ಸುನಿಲ್ ಗವಾಸ್ಕರ್ ನೆಚ್ಚಿನ ಟಿ20 ವಿಶ್ವಕಪ್ ತಂಡದಲ್ಲಿ ಶಿಖರ್ ಧವನ್ ಇಲ್ಲ!

ನವದೆಹಲಿ: ಮುಂಬರಲಿರುವ ಟಿ20 ವಿಶ್ವಕಪ್ ಟೂರ್ನಿಗಾಗಿ ಸೆಪ್ಟೆಂಬರ್ 8ರ ಬುಧವಾರ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) 15 ಜನರ ಭಾರತೀಯ ತಂಡ ಪ್ರಕಟಿಸಲಿದೆ. ಇದಕ್ಕೂ ಮುನ್ನ ಭಾರತದ ಕ್ರಿಕೆಟ್ ದಂತಕತೆ ಸುನಿಲ್ ಗವಾಸ್ಕರ್ ಮುಂಬರಲಿರುವ ಟಿ20 ವಿಶ್ವಕಪ್‌ಗಾಗಿ 15 ಜನರ ತಂಡ ಪ್ರಕಟಿಸಿದ್ದಾರೆ. ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಓಮನ್‌ನಲ್ಲಿ ಪ್ರತಿಷ್ಠಿತ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ.
ಸುನಿಲ್ ಗವಾಸ್ಕರ್ ಪ್ರಕಟಿಸಿರುವ ವಿಶ್ವಕಪ್ ತಂಡ ಬಲಿಷ್ಠವಾಗಿದೆ. ತಂಡಕ್ಕೆ ನಾಯಕರಾಗಿ ಎಂದಿನ ನಾಯಕ ವಿರಾಟ್ ಕೊಹ್ಲಿ ಹೆಸರಿಸಲ್ಪಟ್ಟಿದ್ದಾರೆ. ಆದರೆ ಕಳೆದ ಎರಡು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್‌ಗಳಲ್ಲಿ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿದ್ದ ಶಿಖರ್ ಧವನ್ ತಂಡದಲ್ಲಿ ಕಾಣಿಸಿಕೊಂಡಿಲ್ಲ.
ಸುನಿಲ್ ಗವಾಸ್ಕರ್ ತಂಡದಲ್ಲಿ ಯಾರಿಗೆಲ್ಲ ತಂಡದಲ್ಲಿ ಸ್ಥಾನವಿಲ್ಲ?
ಟಿ20 ವಿಶ್ವಕಪ್‌ಗಾಗಿ ಸುನಿಲ್ ಗವಾಸ್ಕರ್ ಪ್ರಕಟಿಸಿರುವ ನೆಚ್ಚಿನ ಭಾರತೀಯ ತಂಡದಲ್ಲಿ ಶಿಖರ್ ಧವನ್ ಅಲ್ಲದೆ ಮತ್ತೊಬ್ಬ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ಶಿಖರ್ ಶ್ರೇಯಸ್ ಐಯ್ಯರ್ ಕೂಡ ಕಾಣಿಸಿಕೊಂಡಿಲ್ಲ. ತವರಿನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆ ಗಾಯಗೊಂಡಿದ್ದ ಐಯ್ಯರ್, ಬಹಳಷ್ಟು ಕಾಲ ಟೀಮ್ ಇಂಡಿಯಾದಿಂದ ಹೊರಗಿದ್ದಾರೆ. ಐಪಿಎಲ್ ಆರಂಭಿಕ ಹಂತದಲ್ಲೂ ಐಯ್ಯರ್ ಆಡಿಲ್ಲ. ಸದ್ಯ ಐಯ್ಯರ್ ಸಂಪೂರ್ಣವಾಗಿ ಚೇತರಿಸಿಕೊಂಡು ಮುಂಬರಲಿರುವ ಐಪಿಎಲ್‌ಗಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ಬಹಳ ಕಾಲ ಪಂದ್ಯ ಆಡದಿರುವುದರಿಂದ ಐಯ್ಯರ್‌ಗೆ ಗವಾಸ್ಕರ್ ತಂಡದಲ್ಲಿ ಸ್ಥಾನ ನೀಡಿಲ್ಲ ಎಂದೆನಿಸುತ್ತೆ.
ಗವಾಸ್ಕರ್ ತಂಡದಲ್ಲಿ ಸ್ಥಾನದಲ್ಲಿ ಯಾರಿಗೆಲ್ಲ ಸ್ಥಾನ?
ಸುನಿಲ್ ಗವಾಸ್ಕರ್ ನೆಚ್ಚಿನ ಟಿ20 ವಿಶ್ವಕಪ್ ತಂಡದಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಾಣಸಿಕೊಂಡಿದ್ದಾರೆ. ಇನ್ನು ವಿಕೆಟ್ ಕೀಪರ್‌ಗಳಾಗಿ ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಇದ್ದಾರೆ. ಇದರಲ್ಲಿ ರಿಷಭ್ ಪ್ರಮುಖ ವಿಕೆಟ್ ಕೀಪರ್ ಆಗಿ ಹೆಸರಿಸಲ್ಪಟ್ಟಿದ್ದಾರೆ. ಆಲ್ ರೌಂಡರ್‌ಗಳಲ್ಲಿ ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಸುಂದರ್ ಫಿಟ್‌ನೆಸ್ ಅನುಸರಿಸಿ ಸ್ಥಾನ ನಿರ್ಧರಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಉಳಿದಂತೆ ಬೌಲರ್‌ಗಳಲ್ಲಿ ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್ ಮೊದಲಾದವರು ತಂಡದಲ್ಲಿದ್ದಾರೆ.
ಟಿ20 ವಿಶ್ವಕಪ್‌ಗೆ ಗವಾಸ್ಕರ್ ನೆಚ್ಚಿನ ಭಾರತೀಯ ತಂಡ
ಅಕ್ಟೋಬರ್ 17ರಂದು ಗ್ರೂಪ್ 'ಬಿ'ಯ ರೌಂಡ್ 1ರಲ್ಲಿ ಆತಿಥೇಯ ಓಮನ್ ಮತ್ತು ಪಪುವಾ ನ್ಯೂಗಿನಿಯಾ ದೇಶಗಳ ನಡುವಿನ ಪಂದ್ಯದೊಂದಿಗೆ ಟೂರ್ನಿ ಆರಂಭಗೊಳ್ಳಲಿದೆ. ಗ್ರೂಪ್ ಬಿಯಲ್ಲಿರುವ ಇನ್ನುಳಿದ ತಂಡಗಳಾದ ಸ್ಕಾಟ್ಲೆಂಡ್ ಮತ್ತು ಬಾಂಗ್ಲಾದೇಶ ಸಂಜೆ ಕಾದಾಡಲಿವೆ. ಗ್ರೂಪ್ 'ಎ'ಯಲ್ಲಿರುವ ಐರ್ಲೆಂಡ್, ನೆದರ್ಲ್ಯಾಂಡ್ಸ್, ಶ್ರೀಲಂಕಾ ಮತ್ತು ನಮೀಬಿಯಾ ತಂಡಗಳು ಮುಂದಿನ ದಿನ ಅಬುಧಾಬಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಸೆಣಸಾಡಲಿವೆ. ಅಕ್ಟೋಬರ್ 24ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಗ್ರೂಪ್ ಹಂತದಲ್ಲಿ ಮುಖಾಮುಖಿಯಾಗಲಿದ್ದು, ಪಂದ್ಯ ಕುತೂಹಲ ಮೂಡಿಸಿದೆ.
ವಿಶ್ವಕಪ್‌ಗೆ ಗವಾಸ್ಕರ್ ನೆಚ್ಚಿನ ಭಾರತ ತಂಡ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ಸಿ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆ), ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ (ಫಿಟ್‌ನೆಸ್‌ಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ), ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್ ಮತ್ತು ಯುಜ್ವೇಂದ್ರ ಚಾಹಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications