ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯಕ್ಕೆ ಸಿದ್ಧತೆ ಆರಂಭವಾಗಿವೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಹಿನ್ನಡೆ ಅನುಭವಿಸಿದೆ. ಈಗ ಎಲ್ಲರ ಚಿತ್ತ ಪುಣೆಯತ್ತ ಕೇಂದ್ರಿ ಕೃತವಾಗಿದೆ. ಈ ಟೆಸ್ಟ್‌ಗೂ ಮುನ್ನ ಟೀಮ್ ಇಂಡಿಯಾದ ಆಟಗಾರರ ಬಗ್ಗೆ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ದೊಡ್ಡ ಹೇಳಿಕೆ ನೀಡಿದ್ದಾರೆ.
ಯುವ ಆಟಗಾರರ ಆಟವನ್ನು ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಕೊಂಡಾಡಿದ್ದಾರೆ. ಬೆಂಗಳೂರು ಟೆಸ್ಟ್ ಪಂದ್ಯ ಎರಡನೇ ಇನಿಂಗ್ಸ್‌ನಲ್ಲಿ ಭಾರತದ ಪರ ಸರ್ಫರಾಜ್ ಖಾನ್ 150 ರನ್ ಸಿಡಿಸಿ ತಂಡಕ್ಕೆ ಆಧಾರವಾಗಿದ್ದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಸಹ ಈ ಪಂದ್ಯದಲ್ಲಿ 99 ರನ್ ಸಿಡಿಸಿದ್ದರು. ಇವರಿಬ್ಬರ ಆಟವನ್ನು ಸುನಿಲ್ ಗವಾಸ್ಕರ್ ಕೊಂಡಾಡಿದ್ದಾರೆ.

ಕೆಲವು ಆಟಗಾರರು ದೈಹಿಕವಾಗಿ ಫಿಟ್ ಆಗಿ ಕಾಣದಿದ್ದರೂ ಈ ಆಟದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಸರ್ಫರಾಜ್ ಖಾನ್ ಮತ್ತು ರಿಷಬ್ ಪಂತ್ ಇದಕ್ಕೆ ದೊಡ್ಡ ಉದಾಹರಣೆ ಎಂದು ಸಾಬೀತು ಪಡಿಸಿದ್ದಾರೆ. ಇವರಿಬ್ಬರೂ ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ಬಿಗ್ ಇನ್ನಿಂಗ್ಸ್ ಕಟ್ಟಿದ್ದರು. ಇವರ ಆಟವನ್ನು ಕಂಡು ತಮ್ಮ ಪೆನ್ನಿಗೆ ಕೆಲಸ ನಿಡಿದ್ದಾರೆ.
ಸೋಮವಾರ ಸ್ಪೋರ್ಟ್‌ಸ್ಟಾರ್‌ಗಾಗಿ ಬರೆದ ತಮ್ಮ ಅಂಕಣದಲ್ಲಿ ಗವಾಸ್ಕರ್, 'ಆಟಗಾರನ ಕ್ಷಮತೆ ಆಟಕ್ಕೆ ಮುಖ್ಯ. ಆಟಗಾರರ ಫಿಟ್ನೆಸ್ ಹಾಗೂ ದೈಹಿಕ ಕ್ಷಮತೆ ಕೆಲವೊಮ್ಮೆ ಮರೆ ಮಾಚಿ ಬಿಡುತ್ತದೆ. ಬೆಂಗಳೂರಿನಲ್ಲಿ ಸರ್ಫರಾಜ್ ಖಾನ್ ಆಡಿರುವ ಧಾಟಿ ಅವರ ದೈಹಿಕ ಫಿಟ್ನೆಸ್ ಬಗ್ಗೆ ಯೋಚಿಸುವಂತೆ ಮಾಡಿದೆ. ಒತ್ತಡದ ಸನ್ನಿವೇಶದಲ್ಲಿ ಸರ್ಫರಾಜ್ ಅಮೋಘ ಬ್ಯಾಟ್ ಮಾಡಿದರು. ಇವರು ದೊಡ್ಡ ಸೊಂಟವನ್ನು ಹೊಂದಿದ್ದರೂ ಸಹ ತಮ್ಮ ಆಟದಿಂದ ಪ್ರಭಾವ ಬೀರಿದ್ದಾರೆ ಎಂದಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಅಬ್ಬರಿಸಿದ ಇನ್ನೊರ್ವ ಆಟಗಾರ ರಿಷಭ್ ಪಂತ್. ಫಿಟ್ನೆಸ್ ತಜ್ಷರು ಹೇಳುವಂತೆ ಇವರ ಸೊಂಟವೂ ತೆಳಗ್ಗೆ ಇಲ್ಲ. ಆದರೆ ಇವರು ತಮ್ಮ ಆಟದ ಪ್ರಭಾವದಿಂದ ತಂಡಕ್ಕೆ ಆಧಾರವಾಗಿದ್ದಾರೆ. ಇವರು ದಿನವೀಡಿ ವಿಕೆಟ್‌ಗೆ ಕಚ್ಚಿನಿಂತು ಬ್ಯಾಟ್ ಮಾಡಿದ್ದಾರೆ ಎಂಬುದನ್ನು ನಾವೆಲ್ಲಾ ಮರೆಯಬಾರದು. ಹೀಗಾಗಿ ಯೋ-ಯೋ ಟೆಸ್ಟ್ ನಿರ್ಲಕ್ಷಿಸಿ ಆಟಗಾರನ ಮಾನಸಿಕವಾಗಿ ಎಷ್ಟು ಬಲಶಾಲಿ ಎಂಬುದನ್ನು ನೋಡಿ ಸ್ಥಾನ ನೀಡಬೇಕು. ಇದು ಆಟಗಾರನ ಫಿಟ್‌ನೆಸ್‌ನ ನಿಜವಾದ ಸೂಚಕವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಒಬ್ಬ ಪ್ಲೇಯರ್ ದಿನವಿಡಿ ಬ್ಯಾಟಿಂಗ್ ಮಾಡಿ ಇಲ್ಲಾ, 20ಕ್ಕೂ ಹೆಚ್ಚು ಓವರ್‌ಗಳನ್ನು ಬೌಲ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದರೆ, ಅವರ ಸೊಂಟ ಹೇಗಿದ್ದರೂ ಆಡುವ ಅರ್ಹತೆ ಆತನಗಿದೆ ಎಂದು ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.