ಹೈ ಕಮಿಷನರ್ ನಿವಾಸದಲ್ಲಿದ್ದ ಗವಾಸ್ಕರ್ ಮಂಗಳವಾರ (ಮಾರ್ಚ್ 12) ಅಭಿಪ್ರಾಯಿಸಿದ್ದಾರೆ.
ಗಮನಾರ್ಹ ಸಂಗತಿಯೆಂದರೆ ಸುನಿಲ್ ಗವಾಸ್ಕರ್ ಪಾದಾರ್ಪಣೆ ಮಾಡಿದ್ದು ಮತ್ತು ಕೊನೆಯ ಅಂತಾರಾಷ್ಟ್ರೀಯ ಏಕದಿನ ಪಂದ್ಯ ಆಡಿದ್ದು ಇಂಗ್ಲೆಂಡ್ ವಿರುದ್ಧವೆ. ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಬಾರಿಸಿದ ವಿಶ್ವದ ಮೊದಲ ಆಟಗಾರ ದಾಖಲೆಯೂ ಗವಾಸ್ಕರ್ ಹೆಸರಿನಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications